ಮಹಾತ್ಮಾ ಗಾಂಧಿ, ಭಗತ್ ಸಿಂಗ್ ಭಾರತೀಯ ವಿದ್ಯಾರ್ಥಿಗಳ ನೆಚ್ಚಿನ ರಾಷ್ಟ್ರನಾಯಕರು: ಸಮೀಕ್ಷೆ

ನವದೆಹಲಿ: ಈ ಆಗಸ್ಟ್ 15ರಂದು ಭಾರತವು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ 7೬ನೇ ವರ್ಷಕ್ಕೆ ಕಾಲಿಟ್ಟಿತು. ಸಂಭ್ರಮದ ಆಚರಣೆಗಳಿಂದ ತುಂಬಿದ ಈ ದಿನವನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಧೀರ ಹಾಗೂ ತ್ಯಾಗದ ಸಂಕೇತವಾಗಿ ಗುರುತಿಸಲಾಗಿದೆ.
75ನೇ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಸಂದರ್ಭದಲ್ಲಿ, 5.5 ಕೋಟಿಗೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಬಳಕೆದಾರರ ನೆಲೆಯನ್ನು ಹೊಂದಿರುವ ಬ್ರೈನ್ಲಿ ಆನ್‌ಲೈನ್ ಕಲಿಕಾ ವೇದಿಕೆಯು ಮಧ್ಯಮ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಭಾರತದ ಸಾಂಪ್ರದಾಯಿಕ ಇತಿಹಾಸ ಮತ್ತು ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿದ್ಯಾರ್ಥಿಗಳ ಅರಿವಿನ ಬಗ್ಗೆ ತಿಳಿದುಕೊಳ್ಳಲು ಸಮೀಕ್ಷೆಯನ್ನು ನಡೆಸಿತು.
ಸಮೀಕ್ಷೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು 41%ರಷ್ಟು ಮತಗಳನ್ನು ಗಳಿಸುವ ಮೂಲಕ ಅತ್ಯಂತ ನೆಚ್ಚಿನ ಮತ್ತು ಸ್ಫೂರ್ತಿದಾಯಕ ರಾಷ್ಟ್ರೀಯ ಐಕಾನ್ ಆಗಿದ್ದಾರೆ. ಭಾರತೀಯ ಇತಿಹಾಸದಲ್ಲಿ ಗಮನಾರ್ಹ ಅಧ್ಯಾಯವಾಗಿ ಉಳಿದಿರುವ ಗಾಂಧೀಜಿ ತಮ್ಮ ಅಹಿಂಸೆ ತತ್ವ ಮತ್ತು ಬಲವಾದ ನಾಯಕತ್ವಕ್ಕಾಗಿ ಪ್ರಶಂಸಿಸಲ್ಪಟ್ಟಿದ್ದಾರೆ. ಯುವ ಕ್ರಾಂತಿಕಾರಿ ಭಗತ್ ಸಿಂಗ್ 32%ರಷ್ಟು ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಸಮೀಕ್ಷೆ ಏಕೆ ನಡೆಸಲಾಯಿತು?
“ಬ್ರೈನ್ಲಿ ಸಮೀಕ್ಷೆಯು ಇಂದು ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಸ್ತುತತೆಯನ್ನು ಅಳೆಯುವ ಮತ್ತು ಎಲ್ಲವನ್ನೂ ಧೈರ್ಯದಿಂದ ಎದುರಿಸಿದವರ ಬಗ್ಗೆ ವಿದ್ಯಾರ್ಥಿಗಳ ಅರಿವು ಹೇಗಿದೆ ಎಂದು ನೋಡುವ ಪ್ರಯತ್ನವಾಗಿದೆ ಎಂದು ಬ್ರೈನ್ಲಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ನರಸಿಂಹ ಜಯಕುಮಾರ್ ಹೇಳಿದರು.
ನಮ್ಮ ಸಂಶೋಧನೆಯು ವಿದ್ಯಾರ್ಥಿಗಳು ನಮ್ಮ ಇತಿಹಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದಾರೆಂದು ತೋರಿಸುತ್ತದೆ ಆದರೆ ಮಾಹಿತಿ ವಿತರಣೆಯಲ್ಲಿ ಅಂತರಗಳಿವೆ, ಅದನ್ನು ಇನ್ನಷ್ಟು ಉತ್ತಮವಾಗಿ ತಿಳಿಸಬೇಕಾಗಿದೆ” ಎಂದು ಜಯಕುಮಾರ್ ಹೇಳಿದರು.
“ಇಂದು, ಭಾರತವು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 55 ಕೋಟಿ ಜನರಿಗೆ ನೆಲೆಯಾಗಿದೆ, ಇದು ವಿಶ್ವದಾದ್ಯಂತ ಯುವ ಜನಸಂಖ್ಯೆಯ ಅತಿ ಹೆಚ್ಚು ಸಂಖ್ಯೆಯಾಗಿದೆ. ಅವರು ಈ ರಾಷ್ಟ್ರವನ್ನು ನಿರ್ಮಿಸಲು ಮಾಡಿದ ತ್ಯಾಗ ಮಾಡಿದವರ ಬಗ್ಗೆ ಮತ್ತು ನಾಗರಿಕರಾಗಿ ನಾಮ್ಮ ಹಕ್ಕುಗಳ ಬಗ್ಗೆ ತಿಳಿದಿರಬೇಕು ಎಂದು ಜಯಕುಮಾರ್ ಹೇಳಿದರು.

ಪ್ರಮುಖ ಸುದ್ದಿ :-   ಉಗ್ರರ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಹುತಾತ್ಮ, 5 ಮಂದಿಗೆ ಗಾಯ

ಸಮೀಕ್ಷೆಯ ಮುಖ್ಯಾಂಶಗಳು
*59% ವಿದ್ಯಾರ್ಥಿಗಳು ಸ್ವಾತಂತ್ರ್ಯದ 75 ನೇ ವರ್ಷದ ಬಗ್ಗೆ ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ.
*50% ವಿದ್ಯಾರ್ಥಿಗಳು ಶಾಲೆಗಳೇ ತಮಗೆ ಇಂತಹ ಜ್ಞಾನಕ್ಕೆ ಪ್ರಾಥಮಿಕ ಮೂಲವಾಗಿದೆ ಎಂದು ಪ್ರತಿಪಾದಿಸಿದ್ದಾರೆ. 17% ಆನ್‌ಲೈನ್ ಸರ್ಚ್‌ ಇಂತಹ ಜ್ಞಾನಕ್ಕೆ ಕಾರಣವಾಯಿತು ಎಂದು ಹೇಳಿದರೆ ಕೇವಲ 13%ರಷ್ಟು ವಿದ್ಯಾರ್ಥಿಗಳು ಮನೆ ಅಥವಾ ಅವರ ಪೋಷಕರಿಂದ ಕಲಿತಿರುವುದಾಗಿ ಹೇಳಿದ್ದಾರೆ.

*ಮಹಾತ್ಮ ಗಾಂಧಿಯವರ ‘ಮಾಡು ಇಲ್ಲವೇ ಮಡಿ’ ಎಂಬುದು ಭಾರತದ ಸ್ವಾತಂತ್ರ್ಯ ಹೋರಾಟವನ್ನು ವ್ಯಾಖ್ಯಾನಿಸಿದ ಜನಪ್ರಿಯ ಯುದ್ಧದ ಕೂಗು. ಅವರು ಅದನ್ನು ರೂಪಿಸಿದ ಬಂಡಾಯದ ಬಗ್ಗೆ ಕೇಳಿದಾಗ, 50% ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕ್ವಿಟ್ ಇಂಡಿಯಾ ಚಳುವಳಿಗೆ ಎಂದು ಸರಿಯಾಗಿ ಹೇಳಿದ್ದಾರೆ.

*47% ವಿದ್ಯಾರ್ಥಿಗಳು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಧೈರ್ಯ ಮತ್ತು ನಿರ್ಭಯತೆಗಾಗಿ ‘ಭಾರತದ ಉಕ್ಕಿನ ಮನುಷ್ಯ’ ಎಂದು ಕರೆಯುತ್ತಾರೆ ಎಂದು ಸರಿಯಾಗಿ ಹೇಳಿದ್ದಾರೆ.

*89% ಜನರು ಭಾರತ ಮತ್ತು ಅದರ ಸ್ವಾತಂತ್ರ್ಯ ಚಳುವಳಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ.

ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮೂಲಭೂತ ಹಕ್ಕುಗಳ ಬಗ್ಗೆ ಅರಿವಿನ ಕೊರತೆ
ಆದಾಗ್ಯೂ, ಬ್ರೈನ್ಲಿ ಸಮೀಕ್ಷೆಯು ಭಾರತದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸಂವಿಧಾನದ ಬಗ್ಗೆ ಸೀಮಿತ ಅರಿವನ್ನು ಬಹಿರಂಗಪಡಿಸಿದೆ. ಕೇವಲ 22% ವಿದ್ಯಾರ್ಥಿಗಳಿಗೆ ಮಾತ್ರ ಮಾತಂಗನಿ ಹಜ್ರಾ ಅವರ ಬಗ್ಗೆ ತಿಳಿದಿತ್ತು, ಅವರ ನೆನಪಿಗಾಗಿ ಕೋಲ್ಕತ್ತಾದಲ್ಲಿ ಮೊದಲ ಮಹಿಳಾ ಕ್ರಾಂತಿಕಾರಿ ಪ್ರತಿಮೆಯನ್ನು ನಿರ್ಮಿಸಲಾಯಿತು.
ಅಲ್ಲದೆ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಕ್ರಮದಲ್ಲಿ ಭಾರತೀಯ ನಾಗರಿಕರಿಗೆ ನಿಗದಿಪಡಿಸಿದ ಮೂಲಭೂತ ಹಕ್ಕುಗಳ ಬಗ್ಗೆ 40% ಕ್ಕಿಂತ ಕಡಿಮೆ ಜನರು ಸರಿಯಾಗಿ ಹೇಳಿದ್ದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement