ನವದೆಹಲಿ : ಹಮ್ ಹೇ ರಾಹಿ ಪ್ಯಾರ್ ಕೆ ಮತ್ತು ವೆಲ್‌ಕಮ್ ಚಿತ್ರಗಳ ನಟನೆಗೆ ಹೆಸರಾದ ಚಲನಚಿತ್ರ ನಟ ಮುಷ್ತಾಕ್ ಖಾನ್ ಅವರನ್ನು ಅಪಹರಿಸಿ, ಗಂಟೆಗಟ್ಟಲೆ ಚಿತ್ರಹಿಂಸೆ ನೀಡಿ ₹ 2 ಲಕ್ಷ ನೀಡುವಂತೆ ಒತ್ತಾಯಿಸಿ ನಂತರ ದುಷ್ಕರ್ಮಿಗಳು ಪರಾರಿಯಾದ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ನವೆಂಬರ್ 20 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ದೂರಿನ ಪ್ರಕಾರ, ಖಾನ್ ಅವರು ನವೆಂಬರ್ 15 ರಂದು ತಮ್ಮ ಮುಂಬೈ ಮನೆಗೆ ರಾಹುಲ್ ಸೈನಿ ಎಂಬವರಿಂದ ಬಂದ್ ಫೋನ್ ಕರೆ ಸ್ವೀಕರಿಸಿದ್ದಾರೆ. ಕರೆ ಮಾಡಿದವರು ಅವರನ್ನು ಮೀರತ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಿದರು, ಅಲ್ಲಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಲಾಯಿತು.
ಸಮಾರಂಭದಲ್ಲಿ ಭಾಗವಹಿಸಿದರೆ ಅದಕ್ಕಾಗಿ ನಟ ಖಾನ್ ಅವರಿಗೆ ಹಣ ನೀಡುವುದಾಗಿ ರಾಹುಲ್ ಸೈನಿ ಭರವಸೆ ನೀಡಿದ್ದ. ತಕ್ಷಣವೇ ಯುಪಿಐ ಮೂಲಕ ₹ 25,000 ವರ್ಗಾವಣೆ ಮಾಡಿ ಉಳಿದ ಹಣವನ್ನು ನಂತರ ನೀಡುವುದಾಗಿ ಹೇಳಿದ್ದ. ಕರೆ ಮಾಡಿದ ವ್ಯಕ್ತಿ ಮುಂಬೈನಿಂದ ದೆಹಲಿಗೆ ವಿಮಾನ ಟಿಕೆಟ್ ಕೂಡ ಕಳುಹಿಸಿದ್ದಾನೆ. ನವೆಂಬರ್ 20 ರಂದು, ಖಾನ್ ದೆಹಲಿಗೆ ಬಂದಿಳಿದ ಮತ್ತು ರಾಹುಲ್ ಸೈನಿ ಕಳುಹಿಸಿದ ಕ್ಯಾಬ್ ಅನ್ನು ಹತ್ತಿದ್ದಾರೆ. ಚಾಲಕನ ಜೊತೆಗೆ ಮತ್ತೊಬ್ಬ ವ್ಯಕ್ತಿ ಕಾರಿನಲ್ಲಿದ್ದ. ಕಾರು ಸ್ವಲ್ಪ ಹೊತ್ತಿನಲ್ಲೇ ಒಂದು ಕಡೆ ನಂತಿತು. ಮತ್ತು ನಟನನ್ನು ಮತ್ತೊಂದು ವಾಹನಕ್ಕೆ ಹತ್ತಲು ಸೂಚಿಸಲಾಯಿತು. ದೂರಿನ ಪ್ರಕಾರ, ಅದೇ ವ್ಯಕ್ತಿ ಈ ಕಾರನ್ನು ಓಡಿಸಿದ ಮತ್ತು ಖಾನ್ ಜೊತೆ ಇತರ ಇಬ್ಬರು ಕುಳಿತಿದ್ದರು. ಮತ್ತೆ ಕಾರು ನಿಲ್ಲಿಸಲಾಯಿತು. ನಂತರ ಇನ್ನಿಬ್ಬರು ಹತ್ತಿದರು.
ಆಗ, ಖಾನ್ ಅವರಿಗೆ ಅನುಮಾನ ಬಂದು ಇದನ್ನು ಅವರು ಅವರು ಪ್ರತಿಭಟಿಸಿದರು. ನಂತರ ಪುರುಷರು ಅವರ ಮುಖದ ಮೇಲೆ ಪೇಪರ್ ಹಾಕಿ ಮುಚ್ಚಿದರು. ಮತ್ತು ತಲೆ ಬಗ್ಗಿಸಿ ಕೂರುವಂತೆ ಸೂಚಿಸಲಾಯಿತು. ಸುಮಾರು ಮೂರು-ನಾಲ್ಕು ಗಂಟೆಗಳ ಪ್ರಯಾಣದ ನಂತರ ಅವರು ಒಂದು ಮನೆಯನ್ನು ತಲುಪಿದರು. ಅಲ್ಲಿ ಅಪಹರಣಕಾರರು ಅವರಿಗೆ ಚಿತ್ರಹಿಂಸೆ ನೀಡಿ ಕುಟುಂಬಕ್ಕೆ ಕರೆ ಮಾಡಿ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಒತ್ತಡ ಹಾಕಿದ್ದಾರೆ. ಅಪಹರಣಕಾರರು ಖಾನ್ ಅವರ ಫೋನ್ ತೆಗೆದುಕೊಂಡು ಸುಮಾರು ₹ 2 ಲಕ್ಷವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡರು.
ನಂತರ ಅಪಹರಣಕಾರರು ಮದ್ಯಪಾನ ಮಾಡಲು ಪ್ರಾರಂಭಿಸಿದರು ಮತ್ತು ಕುಡಿದ್ದು ಹೆಚ್ಚಾಗಿ ಮುಂಜಾನೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದಾಗ ನಟ ಖಾನ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವರು ಹತ್ತಿರದ ಮಸೀದಿಗೆ ಧಾವಿಸಿದರು ಮತ್ತು ಅಲ್ಲಿನ ಧರ್ಮಗುರುಗಳು ಅವರಿಗೆ ತಮ್ಮ ಕುಟುಂಬವನ್ನು ಸಂಪರ್ಕಿಸಲು ಸಹಾಯ ಮಾಡಿದರು. ಖಾನ್ ಅವರ ಮ್ಯಾನೇಜರ್ ಸಲ್ಲಿಸಿದ ದೂರಿನಲ್ಲಿ ಖಾನ್ ತುಂಬಾ ಅಸ್ವಸ್ಥರಾಗಿದ್ದಾರೆ ಮತ್ತು ದೂರು ನೀಡಲು ತಮಗೆ ಸೂಚಿಸಿದ್ದಾರೆ ಎಂದು ಹೇಳಿದರು. ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಸುನಿಲ ಪಾಲ್ ಅಪಹರಣಕ್ಕೆ ಸಂಪರ್ಕ?
ಹಾಸ್ಯನಟ ಸುನೀಲ ಪಾಲ್ ಅವರ ಅಪಹರಣದ ಬಗ್ಗೆ ನಗರದ ಪೊಲೀಸರು ತನಿಖೆ ನಡೆಸುತ್ತಿರುವ ಸಮಯದಲ್ಲಿ ಮೀರತ್‌ನಲ್ಲಿ ಅಪಹರಣದ ದುಃಸ್ವಪ್ನದ ಕುರಿತು ಮುಷ್ತಾಕ್ ಖಾನ್ ಅವರ ದೂರು ಬಂದಿದೆ. ಪಾಲ್ ಅವರು ಕಾರ್ಯಕ್ರಮವೊಂದಕ್ಕೆ ಉತ್ತರಾಖಂಡಕ್ಕೆ ಪ್ರಯಾಣಿಸಿದ್ದರು ಮತ್ತು ಹಿಂದಿರುಗುವ ಮಾರ್ಗದಲ್ಲಿ ಅಪಹರಣಕ್ಕೊಳಗಾಗಿದ್ದರು. ನಂತರ ಅವರನ್ನು ಮೀರತ್‌ನಲ್ಲಿ ಬಿಡುಗಡೆ ಮಾಡಲಾಯಿತು.
“ಉತ್ತರಾಖಂಡ್‌ಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಅಪಹರಣ ಮಾಡಲಾಗಿದೆ ಎಂದು ಅವರು (ಪಾಲ್) ಹೇಳಿಕೊಂಡಿದ್ದಾರೆ. ದಾರಿಯಲ್ಲಿ ತಿಂಡಿ ತಿನ್ನಲು ನಿಂತಾಗ ಅಭಿಮಾನಿ ಎಂದು ಹೇಳೊಕೊಂಡ ಒಬ್ಬ ತನ್ನನ್ನು ಕಾರಿಗೆ ತಳ್ಳಿದ್ದಾನೆ. ನಂತರ ಅಪಹರಿಸಿ ತನ್ನ ಬಳಿ ₹ 20 ಲಕ್ಷ ಕೇಳಿದ್ದಾರೆ ಎಂದು ಪಾಲ್ ಹೇಳಿದ್ದಾರೆ. ಅವರು ತಮ್ಮ ಸ್ನೇಹಿತರಿಗೆ ಅಒಹರಣಕಾರರಿಗೆ ₹ 8 ಲಕ್ಷವನ್ನು ಪಾವತಿಸಿದ ನಂತರ ಅವರು ತನ್ನನ್ನು ಬಿಡುಗಡೆ ಮಾಡಿದರು ಎಂದು ಹಾಸ್ಯನಟ ಪಾಲ್ ದೂರು ನೀಡಿದ್ದಾರೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಎರಡು ಅಪಹರಣಗಳ ನಡುವೆ ಸಂಬಂಧವಿದೆಯೇ ಎಂದು ಮೀರತ್ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ