ಮುಂಬೈ: ಥಾಣೆ ಆಸ್ಪತ್ರೆಯಲ್ಲಿ 24 ತಾಸಿನಲ್ಲಿ 18 ಸಾವು ; ತನಿಖೆಗೆ ಆದೇಶ

ಮುಂಬೈ : ಮಹಾರಾಷ್ಟ್ರದ ಥಾಣೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ ಹದಿನೆಂಟು ರೋಗಿಗಳು ಸಾವಿಗೀಡಾಗಿದ್ದಾರೆ.
ಮೃತರಲ್ಲಿ ಹತ್ತು ಮಹಿಳೆಯರು ಮತ್ತು ಎಂಟು ಪುರುಷರು ಸೇರಿದ್ದಾರೆ.ಆರು ಮಂದಿ ಥಾಣೆ ನಗರದವರು, ನಾಲ್ವರು ಕಲ್ಯಾಣ, ಮೂವರು ಸಹಾಪುರ, ಭಿವಂಡಿ, ಉಲ್ಲಾಸನಗರ, ಗೋವಂಡಿ (ಮುಂಬೈನಲ್ಲಿ) ತಲಾ ಒಬ್ಬರು, ಹಾಗೂ ಇಬ್ಬರನ್ನು ಇನ್ನೂ ಗುರುತಿಸಬೇಕಾಗಿದೆ ಎಂದು ಪೌರಾಯುಕ್ತ ಅಭಿಜಿತ ಬಂಗಾರ ತಿಳಿಸಿದ್ದಾರೆ.
ಮೃತರಲ್ಲಿ 12 ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರು. ಸ್ವತಂತ್ರ ತನಿಖಾ ಸಮಿತಿ ರಚನೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಆದೇಶ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಆರೋಗ್ಯ ಸೇವೆಗಳ ಆಯುಕ್ತರ ನೇತೃತ್ವದ ಸಮಿತಿಯು ಈ ಸಾವುಗಳ ಸುತ್ತಲಿನ ಕ್ಲಿನಿಕಲ್ ಅಂಶಗಳನ್ನು ತನಿಖೆ ಮಾಡಲು ಕೇಂದ್ರೀಕರಿಸುತ್ತದೆ. ಮೃತ ರೋಗಿಗಳು ಮೂತ್ರಪಿಂಡದ ಕಲ್ಲುಗಳು, ದೀರ್ಘಕಾಲದ ಪಾರ್ಶ್ವವಾಯು, ಹುಣ್ಣುಗಳು, ನ್ಯುಮೋನಿಯಾ, ಸೀಮೆಎಣ್ಣೆ ವಿಷ, ಸೆಪ್ಟಿಸೆಮಿಯಾದಿಂದ ಹಿಡಿದು ವಿವಿಧ ವೈದ್ಯಕೀಯ ತೊಡಕುಗಳನ್ನು ಎದುರಿಸುತ್ತಿದ್ದರು ಎಂದು ಹೇಳಿದರು. ಚಿಕಿತ್ಸೆಯ ವಿಧಾನವನ್ನು ತನಿಖೆ ಮಾಡಲಾಗುತ್ತದೆ ಮತ್ತು ಮೃತರ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಲಾಗುತ್ತದೆ. ಕೆಲವು ಸಂಬಂಧಿಕರಿಂದ ನಿರ್ಲಕ್ಷ್ಯದ ಆರೋಪಗಳು ಕೇಳಿಬಂದಿದ್ದು, ತನಿಖಾ ಸಮಿತಿಯು ಇದನ್ನು ಪರಿಶೀಲಿಸುತ್ತದೆ” ಎಂದು ಎಂದು ತಿಳಿಸಿದ್ದಾರೆ.
ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ದಾಖಲೆಗಳ ಆಳವಾದ ಪರಿಶೀಲನೆ ಸೇರಿದಂತೆ ಪರಿಸ್ಥಿತಿಯನ್ನು ವಿಶ್ಲೇಷಿಸಲು ಆಸ್ಪತ್ರೆಗೆ ಅಧಿಕಾರಿಗಳನ್ನು ಕಳುಹಿಸಿದೆ.
ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಗಣೇಶ ಗಾವಡೆ ಮಾತನಾಡಿ, ಕೆಲವು ರೋಗಿಗಳು ಚಿಂತಾಜನಕ ಹಂತದಲ್ಲಿದ್ದು ಚಿಕಿತ್ಸೆ ವೇಳೆ ಸಾವಿಗೀಡಾದ್ದಾರೆ. ಕೆಲವರು ವಯೋವೃದ್ಧರಿದ್ದರು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಆಸ್ಪತ್ರೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ.
ಆಸ್ಪತ್ರೆಗೆ ಭೇಟಿ ನೀಡಿದ್ದ ರಾಜ್ಯ ಸಚಿವೆ ಅದಿತಿ ತತ್ಕರೆ ಅವರು ರೋಗಿಗಳ ಸಾವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಇಂತಹ ದುರಂತ ಘಟನೆ ಮರುಕಳಿಸದಂತೆ ಮಹಾರಾಷ್ಟ್ರ ಸರ್ಕಾರ ಸಮಗ್ರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement