ತ್ವಿಶಾ ಶರ್ಮಾ ಸಾವು : ಅತ್ತೆ-ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್‌ ಬಂಧಿಸಿದ ಸಿಬಿಐ

ಭೋಪಾಲ್‌ : ತ್ವಿಶಾ ಶರ್ಮಾ ಸಾವಿನ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಸಿಬಿಐ (CBI) ಅಧಿಕಾರಿಗಳು,ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ತ್ವಿಶಾ ಅತ್ತೆ ಗಿರಿಬಾಲಾ ಸಿಂಗ್ ಅವರನ್ನು ಭೋಪಾಲ್‌ನಲ್ಲಿ ಗುರುವಾರ ಬಂಧಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಟ್ವಿಶಾ ಶರ್ಮಾ ಅವರು ತಮ್ಮ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಗಿರಿಬಾಲಾ ಸಿಂಗ್ ಅವರಿಗೆ ಮೇ 15 ರಂದು ಭೋಪಾಲ್‌ನ 10ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ನಿರೀಕ್ಷಣಾ ಜಾಮೀನನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ ಈ ಬಂಧನ ನಡೆದಿದೆ.
ಪ್ರಕರಣದ ಕುರಿತು ಮಾತನಾಡಿರುವ ಮಧ್ಯಪ್ರದೇಶದ ಅಡ್ವೊಕೇಟ್ ಜನರಲ್ ಪ್ರಶಾಂತ ಸಿಂಗ್, “ತ್ವಿಶಾ ಶರ್ಮಾ ಅವರ ದೇಹದ ಮೇಲೆ ಸಾವಿಗೆ ಮುನ್ನ ಸಂಭವಿಸಿದ 7 ಗಾಯಗಳಿರುವುದು ಗಂಭೀರ ಅಪರಾಧದ ಕಡೆಗೆ ಬೆರಳು ಮಾಡುತ್ತದೆ. ಸಿಬಿಐ ನೀಡಿದ ಹಲವು ನೋಟಿಸ್‌ಗಳಿಗೆ ಗಿರಿಬಾಲಾ ಸಿಂಗ್ ಸಹಕರಿಸಿಲ್ಲ ಮತ್ತು ವಾಟ್ಸಾಪ್ ಚಾಟ್‌ಗಳು ಟ್ವಿಶಾಗೆ ನೀಡಲಾದ ಮಾನಸಿಕ ಕಿರುಕುಳ ಮೊದಲಾದ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ಗಿರಿಬಾಲಾ ಅವರ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿದೆ. ಈಗ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕೇ ಬೇಡವೇ ಎಂಬುದನ್ನು ಸಿಬಿಐ ನಿರ್ಧರಿಸಲಿದೆ,” ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

ನ್ಯಾಯಾಲಯದ ವಿಚಾರಣೆ ವೇಳೆ ತ್ವಿಶಾ ಶರ್ಮಾ ಅವರ ಪರ ವಕೀಲರು ವಾದ ಮಂಡಿಸಿ, ಸಂತ್ರಸ್ತೆಗೆ ತೀವ್ರ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಮತ್ತು ಆಕೆ ತನ್ನ ಗಂಡನ ಮನೆಯಲ್ಲಿ “ಬೆದರಿಕೆ ಮತ್ತು ಸಂಕಷ್ಟಕ್ಕೆ” ಸಿಲುಕಿಕೊಂಡಿದ್ದರು ಎಂದು ಆರೋಪಿಸಿದ್ದಾರೆ. ತನಿಖೆಯ ಮೊದಲ ದಿನದಿಂದಲೂ ತ್ವಿಶಾ ಅವರ ಪೋಷಕರು ಮತ್ತು ಸಂಬಂಧಿಕರು ನೀಡಿದ ಹೇಳಿಕೆಗಳಲ್ಲಿ ಸಮರ್ಥ ಸಿಂಗ್ ಮತ್ತು ಗಿರಿಬಾಲಾ ಸಿಂಗ್ ವಿರುದ್ಧ ಕಿರುಕುಳದ ನಿರಂತರ ಆರೋಪಗಳು ಕೇಳಿಬಂದಿರುವುದನ್ನು ಹೈಕೋರ್ಟ್ ಗಮನಿಸಿದೆ.
ಸಾಕ್ಷ್ಯ ನಾಶದ ಆತಂಕ
ನಿವೃತ್ತ ನ್ಯಾಯಾಂಗ ಅಧಿಕಾರಿಯಾಗಿರುವ ಗಿರಿಬಾಲಾ ಸಿಂಗ್ ಅವರು ಸೈಬರ್ ಅಪರಾಧ, ಸೈಬರ್ ಫೋರೆನ್ಸಿಕ್ಸ್ ಮತ್ತು ಅಪರಾಧ ಸ್ಥಳದ ನಿರ್ವಹಣೆಯಲ್ಲಿ (Crime Scene Management) ತರಬೇತಿ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಪರಿಣತಿಯನ್ನು ಬಳಸಿ ಸಾಕ್ಷ್ಯಗಳನ್ನು ನಾಶಪಡಿಸಿರಬಹುದು ಮತ್ತು ತನಿಖೆಯ ದಿಕ್ಕನ್ನು ಬದಲಿಸಲು ಯತ್ನಿಸಿರಬಹುದು ಎಂಬ ಆರೋಪಗಳನ್ನೂ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಸಿಬಿಐ ಹೆಜ್ಜೆಗೆ ಸಿಕ್ಕಿದ ಯಶಸ್ಸು
ಕಳೆದ ವಾರವಷ್ಟೇ, ಗಿರಿಬಾಲಾ ಅವರ ಪುತ್ರ ಹಾಗೂ ತ್ವಿಶಾ ಪತಿ ಸಮರ್ಥ ಸಿಂಗ್ 10 ದಿನಗಳ ಕಾಲ ತಲೆಮರೆಸಿಕೊಂಡ ನಂತರ ನ್ಯಾಯಾಲಯಕ್ಕೆ ಶರಣಾಗಿದ್ದರು. ನಿವೃತ್ತ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ಮತ್ತು ವಕೀಲರಾಗಿರುವ ಅವರ ಪುತ್ರ ಸಮರ್ಥ್ ಇಬ್ಬರೂ ವರದಕ್ಷಿಣೆ ಕಿರುಕುಳದ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಮೇ 12 ರಂದು ನಡೆದ ತ್ವಿಶಾ ಶರ್ಮಾ ಅವರ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಸೋಮವಾರವಷ್ಟೇ ಔಪಚಾರಿಕವಾಗಿ ತನ್ನ ಕೈಗೆತ್ತಿಕೊಂಡಿತ್ತು. ರಾಜ್ಯ ಪೊಲೀಸರು ಸಮರ್ಥ ಸಿಂಗ್ ಮತ್ತು ಗಿರಿಬಾಲಾ ಸಿಂಗ್ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಅನ್ನು (FIR) ಸಿಬಿಐ ಮರು-ದಾಖಲು ಮಾಡಿಕೊಂಡಿದೆ. ಸಿಬಿಐ ಎಫ್‌ಐಆರ್ ಪ್ರಕಾರ, ವಿದಾಯದ (ಬೀಳ್ಕೊಡುಗೆ) ಸಮಯದಲ್ಲಿ ಗಿರಿಬಾಲಾ ಸಿಂಗ್ ಅವರು ಟ್ವಿಶಾ ಕುಟುಂಬದಿಂದ 2 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಮತ್ತು ಸಂತ್ರಸ್ತೆಯ ಒತ್ತಾಯದ ಮೇರೆಗೆ ಆಕೆಯ ಕುಟುಂಬದವರು ಈ ಹಣವನ್ನು ನೀಡಿದ್ದರು ಎಂಬುದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement