ಸಿದ್ದಾಪುರ | ಆಗಸ್ಟ್‌ 15ರಂದು ಅನಂತೋತ್ಸವ-2025 ; ʼಕೊಳಗಿ ಅನಂತಣ್ಣʼ ಕೃತಿ ಲೋಕಾರ್ಪಣೆ, ಅನಂತ ಶ್ರೀ ಪ್ರಶಸ್ತಿ ಪ್ರದಾನ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅನಂತ ಯಕ್ಷಕಲಾ ಪ್ರತಿಷ್ಠಾನದ ವತಿಯಿಂದ ಅನಂತೋತ್ಸವ-2025 ಪಟ್ಟಣದ ಟಿಎಂಎಸ್‌ ಸಭಾಂಗಣದಲ್ಲಿ ಆಗಸ್ಟ್‌ 15ರಂದು ಸಂಜೆ 4:30ರಿಂದ ನಡೆಯಲಿದೆ.
ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಲೇಖಕ ಗಂಗಾಧರ ಕೊಳಗಿ ಬರೆದ ʼಕೊಳಗಿ ಅನಂತಣ್ಣʼ ಕೃತಿ ಲೋಕಾರ್ಪಣೆ, ಖ್ಯಾತ ಮದ್ದಲೆ ವಾದಕರಾದ ಶಂಕರ ಭಾಗವತ ಯಲ್ಲಾಪುರ ಅವರಿಗೆ ಅನಂತ ಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ʼಕೊಳಗಿ ಅನಂತಣ್ಣʼ ಕೃತಿ ಕುರಿತು ವಿದ್ಯಾವಾಚಸ್ಪತಿ ಉಮಾಕಾಂತ ಭಟ್‌ ಕೆರೇಕೈ ಮಾತನಾಡಲಿದ್ದಾರೆ. ಲೇಖಕರಾದ ವಿದ್ವಾನ್‌ ಜಗದೀಶ ಶರ್ಮಾ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ.
ಸೆಲ್ಕೋ ಸಿಇಒ ಮೋಹನ ಭಾಸ್ಕರ ಹೆಗಡೆ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಅತಿಥಿಗಳಾಗಿ ಸಿದ್ದಾಪುರ ಟಿಎಂಎಸ್‌ ಅಧ್ಯಕ್ಷ ಆರ್‌.ಎಂ.ಹೆಗಡೆ ಬಾಳೇಸರ, ಹುಬ್ಬಳ್ಳಿಯ ಉದ್ಯಮಿ ಆರ್‌.ಜಿ.ಭಟ್‌ ವರ್ಗಾಸರ, ಶಿವಮೊಗ್ಗ ಡಿವಿಎಸ್‌ ಕಾಲೇಜಿನ ಪ್ರಾಧ್ಯಾಪಕರಾದ ವಿದ್ವಾನ್‌ ದತ್ತಮೂರ್ತಿ ಭಟ್‌, ಕೃತಿಕಾರ ಗಂಗಾಧರ ಹೆಗಡೆ ಕೊಳಗಿ ಆಗಮಿಸಲಿದ್ದಾರೆ. ಯಾಜಿ ಪ್ರಕಾಶನದ ಸವಿತಾ ಯಾಜಿ, ಚಿತ್ರ ಕಲಾವಿದ ಸತೀಶ ಯಲ್ಲಾಪುರ ಗೌರವ ಉಪಸ್ಥಿತಿ ಇರುತ್ತದೆ. ಅನಂತ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್‌ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಸಂಜೆ 6:30ರಿಂದ ವಿಶ್ವಾಭಿಗಮನಮ್‌ ಯಕ್ಷರೂಪಕವನ್ನು ತುಳಸಿ ಹೆಗಡೆ ಪ್ರಸ್ತುತಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement