ʼಮಹಾʼ ತಾಯಿ…: 27 ಗಂಟೆಗಳಲ್ಲಿ 21 ಮರಿಗಳಿಗೆ ಜನ್ಮ ನೀಡಿದ ಈ ನಾಯಿ | ವೀಕ್ಷಿಸಿ

ಸಿಎನ್‌ಎನ್‌ ವರದಿಯ ಪ್ರಕಾರ ಗ್ರೇಟ್ ಡೇನ್ ಜಾತಿ ನಾಯಿ 27 ಗಂಟೆಗಳಲ್ಲಿ 21 ನಾಯಿಮರಿಗಳಿಗೆ ಜನ್ಮ ನೀಡಿದೆ…! ಎರಡು ವರ್ಷದ ನಾಯಿ ನಮೈನ್ ಕಳೆದ ವಾರ ಬುಧವಾರ 21 ನಾಯಿಮರಿಗಳಿಗೆ ಜನ್ಮ ನೀಡಿದ್ದು, ಅದು 27 ಗಂಟೆಗಳ ನಂತರ ಅದು ಮರಿ ಹಾಕುವುದು ಮುಕ್ತಾಯವಾಗಿದೆ. ಔಟ್ಲೆಟ್ ಪ್ರಕಾರ ನಾಯಿಯು ತಾನ್ಯಾ ಡಬ್ಸ್ ಎಂಬವರ ಒಡೆತನದಲ್ಲಿದೆ ಮತ್ತು ವರ್ಜೀನಿಯಾದ ಪೊಕಾಹೊಂಟಾಸ್ ಎಂಬ ಸಣ್ಣ ಪಟ್ಟಣದಲ್ಲಿ ವಾಸಿಸುತ್ತಿದೆ.
ಬಹುತೇಕ ಎಲ್ಲಾ ನಾಯಿಮರಿಗಳು ಒಂದು ಪೌಂಡ್‌ಗಿಂತಲೂ ಹೆಚ್ಚು ತೂಕವನ್ನು ಹೊಂದಿದ್ದವು ಎಂದು ತಾನ್ಯಾ ಡಬ್ಸ್ ಹೇಳಿದ್ದಾರೆ. ಎರಡು ಮರಿಗಳು ಜನಿಸಿದ ಸ್ವಲ್ಪ ಸಮಯದ ನಂತರ ಸತ್ತಿವೆ. ನಾಯಿಯ ಮಾಲೀಕರು ಸಿಎನ್‌ಎನ್‌ (CNN)-ಅಂಗಸಂಸ್ಥೆ WVVA ಜೊತೆ ಮಾತನಾಡಿ, ಜನಿಸಿದ ನಾಯಿಮರಿಗಳ ಸಂಖ್ಯೆಯಿಂದ ತಾನು ಆಶ್ಚರ್ಯಚಕಿತನಾದೆ ಎಂದು ಹೇಳಿದ್ದಾರೆ.

ಯುಎಸ್ಎ ಟುಡೇ ವರದಿ ಪ್ರಕಾರ, 21 ಮರಿಗಳಲ್ಲಿ 12 ಹೆಣ್ಣು ಮರಿಗಳು ಮತ್ತು 9 ಗಂಡು ಮರಿಗಳು ಎಂದು ತಾನ್ಯಾ ಹೇಳಿದ್ದಾರೆ. ಮತ್ತು ತಾಯಿ ನಾಯಿ ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ನಾಯಿ ಮನೆಯಿಂದ ಹೊರಬರುತ್ತಿದ್ದಂತೆ ಲಾರಿ ಡಿಕ್ಕಿ ಹೊಡೆದು ಅದು ಗಾಯಗೊಂಡಿತ್ತು. ಅದರ ಪಕ್ಕೆ ಮತ್ತು ಮುಖಕ್ಕೆ ಗಾಯಗಳಾಗಿತ್ತು. ಆದರೆ ಅಂತಿಮವಾಗಿ ಅದು ಚೇತರಿಸಿಕೊಂಡಿತ್ತು.

ತಾನ್ಯಾ ಅವರು ಡಬ್ಸ್ ಕೆಲವು ದಿನಗಳ ಮರಿಗಳು ತಾಯಿ ಹಾಲು ಕುಡಿಯುದನ್ನು ಬಿಟ್ಟ ನಂತರ ಮರಿಗಳನ್ನು ಮಾರಾಟ ಮಾಡಲು ಯೋಜಿಸಿರುವುದಾಗಿ ಮಾಲಕಿ ತಾನ್ಯಾ ಡಬ್ಸ್‌ ಹೇಳಿದ್ದಾರೆ.
ಗ್ರೇಟ್ ಡೇನ್ಸ್ ದೊಡ್ಡ ದೇಶೀಯ ನಾಯಿ ತಳಿಗಳಲ್ಲಿ ಒಂದಾಗಿದೆ, ಅದು 2.5 ಅಡಿ ಎತ್ತರ ಮತ್ತು 100 ಪೌಂಡ್‌ಗಳಿಗಿಂತ ಹೆಚ್ಚು (45.3 ಕೆಜಿ) ತೂಗುತ್ತದೆ. ಆದಾಗ್ಯೂ, ಟಿಯಾ ಎಂಬ ಹೆಸರಿನ ನಿಯಾಪೊಲಿಟನ್ ಮಾಸ್ಟಿಫ್ ನಾಯಿ ಪ್ರಸ್ತುತ 2004 ರಲ್ಲಿ 24 ಮರಿಗಳಿಗೆ ಜನ್ಮ ನೀಡುವ ಮೂಲಕ ಗಿನ್ನೆಸ್ ಗಿನ್ನೆಸ್‌ ವಿಶ್ವ ದಾಖಲೆ ಮಾಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement