ಇಂದಿನ ಡಿಜಿಟಲ್ ಯುಗದಲ್ಲಿ, ಇಂಟರ್ನೆಟ್‌ನಲ್ಲಿ ಲೈಕ್‌ಗಳು, ವೀಕ್ಷಣೆಗಳು ಮತ್ತು ಫಾಲೋವರ್‌ಗಳನ್ನು ಗಳಿಸುವ ಸಲುವಾಗಿ ಹಲವರು ಅಸಾಮಾನ್ಯ ಮತ್ತು ಅಪಾಯಕಾರಿ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಕೆಲವರು ಸೃಜನಾತ್ಮಕ ಮತ್ತು ಮನರಂಜನೆಯ ವಿಷಯವನ್ನು ತಯಾರಿಸುವ ಮೂಲಕ ತಮ್ಮ ಪ್ರತಿಭೆಯನ್ನು ಬಳಸಿದರೆ, ಇನ್ನು ಕೆಲವರು ತಮ್ಮ ಮತ್ತು ಇತರರ ಜೀವಕ್ಕೆ ಅಪಾಯ ತರುವಂತಹ ಅಪಾಯಕಾರಿ ಸಾಹಸಗಳಿಗೆ ಕೈಹಾಕುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ, ಒಬ್ಬ ಮಹಿಳೆ ತನ್ನ ಮಗುವಿನ ಜೀವವನ್ನೇ ಪಣಕ್ಕಿಟ್ಟು ರೀಲ್ ಮಾಡಲು ಹೋಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಸಾಮಾನ್ಯವಾಗಿ ಆ ಮಹಿಳೆ ತಾನೊಬ್ಬಳೇ ನೃತ್ಯ ಮಾಡಿದ್ದರೆ ಅದು ಸಾಮಾನ್ಯ ರೀಲ್ ಆಗಿರುತ್ತಿತ್ತು. ಆದರೆ ‘ಸೃಜನಾತ್ಮಕತೆ’ಯ ಹೆಸರಿನಲ್ಲಿ ವಿಶಿಷ್ಟವಾಗಿ ಕಾಣಲು ಹೋಗಿ, ಆಕೆ ಅತ್ಯಂತ ಅಪಾಯಕಾರಿ ನಿರ್ಧಾರ ತೆಗೆದುಕೊಂಡಿದ್ದಾಳೆ. ಆಕೆ ರೀಲ್‌ಗಾಗಿ ಹಿಂದಿ ಸಿನೆಮಾ ಹಾಡಿಗೆ ನೃತ್ಯ ಮಾಡುವಾಗ ತನ್ನ ಚಿಕ್ಕ ಮಗುವನ್ನು ತಲೆಯ ಮೇಲೆ ಇಟ್ಟುಕೊಂಡು ಸ್ಟಂಟ್ ಮಾಡಿದ್ದಾಳೆ.
ತಾಯಿಯ ತಲೆಯ ಮೇಲೆ ತೂಗಾಡಿದ ಮಗು
ಮಹಿಳೆ ತನ್ನ ಕೈ ಮತ್ತು ಕಾಲುಗಳನ್ನು ಹಾಡಿನ ಲಯಕ್ಕೆ ಅನುಗುಣವಾಗಿ ಚಲಿಸುತ್ತಿದ್ದಾಗ, ಆ ಮಗುವಿನ ಪುಟ್ಟ ದೇಹವೂ ಸಹ ಆ ಕಡೆ ಈ ಕಡೆಗೆ ಬಾಗುತ್ತಿತ್ತು. ಮಗುವಿನ ತಲೆ ಒಂದು ಕಡೆ ಮತ್ತು ಕಾಲುಗಳು ಇನ್ನೊಂದು ಕಡೆ ಅಪಾಯಕಾರಿಯಾಗಿ ತೂಗಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ತಲೆಯ ಮೇಲೆ ಮಗುವನ್ನು ಬ್ಯಾಲೆನ್ಸ್ ಮಾಡಲು ಕುತ್ತಿಗೆಯನ್ನು ಕದಲಿಸದಿದ್ದರೂ, ಮಗುವನ್ನು ಹಿಡಿದುಕೊಳ್ಳದೆ ಈ ರೀತಿ ಮಾಡಿದ್ದು ಅತ್ಯಂತ ಅಪಾಯಕಾರಿಯಾಗಿತ್ತು. ವೀಡಿಯೊ ನೋಡಿದರೆ ಮಗುವಿಗೆ ಒಂದು ವರ್ಷ ಸುಪಾಸು ವಯಸ್ಸಿರಬಹುದು ಎಂದು ಅನಿಸುತ್ತದೆ.
ಮಗು ಬಿದ್ದು ಗಾಯಗೊಳ್ಳುವ ಅಪಾಯವಿದ್ದರೂ, ಮಹಿಳೆ ತನ್ನ ನೃತ್ಯವನ್ನು ಮುಂದುವರೆಸಿದ್ದಾಳೆ. ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ತಕ್ಷಣ, ಜನ ಆಕ್ರೋಶಗೊಂಡಿದ್ದಾರೆ. ಆಕೆಯ ಈ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದ ವರ್ತನೆಗೆ ಹಲವರು ತೀವ್ರವಾಗಿ ಟೀಕಿಸಿದ್ದಾರೆ. ಬ್ಯಾಲೆನ್ಸ್ ಸ್ವಲ್ಪ ತಪ್ಪಿದ್ದರೂ ಮಗುವಿಗೆ ದೊಡ್ಡ ಅಪಾಯವಾಗುತ್ತಿತ್ತು ಎಂದು ಅನೇಕರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ