ವೀಡಿಯೊ…| ಹೋಂ ವರ್ಕ್‌ ಮಾಡದ್ದಕ್ಕೆ ಶಾಲೆಯಲ್ಲಿ 7 ವರ್ಷದ ಬಾಲಕನ ತಲೆ ಕೆಳಗಾಗಿ ನೇತುಹಾಕಿ ಥಳಿತ…!

ಹರಿಯಾಣದ ಪಾಣಿಪತ್‌ನ (Panipat) ಶ್ರೀಜನ್ ಪಬ್ಲಿಕ್ ಶಾಲೆಯಲ್ಲಿ ಹೋಮ್ ವರ್ಕ್ (Home Work) ಮಾಡದ ಕಾರಣಕ್ಕೆ ಶಿಕ್ಷಕಿಯೊಬ್ಬಳು ಎರಡನೇ ತರಗತಿಯ ವಿದ್ಯಾರ್ಥಿಯನ್ನು ಕೈಕಾಲು ಕಟ್ಟಿ, ತಲೆಕೆಳಗಾಗಿ ನೇತುಹಾಕಿ ಥಳಿಸಿದ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಕೃತ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆಗಸ್ಟ್ 13 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇತ್ತೀಚೆಗೆ ಬೆಳಕಿಗೆ ಬಂದಿದೆ. ಶಿಕ್ಷಕಿಯೊಬ್ಬಳು ವಿದ್ಯಾರ್ಥಿಯನ್ನು ಹಗ್ಗದಿಂದ ಕಟ್ಟಿ, ಕಿಟಕಿಗೆ ತಲೆಕೆಳಗಾಗಿ ನೇತುಹಾಕಿ ಥಳಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಹೋಮ್‌ ವರ್ಕ್‌ ಪೂರ್ಣಗೊಳಿಸದಿದ್ದಕ್ಕಾಗಿ ಶಾಲಾ ಚಾಲಕ ವಿದ್ಯಾರ್ಥಿಗೆ ಥಳಿಸುವಂತೆ ಹೇಳಿ ಶಿಕ್ಷಿಸಲಾಗಿದೆ. ಮುಖಿಜಾ ಕಾಲೋನಿಯ ನಿವಾಸಿಯಾಗಿರುವ ಬಾಲಕನ ತಾಯಿ ಡೋಲಿ, ತನ್ನ ಏಳು ವರ್ಷದ ಮಗನನ್ನು ಇತ್ತೀಚೆಗೆ ಶಾಲೆಗೆ ಸೇರಿಸಲಾಗಿತ್ತು ಎಂದು ಹೇಳಿದ್ದಾರೆ.

ಮಗುವನ್ನು ಶಿಕ್ಷಿಸಲು ಪ್ರಾಂಶುಪಾಲೆ ಚಾಲಕನನ್ನು ಕರೆಸಿದರು, ನಂತರ ಆತ ಪುಟಾಣಿ ವಿದ್ಯಾರ್ಥಿಗೆ ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಮೇಲೆ ವಿಷಯ ಗೊತ್ತಾಗಿದೆ ನಂತರ ಮಗುವಿನ ಪೋಷಕರು ಈ ಬಗ್ಗೆ ಮಾಡೆಲ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ, ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಶಿಕ್ಷಕಿಯ ಸಂಬಂಧಿಕರು ದೂರು ಹಿಂಪಡೆಯಲು ಸಂತ್ರಸ್ತ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ಬಂಧಿಸಲು ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.
ಇದೇ ಶಾಲೆಯದ್ದು ಎಂದು ಆರೋಪಿಸಲಾದ ಮತ್ತೊಂದು ವಿಡಿಯೊ ವೈರಲ್ ಆಗಿದ್ದು, ಅದರಲ್ಲಿ ಶಿಕ್ಷಕಿಯೊಬ್ಬಳು ಮಕ್ಕಳಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋದ ಆಧಾರದ ಮೇಲೆ ಪ್ರಾಂಶುಪಾಲರ ವಿರುದ್ಧವೂ ಕೇಸ್ ದಾಖಲಾಗಿದೆ.

ಮತ್ತೊಂದು ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರಾಂಶುಪಾಲೆ ಎನ್ನಲಾದ ಮಹಿ ಇತರ ವಿದ್ಯಾರ್ಥಿಗಳ ಮುಂದೆಯೇ ಚಿಕ್ಕ ಮಕ್ಕಳಿಗೆ ಹೊಡೆಯುವುದು ಕಂಡುಬಂದಿದೆ. ಶಿಸ್ತು ಕ್ರಮ ಕೈಗೊಳ್ಳುವ ಮೊದಲು ಪೋಷಕರಿಗೆ ತಿಳಿಸಿದ್ದೆ ಎಂದು ಶಿಕ್ಷಕಿ ಹೇಳಿಕೊಂಡಿದ್ದಾರೆಂದು ಹೇಳಲಾಗಿದೆ. ಆದಾಗ್ಯೂ, ಅವರ ಸಮರ್ಥನೆಯು ಶಿಕ್ಷಣ ಸಚಿವಾಲಯದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ, ಇದು ದೈಹಿಕ ಶಿಕ್ಷೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಶಿಕ್ಷೆಯಾಗಿ ಮಕ್ಕಳನ್ನು ಕೆಲವೊಮ್ಮೆ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಒತ್ತಾಯಿಸಲಾಗುತ್ತದೆ ಎಂದು ಪೋಷಕರು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement