ಏಷ್ಯಾ ಕಪ್ ಕ್ರಿಕೆಟ್‌ 2025 : ಶ್ರೀಲಂಕಾ-ಅಪಘಾನಿಸ್ತಾನದ ನಡುವೆ ಪಂದ್ಯ ನಡೆಯುತ್ತಿರುವಾಗಲೇ ಶ್ರೀಲಂಕಾ ಆಟಗಾರನ ತಂದೆ ನಿಧನ

ಅಬುಧಾಬಿ : ಗುರುವಾರ ನಡೆದ ಏಷ್ಯಾ ಕಪ್ 2025 ರ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಶ್ರೀಲಂಕಾ ಕ್ರಿಕೆಟಿಗ ದುನಿತ್ ವೆಲ್ಲಾಲ ಅವರಿಗೆ ವೈಯಕ್ತಿಕ ದುರಂತದ ಸುದ್ದಿಯೊಂದು ಬಂದಿದೆ. ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಗ್ರೂಪ್ ಬಿ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಫ್ಘಾನಿಸ್ತಾನ ವಿರುದ್ಧ ಜಯ ಸಾಧಿಸಿದರೂ ಸ್ಪಿನ್ನರ್ ದುನಿತ್ ವೆಲ್ಲಾಲ ಅವರು ವೈಯಕ್ತಿಕ ದುರಂತದ ಸುದ್ದಿ ಕೇಳಬೇಕಾಯಿತು.
ಶ್ರೀಲಂಕಾದ ಆಟಗಾರ ದುನಿತ್ ವೆಲ್ಲಾಲ ಅವರು ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಕ್ರಿಕೆಟ್ ಪಂದ್ಯ ಆಡುತ್ತಿದ್ದಾಗ ಅವರ ತಂದೆ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ.

ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಜಯಶಾಲಿಯಾಗಿದ್ದರೂ, ಪಂದ್ಯ ಗೆದ್ದ ನಂತರ ದುನಿತ್ ಜೀವನದ ಅತ್ಯಂತ ದುರಂತ ಸುದ್ದಿಯನ್ನು ಕೇಳಬೇಕಾಯಿತು. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ಕಾಣಿಸಿಕೊಂಡಿದ್ದು, ಅದರಲ್ಲಿ ಶ್ರೀಲಂಕಾ ಕೋಚ್ ಸನತ್ ಜಯಸೂರ್ಯ ಮೈದಾನದಲ್ಲಿ ವೆಲ್ಲಾಲಗೆ ದುರಂತ ಸುದ್ದಿಯನ್ನು ತಿಳಿಸುತ್ತಿರುವುದನ್ನು ಕಾಣಬಹುದು. ಪಂದ್ಯದ ನಂತರ 22 ವರ್ಷದ ಆಟಗಾರನಿಗೆ ಹೃದಯಾಘಾತದಿಂದ ಅವರ ತಂದೆ ನಿಧನರಾದ ಸುದ್ದಿಯನ್ನು ಕೋಚ್ ಸನತ್ ಜಯಸೂರ್ಯ ಮತ್ತು ತಂಡದ ವ್ಯವಸ್ಥಾಪಕರು ತಿಳಿಸಿದ್ದಾರೆ.

ಶ್ರೀಲಂಕಾದ ಮಾಜಿ ಕೋಚ್‌ ಜಯಸೂರ್ಯ ಅವರು ವೆಲ್ಲಾಲ ಭುಜದ ಸುತ್ತ ಕೈಯಿಟ್ಟು ಸಾಂತ್ವನ ಹೇಳುತ್ತಿರುವ ದೃಶ್ಯಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.
ಜಯಸೂರ್ಯ ಮತ್ತು ವೆಲ್ಲಾಲ ಪರಸ್ಪರ ಮಾತನಾಡುತ್ತಿರುವುದು ಕಂಡುಬಂದಿದೆ. ಶ್ರೀಲಂಕಾ ಕೋಚ್ ಆಟಗಾರನ ಭುಜದ ಮೇಲೆ ಕೈಯಿಟ್ಟು, ಅವರ ಕುಟುಂಬದಲ್ಲಿನ ದುರಂತದ ಬಗ್ಗೆ ಹೇಳಿ ದುನಿತ್‌ ಅವರನ್ನು ಸಮಾಧಾನಪಡಿಸಿದ್ದಾರೆ.
ದುನಿತ್ ಅವರ ತಂದೆ ಸುರಂಗ ಕೂಡ ಪ್ರಿನ್ಸ್ ಆಫ್ ವೇಲ್ಸ್ ಕಾಲೇಜನ್ನು ಮುನ್ನಡೆಸಿದ್ದ ಕ್ರಿಕೆಟಿಗರಾಗಿದ್ದರು, ಆದರೂ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಆಡಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement