ಚಿಕ್ಕ ಹುಡುಗಿ ಜೇಡನಂತೆ ಗೋಡೆ ಏರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ವೀಡಿಯೊದಲ್ಲಿ, ಸುಮಾರು 5 ವರ್ಷ ವಯಸ್ಸಿನ ಹುಡುಗಿ ಯಾವುದೇ ಬೆಂಬಲವಿಲ್ಲದೆ ನಿಮಿಷಾರ್ಧದಲ್ಲಿ ಗೋಡೆಗಳನ್ನು ಏರುತ್ತಾಳೆ. ಹುಡುಗಿ ತನ್ನ ಕೈ ಮತ್ತು ಕಾಲುಗಳಿಗೆ ಯಾವುದೇ ಸುರಕ್ಷತಾ ಗೇರ್ಗಳ ಸಹಾಯವಿಲ್ಲದೆ ತನ್ನ ಮನೆಯ ಎತ್ತರದ ಗೋಡೆಯನ್ನು ಸಲೀಸಾಗಿ ಏರುತ್ತಾಳೆ. ಗೋಡೆಯ ಮೇಲೆಯೇ ಕಸರತ್ತು ಮಾಡುತ್ತಾಳೆ.
ಅವಳು ಎರಡು ಗೋಡೆಗಳ ನಡುವೆ ಬ್ರೇಸ್ ಮಾಡಿ ತನ್ನ ದೇಹವನ್ನು ಚಾವಣಿಯವರೆಗೆ ಏರುತ್ತಾಳೆ. ಅವಳು ಗೋಡೆಯ ತುದಿಯನ್ನು ತಲುಪಿದಾಗ, ಅವಳು ತನ್ನ ಎರಡೂ ಕಾಲುಗಳನ್ನು ಗಾಳಿಯಲ್ಲಿ ಇಟ್ಟು ಆರಾಮವಾಗಿ ನಿಲ್ಲುತ್ತಾಳೆ..!
ಬಾಲಕಿಯ ಆಘಾತಕಾರಿ ಸಾಹಸವನ್ನು ಮನೆಯಲ್ಲಿದ್ದ ಕುಟುಂಬದ ಸದಸ್ಯರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ನಂತರ, ವಿಡಿಯೊವನ್ನು ಟ್ವಿಟರ್ನಲ್ಲಿ ಎಫ್ಎಫ್ಎಸ್ ಒಎಂಜಿ ವಿಡ್ಸ್ ಎಂಬ ಖಾತೆಯು ‘ಸ್ಪೈಡರ್ಗರ್ಲ್’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, 124 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆಗಳು ಮತ್ತು 600 ಕ್ಕೂ ಹೆಚ್ಚು ಶೇರ್ಗಳನ್ನು ಮಾಡಲಾಗಿದೆ. ಕೆಲವರು ಚಿಕ್ಕ ಹುಡುಗಿಯ ಕೌಶಲ್ಯದಿಂದ ಪ್ರಭಾವಿತರಾದರೆ, ಇತರರು ಈ ಡೇಂಜರಸ್ ಸಾಹಸಕಕೆ ಕಾಮೆಂಟ್ ಮಾಡಿದರು.
ನಿಮ್ಮ ಕಾಮೆಂಟ್ ಬರೆಯಿರಿ