ಬೆಂಗಳೂರು : ಮುಸ್ಲಿಂ ಮಹಿಳೆಯರ ಕುರಿತಾದ ಸಿನಿಮಾ ‘ಹಮಾರೆ ಬಾರಾಹ್’ (Hamare Baarah) ಬಿಡುಗಡೆಗೆ ರಾಜ್ಯ ಸರ್ಕಾರ ನಿಷೇಧ ಹೇರಿದೆ.
“ಹಮಾರೆ ಬಾರಾಹ್” ಸಿನೆಮಾ ಜೂ.7ರಂದು ಬಿಡುಗಡೆ ಆಗಲಿದ್ದು, ಈ ಚಿತ್ರದ ಟ್ರೈಲರ್ ಅನ್ನು ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನೆಮಾ ಮಂದಿರ, ಖಾಸಗಿ ಟಿವಿ ಚಾನಲ್ ಸೇರಿದಂತೆ ಯಾವುದೇ ಯಲ್ಲೂ ಪ್ರಸಾರ ಮಾಡುವುದನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕಮಲ್ ಚಂದ್ರಾ ನಿರ್ದೇಶನದಲ್ಲಿ ಅನ್ನು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹಮಾರೆ ಬಾರಾಹ್’ ಸಿನಿಮಾವನ್ನು ನಿಷೇಧಿಸಬೇಕು ಎಂದು ವಿವಿಧ ಮುಸ್ಲಿಂ ಸಂಘಟನೆಗಳ (Muslim Organization) ಮನವಿಯ ಮೇರೆಗೆ ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆ 1964, ಸೆಕ್ಷನ್ 15 (1) ಮತ್ತು 15(5) ರ ಅನ್ವಯ ಈ ಸಿನಿಮಾದ ಪ್ರದರ್ಶನವನ್ನು ರಾಜ್ಯದಲ್ಲಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಈ ಸಿನಿಮಾದ ಪ್ರದರ್ಶನದಿಂದ ರಾಜ್ಯದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ಆಗುತ್ತದೆ ಎಂಬ ಕಾರಣ ನೀಡಿ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಅಲ್ಲದೆ ಕೆಲವು ಅಲ್ಪಸಂಖ್ಯಾತ ಸಂಘಟನೆಗಳು ಸಿನಿಮಾವನ್ನು ಬಿಡುಗಡೆ ಮಾಡದಿರಲು ಮನವಿ ಮಾಡಿವೆ ಎಂದು ಸಹ ಹೇಳಲಾಗಿದೆ. ಸರ್ಕಾರದ ಆದೇಶವನ್ನು ಯಾರಾದರೂ ಉಲ್ಲಂಘಿಸಿದ್ದು ಕಂಡುಬಂದಲ್ಲಿ, ಕಾನೂನು ರೀತ್ಯಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಎಚ್ಚರಿಕೆ ನೀಡಿದ್ದಾರೆ.
ಈ ಮೊದಲು ಈ ವಿವಾದಿತ ಹಮಾರೆ ಬಾರಾಹ್ ಚಿತ್ರವನ್ನು ಜೂನ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಪ್ರಸ್ತುತ ಬಾಂಬೆ ಹೈಕೋರ್ಟ್ ಕೂಡ ಜೂನ್ 14 ರವರೆಗೆ ಈ ಚಲನಚಿತ್ರ ಬಿಡುಗಡೆಗೆ ತಡೆ ನೀಡಿದೆ. ಇತ್ತೀಚೆಗೆ ಪುಣೆಯ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದು, ಎರಡೂ ಕಡೆಯ ಅಭಿಪ್ರಾಯಗಳನ್ನು ಆಲಿಸಿದ ಬಾಂಬೆ ಹೈಕೋರ್ಟ್, ‘ಹಮಾರಾ ಬಾರಾಹ್’ ಚಿತ್ರದ ಬಿಡುಗಡೆಯನ್ನು ಜೂನ್ 14ರ ವರೆಗೆ ಮಾಡದಂತೆ ತಡೆ ನೀಡಿದೆ.
ಸಿನಿಸಿನಿಮಾದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಋಣಾತ್ಮಕ ಸಂಭಾಷಣೆಗಳಿವೆ, ಇಸ್ಲಾಂ ಧರ್ಮವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ. ಬಿಂಬಿಸಲಾಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ. ಸಿಬಿಎಫ್ಸಿ ಈಗಾಗಲೇ ಕೆಲವು ಸಂಭಾಷಣೆಗಳಿಗೆ ಕಟ್ಗಳನ್ನು ಸೂಚಿಸಿ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ