ವೀಡಿಯೊ | ಶಿರಸಿ : ಬಾವಿಗೆ ಬಿದ್ದ 2 ವರ್ಷದ ಮಗು; ಪಂಪ್‌ಸೆಟ್‌ ಪೈಪು ಹಿಡಿಕೊಂಡಿದ್ದ ಬಾಲೆ; ಕಾಪಾಡಿದ ಆಪದ್ಬಾಂಧವ

ಶಿರಸಿ: ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದ ಎರಡು ವರ್ಷದ ಕಂದಮ್ಮ ಪವಾಡಸದೃಶರೀತಿಯಲ್ಲಿ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಬಾ ನಗರದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ.
ವ್ಯಕ್ತಿಯೊಬ್ಬರು ತೋರಿದ ಸಮಯ ಪ್ರಜ್ಞೆಯಿಂದ ಮಗು ಅಪಾಯದಿಂದ ಪಾರಾಗಿದೆ. ಪ್ರಾಣದ ಹಂಗು ತೊರೆದು ಬಾವಿಗಿಳಿದ ಪಯ್ಯು ಚವಟಿ ಎಂಬವರು ಮಗುವನ್ನು ಮೇಲಕ್ಕೆತ್ತುವ ಮೂಲಕ ಮಗುವಿಗೆ ಮರುಜನ್ಮ ನೀಡಿದ್ದಾರೆ.
ಕಸ್ತೂರಬಾ ನಗರದ ನಿವಾಸಿಯಾದ ಪುಟ್ಟ ಬಾಲಕಿ ಭುವಿ (2) ಮನೆಯ ಆವರಣದಲ್ಲಿ ಆಟವಾಡುತ್ತಿದ್ದಳು. ಕೆಲ ಸಮಯದ ನಂತರ ಮಗು ಕಾಣದಿದ್ದಾಗ ಆತಂಕಗೊಂಡ ಅಜ್ಜಿ ಸುತ್ತಮುತ್ತ ಹುಡುಕಾಡಿದ್ದಾರೆ. ಈ ವೇಳೆ ಮನೆಯ ಹಿಂಭಾಗದ ಬಾವಿಯಿಂದ ಮಗುವಿನ ಅಳುವಿನ ಧ್ವನಿ ಕೇಳಿಬಂದಿದೆ.

ತಕ್ಷಣ ಬಾವಿಯಲ್ಲಿ ಇಣುಕಿ ನೋಡಿದಾಗ, ಮಗು ಬಾವಿಯ ಒಳಗಿದ್ದ ಪಂಪ್ ಸೆಟ್‌ನ ಪೈಪ್ ಒಂದನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದು ಕಂಡುಬಂದಿದೆ. ಪ್ರಾಣಾಪಾಯದಲ್ಲಿರುವುದನ್ನು ನೋಡಿದ ಬಾಲಕಿಯ ಕುಟುಂಬದವರ ಆಕ್ರಂದನ ಕೇಳಿ ಸ್ಥಳೀಯರು ಜಮಾಯಿಸಿದ್ದಾರೆ. ಈ ವೇಳೆ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಸಿದ್ಧರಾಗಿದ್ದ ಸಾರಿಕಾ ಸೇವಾ ಸಂಸ್ಥೆಯ ಸಂಸ್ಥಾಪಕ ಪಯ್ಯು (ಪಯಾಜ್‌) ಚೌಟಿ ಅವರಿಗೆ ವಿಷಯ ಗೊತ್ತಾಗಿದೆ. ಅವರು ಒಂದು ಕ್ಷಣವನ್ನೂ ವ್ಯರ್ಥ ಮಾಡದ ಅವರು ಧಾವಿಸಿ ಬಂದು
ಸಾವಿನ ದವಡೆಯಿಂದ ಮಗುವನ್ನು ಪಾರು ಮಾಡಿದ ಫಯಾಜ್ ಅವರಿಗೆ ಮಗುವಿನ ಅಜ್ಜಿ ಕೃತಜ್ಞತೆ ಸಲ್ಲಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಫಯಾಜ್ ಚೌಟಿ ಅವರು, “ಆ ಪರಿಸ್ಥಿತಿಯಲ್ಲಿ ಯಾರು ಬಿದ್ದಿದ್ದರೂ ನಾನು ಇದನ್ನೇ ಮಾಡುತ್ತಿದ್ದೆ. ಮಗು ಪ್ರಾಣಾಪಾಯದಿಂದ ಪಾರಾಗಿದ್ದು ನನಗೆ ತೃಪ್ತಿ ತಂದಿದೆ,” ಎಂದು ಹೇಳಿದ್ದಾರೆ. ಸಾಹಸ ಮೆರೆದು ಮಗುವನ್ನು ಕಾಪಾಡಿದ ಪಯ್ಯು ಚೌಟಿ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement