ಒರಾಕಲ್‌ನಲ್ಲಿ ಭಾರೀ ಉದ್ಯೋಗ ಕಡಿತ: ಭಾರತದಲ್ಲಿ 12,000 ಉದ್ಯೋಗಿಗಳನ್ನು ವಜಾಗೊಳಿಸಿದ ಕಂಪನಿ

ಬೆಂಗಳೂರು/ನ್ಯೂಯಾರ್ಕ್: ಅಮೆರಿಕ ಮೂಲದ ಪ್ರಖ್ಯಾತ ಸಾಫ್ಟ್‌ವೇರ್ ಕಂಪನಿ ಒರಾಕಲ್ (Oracle) ಜಾಗತಿಕವಾಗಿ ಅಂದಾಜು 30,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ವರದಿಯಾಗಿದೆ. ಈ ಪೈಕಿ ಭಾರತವೊಂದರಲ್ಲೇ ಸುಮಾರು 12,000 ಮಂದಿ ಉದ್ಯೋಗ ಕಳೆದುಕೊಂಡಿದ್ದು, ಮುಂದಿನ ಒಂದು ತಿಂಗಳೊಳಗೆ ಮತ್ತೊಂದು ಹಂತದ ವಜಾ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಒರಾಕಲ್ ಸಂಸ್ಥೆಯು ವಿಶ್ವಾದ್ಯಂತ ಸುಮಾರು 30,000 ಉದ್ಯೋಗಿಗಳನ್ನು ವಜಾ ಮಾಡಿದೆ. ಮೇ 2025 ರ ಹೊತ್ತಿಗೆ ಕಂಪನಿಯು ಜಾಗತಿಕವಾಗಿ 1.62 ಲಕ್ಷ ಪೂರ್ಣಾವಧಿ ಉದ್ಯೋಗಿಗಳನ್ನು ಹೊಂದಿತ್ತು. ಭಾರತದಲ್ಲಿ ಒಟ್ಟು 30,000 ಉದ್ಯೋಗಿಗಳಿದ್ದು, ಈಗ ಸುಮಾರು 12,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದು ಭಾರತೀಯ ಕಚೇರಿಗಳಲ್ಲಿನ ಒಟ್ಟು ಉದ್ಯೋಗಿಗಳ ಸಂಖ್ಯೆಯ ಸುಮಾರು 40% ಆಗಿದೆ. ಕಂಪನಿಯು ಸಾಂಸ್ಥಿಕ ಬದಲಾವಣೆಗಳನ್ನು ಮಾಡುತ್ತಿದ್ದು, ಕಾರ್ಯಾಚರಣೆಯನ್ನು ಸುಗಮಗೊಳಿಸಲು (Streamline) ಕೆಲವು ಹುದ್ದೆಗಳ ಅವಶ್ಯಕತೆ ಇಲ್ಲ ಎಂದು ಇಮೇಲ್ ಮೂಲಕ ಉದ್ಯೋಗಿಗಳಿಗೆ ತಿಳಿಸಲಾಗಿದೆ.

ಪರಿಹಾರ ಪ್ಯಾಕೇಜ್ (Severance Package):
ಉದ್ಯೋಗ ಕಳೆದುಕೊಂಡವರಿಗೆ ಕಂಪನಿಯು ಕೆಲವು ಆರ್ಥಿಕ ಸೌಲಭ್ಯಗಳನ್ನು ಘೋಷಿಸಿದೆ. ಭಾರತದಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದವರಿಗೆ 15 ದಿನಗಳ ಸಂಬಳ ನೀಡುತ್ತಿದೆ. ವಜಾ ದಿನಾಂಕದ ದಿನಾಂಕದವರೆಗೆ ಬಾಕಿ ಇರುವ ಒಂದು ತಿಂಗಳ ವೇತನ, ರಜೆ ನಗದೀಕರಣ (Leave, encashment) ಮತ್ತು ಗ್ರಾಚ್ಯುಟಿ. ಒಂದು ತಿಂಗಳ ನೋಟಿಸ್ ಅವಧಿಯ ವೇತನ ಹಾಗೂಹೆಚ್ಚುವರಿಯಾಗಿ ಎರಡು ತಿಂಗಳ ವೇತನವನ್ನು ‘ಟಾಪ್-ಅಪ್’ ಆಗಿ ನೀಡಲಾಗುತ್ತಿದೆ.
ಸ್ವಯಂಪ್ರೇರಿತವಾಗಿ ಮತ್ತು ಸೌಹಾರ್ದಯುತವಾಗಿ ರಾಜೀನಾಮೆ ನೀಡುವವರಿಗೆ ಮಾತ್ರ ಈ ಪರಿಹಾರ ಪ್ಯಾಕೇಜ್ ಲಭ್ಯವಿರುತ್ತದೆ ಎಂದು ವರದಿಯಾಗಿದೆ. ಈ ಬೆಳವಣಿಗೆಗಳ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಲು ಒರಾಕಲ್ ಸಂಸ್ಥೆ ನಿರಾಕರಿಸಿದೆ.

ಪ್ರಮುಖ ಸುದ್ದಿ :-   ದೆಹಲಿ ಹೊಟೇಲ್‌ ಅಗ್ನಿ ದುರಂತ : ಐಸಿಯುನಲ್ಲಿದ್ದ ತಂದೆ ಸನಿಹ ಇರಲು ಹೊಟೇಲ್‌ನಲ್ಲಿ ತಂಗಿದ್ದ ಸಿಎ ಕುಟುಂಬದ 8 ಮಂದಿ ಸಾವು

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement