ಛತ್ತೀಸಗಢ: ರಾತ್ರೋರಾತ್ರಿ 60 ಅಡಿ ಉದ್ದ, 30 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಕದ್ದೊಯ್ದ ಕಳ್ಳರು…!

ರಾಯ್ಪುರ: ಚೋರರ ತಂಡವೊಂದು ಬರೋಬ್ಬರಿ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನೇ ತುಂಡು ತುಂಡಾಗಿ ಕತ್ತರಿಸಿ ಕದ್ದೊಯ್ದಿರುವ ವಿಲಕ್ಷಣ ಘಟನೆ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.
ಕೊರ್ಬಾ ಜಿಲ್ಲಾ ಕೇಂದ್ರದ ದೋಧಿಪಾರಾ ಪ್ರದೇಶದಲ್ಲಿ ಹಸ್ದಿಯೋ ಕಾಲುವೆಯ ಮೇಲೆ ಈ ಬೃಹತ್ ಕಬ್ಬಿಣದ ಸೇತುವೆಯನ್ನು ನಿರ್ಮಿಸಲಾಗಿತ್ತು. ಸುಮಾರು 30 ಟನ್ ತೂಕದ ಈ ಸೇತುವೆಯನ್ನು ಸ್ಕ್ರ್ಯಾಪ್ ಮಾಫಿಯಾ ಗ್ಯಾಸ್ ಕಟ್ಟರ್‌ಗಳ ಮೂಲಕ ರಾತ್ರೋರಾತ್ರಿ ಕತ್ತರಿಸಿ ಲಾರಿಗಳಲ್ಲಿ ಸಾಗಿಸಿದೆ.
ಜನವರಿ 17ರ ರಾತ್ರಿ 11 ಗಂಟೆಯವರೆಗೂ ಜನರು ಈ ಸೇತುವೆಯನ್ನು ಬಳಸಿದ್ದರು. ಆದರೆ ಮಾರನೇ ದಿನ ಬೆಳಿಗ್ಗೆ ನೋಡಿದಾಗ ಸೇತುವೆ ಇರಬೇಕಾದ ಜಾಗದಲ್ಲಿ ಏನೂ ಇರಲಿಲ್ಲ. ಈ ಕುರಿತು ವಾರ್ಡ್‌ ಕೌನ್ಸಿಲರ್ ಲಕ್ಷ್ಮಣ ಶ್ರೀವಾಸ ಅವರು ಪೊಲೀಸ್ ದೂರು ನೀಡಿದ್ದಾರೆ

ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಸೇತುವೆಯ ಅವಶೇಷಗಳು ಮತ್ತು ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿದ ಗುರುತುಗಳು ಪತ್ತೆಯಾಗಿವೆ.
ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಈ ಸೇತುವೆ ಸ್ಥಳೀಯರಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಕೊರ್ಬಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ತಿವಾರಿ ಅವರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ. “ಈ ಕೃತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ 15 ಜನರನ್ನು ಗುರುತಿಸಲಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ,” ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಪ್ರತೀಕ ಚತುರ್ವೇದಿ ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement