2026ರಲ್ಲಿ ಭಾರೀ ಆರ್ಥಿಕ ವಿಪತ್ತು…ಮಹಾಯುದ್ಧದ ಭೀತಿ ? ಆತಂಕಕ್ಕೆ ಕಾರಣವಾಯ್ತು ಬಾಬಾ ವಂಗಾ ಭವಿಷ್ಯವಾಣಿ…

2025ರ ವರ್ಷವು ಜಗತ್ತಿನ ಮೂಲೆ ಮೂಲೆಯಲ್ಲೂ ಯುದ್ಧಗಳು, ಸಂಘರ್ಷಗಳು ಮತ್ತು ನೈಸರ್ಗಿಕ ವಿಕೋಪಗಳಿಂದ ತುಂಬಿದೆ. ಇಸ್ರೇಲ್-ಹಮಾಸ್ ಯುದ್ಧದ ಮುಂದುವರಿಕೆ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ, ಮತ್ತು ಎಂದಿಗೂ ಮುಗಿಯದ ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ ಇಡೀ ವರ್ಷ ಕೆಟ್ಟ ಸುದ್ದಿಗಳೇ ಹೆಚ್ಚಾಗಿವೆ. ಇದಲ್ಲದೆ, ಪ್ರಪಂಚದ ಹಲವು ಸ್ಥಳಗಳಲ್ಲಿ ಭೀಕರ ಪ್ರವಾಹ, ಭೂಕಂಪಗಳು ಮತ್ತು ತೀವ್ರ ಉಷ್ಣತೆಯ ಅಲೆಗಳಿಂದ ಭಾರಿ ಹಾನಿಯಾಗಿದೆ. ಈಗ 2025ರ ವರ್ಷವು ಮುಕ್ತಾಯದ ಹಂತಕ್ಕೆ ಬರುತ್ತಿರುವಾಗ, 2026ರ ಭವಿಷ್ಯವಾಣಿಗಳು ವಿಶ್ವದಾದ್ಯಂತ ಆತಂಕ ಮತ್ತು ಕುತೂಹಲ ಸೃಷ್ಟಿಸಿದೆ.
ಬಾಬಾ ವಂಗಾ ಎಚ್ಚರಿಸಿದ “ಕ್ಯಾಶ್ ಕ್ರಷ್” ಎಂದರೇನು?
ಈ ಎಲ್ಲ ಭವಿಷ್ಯವಾಣಿಗಳಲ್ಲಿ ಅತ್ಯಂತ ಆತಂಕಕಾರಿಯಾದದ್ದು ಬಲ್ಗೇರಿಯಾದ ಅತೀಂದ್ರಿಯ ಮಹಿಳೆ ಬಾಬಾ ವಂಗಾ ಅವರದ್ದು. ಇವರನ್ನು ‘ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್’ ಎಂದೂ ಕರೆಯಲಾಗುತ್ತದೆ. ಇವರು 2026ರಲ್ಲಿ ಜಾಗತಿಕವಾಗಿ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು (Financial Crisis) ಎದುರಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಈ ಹಣಕಾಸು ದುರಂತವನ್ನು ಅವರು “ಕ್ಯಾಶ್ ಕ್ರಷ್” (Cash Crush) ಎಂದು ಕರೆದಿದ್ದಾರೆ ಎಂದು ಹೇಳಲಾಗಿದೆ.
ಬ್ರಿಟಿಷ್ ಮಾಧ್ಯಮಗಳ ವರದಿಗಳ ಪ್ರಕಾರ, 2026ರಲ್ಲಿ ಇಡೀ ಜಾಗತಿಕ ಹಣಕಾಸು ವ್ಯವಸ್ಥೆ – ಅದು ನಗದಾಗಿರಲಿ ಅಥವಾ ಡಿಜಿಟಲ್ ಕರೆನ್ಸಿಯಾಗಿರಲಿ ಅದು “ಕುಸಿಯಲಿದೆ” ಎಂದು ಬಾಬಾ ವಂಗಾ ಮುನ್ಸೂಚನೆ ನೀಡಿದ್ದಾರೆ. LadBible ಪ್ರಕಾರ, ಬಾಬಾ ವಂಗಾ 2026 ರಲ್ಲಿ ತೀವ್ರ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಭವಿಷ್ಯ ನುಡಿದಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ ಹೆಚ್ಚುತ್ತಿರುವುದು, ಹಣದುಬ್ಬರ ಏರುತ್ತಿರುವುದು ಮತ್ತು ಬಡ್ಡಿದರಗಳು ಹೆಚ್ಚುತ್ತಿರುವುದರಿಂದ, ಅವರ ಈ ಭವಿಷ್ಯವಾಣಿ ಈಗ ಮತ್ತೆ ಚರ್ಚೆಯಾಗುತ್ತಿದೆ. ಬಾಬಾ ವಂಗಾ ಅವರ ಈ ಭವಿಷ್ಯ ನಿಜವಾದರೆ ಏನಾಗಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

2026ರ ಭವಿಷ್ಯದ ಬಗ್ಗೆ   ಕಳವಳ ಏಕೆ?
ಬ್ರಿಟಿಷ್ ಮಾಧ್ಯಮಗಳನ್ನು ಉಲ್ಲೇಖಿಸಿದ ವರದಿಯ ಪ್ರಕಾರ, “ಕ್ಯಾಶ್ ಕ್ರಷ್” ಎಂಬ ಬಾಬಾ ವಂಗಾ ಅವರ ಭವಿಷ್ಯವು, ಒಂದು ಹಂತದಲ್ಲಿ ವಿಶ್ವದ ಸಂಪೂರ್ಣ ವಿತ್ತೀಯ ವ್ಯವಸ್ಥೆ (ಭೌತಿಕ ಮತ್ತು ಡಿಜಿಟಲ್ ಎರಡೂ) ಕುಸಿಯಲಿದೆ ಎಂಬ ಸಿದ್ಧಾಂತವನ್ನು ಆಧರಿಸಿದೆ. ಇದು ಪ್ರಮುಖ ಬ್ಯಾಂಕುಗಳ ದಿವಾಳಿತನ, ಕರೆನ್ಸಿಯ ಭಾರಿ ಅಪಮೌಲ್ಯ (devaluation) ಮತ್ತು ವಿಶ್ವಾದ್ಯಂತ ನಗದು ಕೊರತೆಗೆ ಕಾರಣವಾಗಬಹುದು. ಇದು ಸಂಭವಿಸಿದರೆ, ಈಗಾಗಲೇ ಆರ್ಥಿಕ ಹಿಂಜರಿತ (recession), ಇಂಧನ ಬಿಕ್ಕಟ್ಟು ಅಥವಾ ಅಸ್ಥಿರ ಹಣಕಾಸು ನೀತಿಗಳನ್ನು ಎದುರಿಸುತ್ತಿರುವ ದೇಶಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಹಲವು ಅರ್ಥಶಾಸ್ತ್ರಜ್ಞರು ಈ ಭವಿಷ್ಯವನ್ನು ನಕಲಿ ವಿಜ್ಞಾನ ಎಂದು ತಳ್ಳಿಹಾಕಿದ್ದಾರೆ. ಆದರೂ, ಜಗತ್ತು ಸರಣಿ ಸಂಘರ್ಷಗಳಲ್ಲಿ ಸಿಲುಕುತ್ತಿರುವುದು, ಟೆಕ್ ಉದ್ಯಮದಲ್ಲಿ ದೊಡ್ಡಮಟ್ಟದ ಉದ್ಯೋಗ ಕಡಿತ ನಡೆಯುತ್ತಿರುವುದು, ರಷ್ಯಾ-ಉಕ್ರೇನ್ ಸಂಘರ್ಷವು ಜಾಗತಿಕ ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತಿರುವುದು, ಮತ್ತು ಕ್ರಿಪ್ಟೋಕರೆನ್ಸಿ ಮೌಲ್ಯ ಕುಸಿಯುತ್ತಿರುವುದು… ಈ ಎಲ್ಲ ಅಂಶಗಳು ಬಾಬಾ ವಂಗಾ ಅವರ ಭವಿಷ್ಯವಾಣಿಯನ್ನು ಭಾಗಶಃ ನಿಜವಾಗಿಸಬಹುದು ಎಂದು ಕೆಲವರು ಅಭಿಪ್ರಾಯಪಡುತ್ತಾರೆ.

ಮೂರನೇ ಮಹಾಯುದ್ಧ ಮತ್ತು ಅನ್ಯಗ್ರಹ ಜೀವಿಗಳ ಸಂಪರ್ಕ
ಆರ್ಥಿಕ ಬಿಕ್ಕಟ್ಟಿನ ಜೊತೆಗೆ, 2026ರಲ್ಲಿ ಜಾಗತಿಕ ಸಂಘರ್ಷವನ್ನೂ ಬಾಬಾ ವಂಗಾ ಮುನ್ಸೂಚಿಸಿದ್ದಾರೆ. 2026 ರಲ್ಲಿ ಅಂತಾರಾಷ್ಟ್ರೀಯ ಸಂಘರ್ಷವು ಜಾಗತಿಕ ಯುದ್ಧಕ್ಕೆ ಕಾರಣವಾಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದನ್ನು ಹಲವರು ಮೂರನೇ ಮಹಾಯುದ್ಧವೆಂದು ವ್ಯಾಖ್ಯಾನಿಸಿದ್ದಾರೆ. ಜಾಗತಿಕ ಉದ್ವಿಗ್ನತೆಗಳು ದೊಡ್ಡ ಯುದ್ಧಕ್ಕೆ ಕಾರಣವಾಗಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ – ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ರಷ್ಯಾ-ಅಮೆರಿಕ ಮುಖಾಮುಖಿ, ಮತ್ತು ಚೀನಾ-ತೈವಾನ್ ಘರ್ಷಣೆ ಇತ್ಯಾದಿ ಕಾರಣಕ್ಕೆ ಅವರ ಭವಿಷ್ಯ ನಿಜವಾಗಬಹುದು ಎಂದು ಹಲವರು ಭಾವಿಸಿದ್ದಾರೆ.
“ನ್ಯೂಕ್ಲಿಯರ್” (Nuclear) ಎಂಬ ಪದವನ್ನು ಅವರು ಬಳಸದಿದ್ದರೂ, ಅವರ “ಜಾಗತಿಕ ವಿವಾದಗಳು” ಮತ್ತು “ಸಾಮೂಹಿಕ ವಿನಾಶ” (mass destruction) ಎಂಬ ಉಲ್ಲೇಖವು ವಿಶ್ವಾದ್ಯಂತ ಜನರನ್ನು ಆತಂಕಕ್ಕೆ ದೂಡಿದೆ. ಅವರು 2026ರ ಕೊನೆಯಲ್ಲಿ ಅನ್ಯಗ್ರಹ ಜೀವಿಗಳೊಂದಿಗೆ (Extraterrestrial life) ಸಂಪರ್ಕದ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಇದು ಅತ್ಯಂತ ನಿಗೂಢವಾದ ಭವಿಷ್ಯವಾಣಿಗಳಲ್ಲಿ ಒಂದಾಗಿದೆ.
ಬಾಬಾ ವಂಗಾ (ವಾಂಗೆಲಿಯಾ ಪಾಂಡೆವಾ ಗುಷ್ಟೆರೋವಾ) ಅವರ ಹಲವಾರು ಭವಿಷ್ಯವಾಣಿಗಳು ಕಾಲಾನಂತರದಲ್ಲಿ ನಿಜವೆಂದು ಸಾಬೀತಾಗಿವೆ ಎಂದು ಅನೇಕರು ನಂಬುತ್ತಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement