ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಪರಿಶೀಲನೆಗೆ ತಜ್ಞರ ಸಮಿತಿ ರಚನೆಗೆ ನಿರ್ಧಾರ, ಹೊಲಗದ್ದೆ ಸುಡುವುದನ್ನು ಅಪರಾಧ ಮುಕ್ತಗೊಳಿಸುವ ರೈತರ ಬೇಡಿಕೆಗೆ ಒಪ್ಪಿಗೆ: ತೋಮರ್

ನವದೆಹಲಿ: ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಿದ ಬಳಿಕ ರೈತರ ಪ್ರಮುಖ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಬಿಕ್ಕಟ್ಟಿನ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವುದಾಗಿ ಕೇಂದ್ರ ಸರಕಾರ ಪ್ರಕಟಿಸಿದೆ. ಕೃಷಿ ಕಾಯ್ದೆಗಳ ರದ್ದತಿ ಬಳಿಕವೂ ಕೃಷಿ ಸುಧಾರಣೆಯ ಅಭಿಯಾನ ಮುಂದುವರಿಯುತ್ತದೆ. ವಿಶೇಷವಾಗಿ ವೈವಿಧ್ಯ ಬೆಳೆ ಪದ್ಧತಿ, ಶೂನ್ಯ ಬಂಡವಾಳ ಕೃಷಿ ಮತ್ತು ಎಂಎಸ್‌ಪಿ ವ್ಯವಸ್ಥೆಯಲ್ಲಿ … Continued