ಉತ್ತಮವಾಗಿ ಸಂರಕ್ಷಿಸಲ್ಪಟ್ಟ 3,000 ವರ್ಷಗಳಷ್ಟು ಹಳೆಯ ಕತ್ತಿ ಪತ್ತೆ ಮಾಡಿದ ಪುರಾತತ್ವಶಾಸ್ತ್ರಜ್ಞರು

ಕಂಚಿನ ಯುಗದ ಸಮಾಧಿಯೊಂದರಿಂದ 3,000 ವರ್ಷಗಳಷ್ಟು ಹಳೆಯದಾದ ಖಡ್ಗವನ್ನು ಜರ್ಮನಿಯಲ್ಲಿ ಪುರಾತತ್ತ್ವಜ್ಞರು ಕಂಡುಕೊಂಡಿದ್ದಾರೆ. ಅತ್ಯುತ್ತಮ ಸಂರಕ್ಷಣೆಯಿಂದಾಗಿ ಅದು ಇನ್ನೂ ಹೊಳೆಯುತ್ತಿದೆ. ಸ್ಮಾರಕ ಸಂರಕ್ಷಣೆಗಾಗಿ ಇರುವ ಬವೇರಿಯನ್ ಸ್ಟೇಟ್ ಆಫೀಸ್ ಜೂನ್ 14 ರಂದು ನೀಡಿದ ಹೇಳಿಕೆಯ ಪ್ರಕಾರ, 3,000 ವರ್ಷಗಳಷ್ಟು ಹಳೆಯದಾದ ಖಡ್ಗವು ಬವೇರಿಯನ್ ಪಟ್ಟಣವಾದ ನಾರ್ಡ್ಲಿಂಗೆನ್‌ನಲ್ಲಿ ಪುರುಷ, ಮಹಿಳೆ ಮತ್ತು ಮಗುವಿನ ಸಮಾಧಿಯಲ್ಲಿ ಕಂಡುಬಂದಿದೆ. … Continued