ಬೆಳಗಾವಿ | ಮರಾಠಿ ಮಾತನಾಡಲು ಬರಲ್ಲ ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಹಲ್ಲೆ : ಮತ್ತೊಬ್ಬ ಆರೋಪಿ ಬಂಧನ

ಬೆಳಗಾವಿ : ಮರಾಠಿ ಮಾತನಾಡಲು ಬರಲ್ಲ ಎಂದು ಹೇಳಿದ್ದಕ್ಕೆ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ಬಸ್‌ ನಿರ್ವಾಹಕ ಮಹಾದೇವ ಹುಕ್ಕೇರಿ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಮಾರಿಹಾಳ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದ್ದು, ಈಗ ಬಾಳೇಕುಂದ್ರಿಯ ಮೋಹನ ಹಂಚಿನಾಳ … Continued

ಬೆಳಗಾವಿ | ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ, ಗಡಿ ಉದ್ವಿಗ್ನ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಸಾರಿಗೆ ಬಸ್ ಸಂಚಾರ ಸ್ಥಗಿತ

ಬೆಳಗಾವಿ: ಬಸ್‌ ಕಂಡಕ್ಟರ್‌ ಮರಾಠಿ ಭಾಷೆಯಲ್ಲಿ ಮಾತನಾಡಲಿಲ್ಲವೆಂದು ಸಾರಿಗೆ ಸಂಸ್ಥೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಸಾರಿಗೆ ಬಸ್ ಸಂಚಾರವನ್ನು ಮಹಾರಾಷ್ಟ್ರ ಸರ್ಕಾರ ಸ್ಥಗಿತಗೊಳಿಸಿದೆ. ಸುಳೆಭಾವಿ … Continued

ಬೆಳಗಾವಿ | ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಹಲ್ಲೆಗೊಳಗಾದ ನಿರ್ವಾಹಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಬೆಳಗಾವಿ: ಮರಾಠಿ ಮಾತನಾಡದ ನಿರ್ವಾಹಕನ ಮೇಲೆ ಪುಂಡರು ಹಲ್ಲೆ ನಡೆಸಿದ ಪ್ರಕರಣದಲ್ಲಿ ಹಲ್ಲೆಗೊಳಗಾದ ನಿರ್ವಾಹಕನ ವಿರುದ್ಧವೇ ಪೋಕ್ಸೋ (POCSO) ಪ್ರಕರಣ ದಾಖಲಿಸಲಾಗಿದೆ. ಬೆಳಗಾವಿಯ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ನನಗೆ ಮರಾಠಿ ಅರ್ಥವಾಗಲ್ಲ, ಕನ್ನಡದಲ್ಲಿ ಮಾತನಾಡು ಎಂದು ಹೇಳಿದ್ದಕ್ಕೆ ನಿರ್ವಾಹಕನ ಮೇಲೆ ಶುಕ್ರವಾರ ಹಲ್ಲೆ ನಡೆಸಲಾಗಿತ್ತು, ನಿರ್ವಾಹಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದರು. ಈಗ ನಿರ್ವಾಹಕ ಮಹಾದೇವ … Continued

ಬೆಳಗಾವಿ : ಮರಾಠಿ ಬರಲ್ಲ , ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬಸ್‌ ಕಂಡಕ್ಟರ್‌ ಮೇಲೆ ಹಲ್ಲೆ

ಬೆಳಗಾವಿ: ತನಗೆ ಮರಾಠಿಯಲ್ಲಿ ಮಾತನಾಡಲು ಬರುವುದಿಲ್ಲ, ಕನ್ನಡದಲ್ಲಿ ಹೇಳಿ ಎಂದಿದ್ದಕ್ಕೆ ಜನರನ್ನು ಕರೆಸಿ ರಾಜ್ಯ ಸಾರಿಗೆ ಸಂಸ್ಥೆ ಕಂಡಕ್ಟ‌ರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಬಾಳೆಕುಂದ್ರಿ ಕೆ.ಎಚ್‌.ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಳಗಾವಿಯ ಮಾರಿಹಾಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಬಸ್ ಕಂಡಕ್ಟರ್ ಮಹದೇವ ಹಲ್ಲೆಗೊಳಗಾದವರು. ಇವರಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ … Continued

ಬೆಳಗಾವಿ | ಉದ್ಯಮಿ ಅಪಹರಣ ; ಬಿಡುಗಡೆ ಮಾಡಲು ₹ 5 ಕೋಟಿ ಬೇಡಿಕೆ

ಬೆಳಗಾವಿ: ಸಿನಿಮೀಯ ರೀತಿಯಲ್ಲಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ದಂಡಾಪುರ ಕ್ರಾಸ್ ಬಳಿ ನಡೆದಿದ್ದು, ಅಪಹರಣಕಾರರು 5 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ನೀಲಪ್ಪ ಅಂಬಿ(48) ಎಂಬ ವ್ಯಕ್ತಿಯನ್ನು ಅಪಹರಿಸಲಾಗಿದೆ. ಬಸವರಾಜ ಅವರ ಫೋನ್ ನಿಂದ ಅವರ ಪತ್ನಿ ಶೋಭಾ ಅವರಿಗೆ ಕರೆ … Continued

ಬೆಳಗಾವಿ : ಆಟೋ ಚಾಲಕನಿಂದ ಹಲ್ಲೆಗೊಳಗಾದ ಕೆಲವೇ ಕ್ಷಣಗಳಲ್ಲಿ ಗೋವಾದ ಮಾಜಿ ಶಾಸಕ ಸಾವು

ಬೆಳಗಾವಿ : ಬೆಳಗಾವಿಗೆ ಬಂದಿದ್ದ ಗೋವಾದ ಮಾಜಿ ಶಾಸಕರ ಲಾವೋ ಮಾಮಲೇದಾರ (69) ಜೊತೆಗೆ ಕ್ಷುಲ್ಲಕ ಕರಣಕ್ಕೆ ಜಗಳ ಆರಂಭಿಸಿದ ಆಟೋ ಚಾಲಕ ಅವರ ಮೇಲೆ ಹಲ್ಲೆ ಮಾಡಿದ್ದು, ನಂತರ ಮಾಜಿ ಶಾಸಕರು ಅಲ್ಲಿಂದ ಲಾಡ್ಜ್ ಒಳಗೆ ಬರುವಾಗ ಕುಸಿದು ಬಿದ್ದು ಸಾವಿಗೀಡಾದ ಘಟನೆ ಶನಿವಾರ ನಡೆದಿದೆ. ಬೆಳಗಾವಿಯ ಖಡೇಬಜಾರ್ ಮಾರುಕಟ್ಟೆಯ ಶ್ರೀನಿವಾಸ ವಸತಿ ಗೃಹ … Continued

ಬೆಂಗಳೂರು-ಧಾರವಾಡ ವಂದೇ ಭಾರತ ರೈಲು ಬೆಳಗಾವಿ ವರೆಗೆ ವಿಸ್ತರಣೆ ; ಶೆಟ್ಟರ

ಬೆಳಗಾವಿ : ಬೆಂಗಳೂರು-ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ “ವಂದೇ ಭಾರತ” ರೈಲು ಸಂಚಾರವನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸಲಾಗಿದ್ದು, ನೂತನ ವೇಳಾ ಪಟ್ಟಿಯಂತೆ ಶೀಘ್ರದಲ್ಲಿ ತನ್ನ ನೂತನ ಸಂಚಾರವನ್ನು ಬೆಳಗಾವಿಯಿಂದ ಆರಂಭಿಸಲಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ತಿಳಿಸಿದ್ದಾರೆ. ಈ ಕುರಿತು ಫೆಬ್ರವರಿ 10ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರೊಂದಿಗೆ, ಕೇಂದ್ರ … Continued

ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರ ಸದಸ್ಯತ್ವ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಜಯಂತ ಜಾಧವ ಮತ್ತು ಮಂಗೇಶ ಪವಾರ ಅವರ ಸದಸ್ಯತ್ವ ರದ್ದುಗೊಂಡಿದೆ. ಬೆಳಗಾವಿ ಗೋವಾವೆಸ್ ತಿನಿಸು ಕಟ್ಟೆ ಮಳಿಗೆಗಳನ್ನು ತಮ್ಮ ಪ್ರಭಾವ ಬಳಸಿ ಉಪಯೋಗಿಸಿದ್ದ ಕಾರಣಕ್ಕೆ ಇಬ್ಬರ ಸದಸ್ಯರ ಸದಸ್ಯತ್ವ ರದ್ದುಗೊಂಡಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆಣ್ಣವರ ವಾರ್ಡ್‌ ನಂ.41ರ ಸದಸ್ಯ … Continued

ಬೆಳಗಾವಿ ಮೃಗಾಲಯದಲ್ಲಿದ್ದ ಸಿಂಹಿಣಿ ಸಾವು

ಬೆಳಗಾವಿ: ಭೂತರಾಮನಹಟ್ಟಿ ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿದ್ದ ನಿರುಪಮಾ ಎಂ ಸಿಂಹಿಣಿ ಅನಾರೋಗ್ಯದಿಂದ ಮೃತಪಟ್ಟಿದೆ. 15 ವರ್ಷದ ನಿರುಪಮಾ ಎಂಬ ಹೆಸರಿನ ಸಿಂಹಿಣಿ ಗುರುವಾರ ವೃದ್ಧಾಪ್ಯ ಹಾಗೂ ಬಹುಅಂಗಾಂಗಗಳ ವೈಫಲ್ಯದಿಂದ ಮೃತಪಟ್ಟಿದೆ. ನಿರುಪಮಾ ಸಿಂಹವನ್ನು 15 ದಿನಗಳಿಂದ ವನ್ಯಜೀವಿ ವೈದ್ಯರ ಸಲಹೆಯಂತೆ ಉಪಚರಿಸಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲ ನೀಡಲಿಲ್ಲ. ಇದನ್ನು ಬೆಂಗಳೂರಿನ ಬನ್ನೇರುಘಟ್ಟ ಮೃಗಾಲಯದಿಂದ ನಾಲ್ಕು … Continued

ಬೆಳಗಾವಿ | ಸಾಲದ ಬಾಧೆ ; ವಿಷ ಸೇವಿಸಿ ರೈತ ಆತ್ಮಹತ್ಯೆ

ಬೆಳಗಾವಿ :  ಕಿರುಕುಳ ತಾಳಲಾರದೇ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಅಳಗವಾಡಿಯ ಶಿವನಪ್ಪ ಧರ್ಮಟ್ಟಿ (66) ಎಂದು ಗುರುತಿಸಲಾಗಿದೆ. ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗೆ ವಿವಿಧ ಫೈನಾನ್ಸ್ ಕಂಪನಿಯಲ್ಲಿ ಅವರು 10 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. … Continued