೧೫೦೦ ಸಮಾವೇಶಗಳು, ೧೫,೦೦೦ ವಾಟ್ಸಾಪ್‌ ಗ್ರುಪ್‌ಗಳು: ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ…!

ನವ ದೆಹಲಿ: ಮುಂಬರುವ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ 1,500 ಕ್ಕೂ ಹೆಚ್ಚು ಬೃಹತ್‌ ಸಮಾವೇಶಗಳು, 15,000 ವಾಟ್ಸಾಪ್ ಗುಂಪುಗಳು ಮತ್ತು ಪಕ್ಷದ ಪ್ರಮುಖ ಮುಖಂಡರು ಶಿಬಿರ ನಡೆಸಲು ಬಿಜೆಪಿ ತಯಾರಿ ನಡೆಸುತ್ತಿದೆ. ಪಶ್ಚಿಮ ಬಂಗಾಳದ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರ ಪ್ರಕಾರ, ಮತದಾರರನ್ನು ತಲುಪಲು ಕನಿಷ್ಠ 1,500 ದೊಡ್ಡ ಮತ್ತು ಸಣ್ಣ ಸಮಾವೇಶಗಳನ್ನು ನಡೆಸುವಂತೆ ಬಿಜೆಪಿ ಕೇಂದ್ರ … Continued

ಗುಜರಾತ್‌ ಪುರಸಭೆ ಚುನಾವಣೆ: ೬ರಲ್ಲೂ ಬಿಜೆಪಿ ಜಯ, ಸೂರತ್‌ನಲ್ಲಿ ಪ್ರತಿಪಕ್ಷವಾಗಿ ಎಎಪಿ

ಎಲ್ಲಾ ಆರು ಗುಜರಾತ್ ಪುರಸಭೆಗಳಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿಂಡಿದೆ.   ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯದಲ್ಲಿ ತನ್ನ ಮೊದಲ ಸ್ಪರ್ಧೆಯಲ್ಲಿ 27 ಸ್ಥಾನಗಳನ್ನು ಗೆದ್ದಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ 21 ಸ್ಥಾನಗಳಲ್ಲಿ ಸ್ಪರ್ಧಿಸಿದ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್-ಮುಸ್ಲೀಮೀನ್, ಏಳು ಸ್ಥಾನಗಳನ್ನು ಗೆದ್ದಿದೆ, ಅವುಗಳನ್ನು ಕಾಂಗ್ರೆಸ್‌ನಿಂದ ವಶಪಡಿಸಿಕೊಂಡಿದೆ. ಕಾಂಗ್ರೆಸ್ ನಿಂದ. ಫೆಬ್ರವರಿ 21 ರಂದು ಅಹಮದಾಬಾದ್, ಸೂರತ್, … Continued

ಗುಜರಾತ್‌: ಎರಡು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಅವಿರೋಧ ಆಯ್ಕೆ

ಸಂಸದರ ನಿಧನದ ನಂತರ ಖಾಲಿ ಬಿದ್ದಿದ್ದ ಗುಜರಾತಿನ ಎರಡು ರಾಜ್ಯಸಭಾ ಸ್ಥಾನಗಳನ್ನುಬಿಜೆಪಿ ಗೆದ್ದಿದೆ. ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಮತ್ತು ಬಿಜೆಪಿಯ ಅಭಯ್ ಗಣಪತ್ರೆಯ ಭಾರದ್ವಾಜ್ ಅವರ ನಿಧನದ ನಂತರ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಿತು. ಪ್ರತಿಪಕ್ಷ ಕಾಂಗ್ರೆಸ್ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಬಿಜೆಪಿಯ ದಿನೇಶ್ಚಮದ್ರಾ ಜೆಮಾಲ್ಭಾಯ್ ಅನನ್ವಾಡಿಯಾ ಮತ್ತು ರಂಭಾಯ್ … Continued

ದ್ವೇಷ ಬಿತ್ತುವ ಬಿಜೆಪಿಯವರು ಅಲ್ಪಮಾನವರು: ಸಿದ್ದರಾಮಯ್ಯ

ಬೆಂಗಳೂರು: ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು, ದ್ವೇಷಭಾವನೆ ಬಿತ್ತುವ ಬಿಜೆಪಿಯವರು ಅಲ್ಪಮಾನವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಜಾತಿ, ಧರ್ಮಗಳನ್ನು ಮೀರಿ ಪ್ರತಿಯೊಬ್ಬನನ್ನು ಸಮಾನವಾಗಿ ಕಾಣುವುದೇ ಜಾತ್ಯತೀತತೆ. ಇದು ಕುವೆಂಪುರವರ ವಿಶ್ವಮಾನವ ತತ್ವಕ್ಕೆ ಅನುಗುಣವಾಗಿದೆ. ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಬಿಜೆಪಿಯವರು ಅಲ್ಪಮಾನವರು ಎಂದು ತಿಳಿಸಿದ್ದಾರೆ. ಸರ್ವಧರ್ಮ ಸಮನ್ವಯತೆಯ ತವರಾಗಿದ್ದ ದಕ್ಷಿಣ ಕನ್ನಡವನ್ನು ಬಿಜೆಪಿ … Continued

ಖ್ಯಾತ ಓಟಗಾರ್ತಿ ಪಿ.ಟಿ.ಉಷಾ ಬಿಜೆಪಿಗೆ..?: ಅಲ್ಲಗಳೆದ ಆಪ್ತ ವಲಯ

ತಿರುವನಂತಪುರ: ಕೇರಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಈಗ ರಾಜಕೀಯ ಮೆಟ್ರೋ ಮ್ಯಾನ್ ಶ್ರೀಧರನ್ ನಂತರ ಪಿಟಿ ಉಷಾ ರಾಜಕೀಯಕ್ಕೆ ಧುಮುಕುತ್ತಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಅವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಹೇಳಾಗುತ್ತಿದೆ. ಆದರೆ ಅವರ ಆಪ್ಕೇತ ವಲಯ ಈ ಸುದ್ದಿಯನ್ನು ನಿರಾಕರಿಸಿದೆ.   ಕೇರಳದಲ್ಲಿ ಪ್ರಬಲವಾಗಿ ನೆಲೆಯೂರಲು ಸಿದ್ಧತೆ ನಡೆಸಿರುವ ಬಿಜೆಪಿ ಇದಕ್ಕಾಗಿ ವಿವಿಧ … Continued

ಬಿಜೆಪಿ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ಉದ್ದೇಶಿಸಿ ಮಾತನಾಡಿದ ಪ್ರಧಾನಿ

ಪಕ್ಷದ ಮುಖ್ಯಸ್ಥ ಜೆ ಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಹೊಸ ರಾಷ್ಟ್ರೀಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಭೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸುವ ಮೂಲಕ ತಮ್ಮ ಮಾತು ಪ್ರಾರಂಭಿಸಿದರು.ಸುಮಾರು ಒಂದು ವರ್ಷದಲ್ಲಿ ನಡೆದ ಪಕ್ಷದ … Continued

ಕೇರಳದಲ್ಲಿ ಬಿಜೆಪಿ ಪ್ರಬಲ ಸ್ಪರ್ಧೆ ನೀಡುವ ಪಕ್ಷವಲ್ಲ: ತರೂರ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಿಜೆಪಿ ಪ್ರಬಲ ಸ್ಪರ್ಧಿಯಲ್ಲ ಎಂದು ಹೇಳಿದ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌, ಮೆಟ್ರೋಮ್ಯಾನ್‌ ಇ. ಶ್ರೀಧರನ್‌ ಬಿಜೆಪಿ ಸೇರಿದರೆ ಚುನಾವಣೆಯಲ್ಲಿ ಹೆಚ್ಚಿನ ಪರಿಣಾಮವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗೆಲ್ಲಲು ಹರಸಾಹಸ ಮಾಡಿದ ಬಿಜೆಪಿ ರಾಜ್ಯದಲ್ಲಿ ಪ್ರಬಲ ಸ್ಪರ್ಧೆ ನೀಡುವ ಪಕ್ಷವಲ್ಲ. … Continued

ಬದಾಮಿಯಲ್ಲಿ ನನ್ನ ಸೋಲಿಗೆ ಕೆಲ ಬಿಜೆಪಿ ಮುಖಂಡರ ಷಡ್ಯಂತ್ರವೇ ಕಾರಣ: ಸಚಿವ ಶ್ರೀರಾಮುಲು

ಮೊಳಕಾಲ್ಮೂರು: ಬದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ನಾನು ಸೋಲನುಭವಿಸಲು ಮತದಾರರಲ್ಲ, ಕೆಲ ಬಿಜೆಪಿ ಮುಖಂಡರ ಷಡ್ಯಂತ್ರವೇ ಕಾರಣ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮಲು ಹೇಳಿದರು. ಕೆಲವು ಬಿಜೆಪಿ ನಾಯಕರ ಷಡ್ಯಂತ್ರವೇ ನನ್ನ ಸೋಲಿಗೆ ಕಾರಣ. ನಾನು ಬದಾಮಿ ಕ್ಷೇತ್ರದಲ್ಲಿ ಗೆದ್ದರೆ ಎಲ್ಲಿ ತಮಗೆ ಮುಳುವಾಗಬಹುದೆಂದು ಕೆಲವರು ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಿದರು. ಪ್ರಧಾನಿ ನರೇಂದ್ರ ಮೋದಿ … Continued

ನಂದಿಗ್ರಾಮದಿಂದ ಮಾತ್ರ ಸ್ಪರ್ಧಿಸುವಿರಾ: ಮಮತಾಗೆ ಬಿಜೆಪಿ ಸವಾಲು

ಕೋಲ್ಕತ್ತಾ: ವಿಜಯದ ವಿಶ್ವಾಸವಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಮಾತ್ರ ಸ್ಪರ್ಧಿಸುವುದಾಗಿ ಘೋಷಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬಿಜೆಪಿ ಸವಾಲು ಹಾಕಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಅವರು, ನೀವು ನಂದಿಗ್ರಾಮದಿಂದ ಮಾತ್ರ ಸ್ಪರ್ಧಿಸುತ್ತೀರಾ ಎಂಬುದರ ಕುರಿತು ಘೋಷಣೆ ಮಾಡುವಂತೆ ಮಮತಾ ಬ್ಯಾನರ್ಜಿ ಅವರನ್ನು ಒತ್ತಾಯಿಸಿದರು. … Continued

ಕಾಂಗ್ರೆಸ್‌ ಆಂತರಿಕ ತಿಕ್ಕಾಟ ಮೊದಲು ಬಗೆಹರಿಸಿಕೊಳ್ಳಲಿ: ಸಿದ್ದುಗೆ ಬಿಜೆಪಿ ಟಾಂಗ್‌

ಬೆಂಗಳೂರು: ನಿಮ್ಮ ಪಕ್ಷದೊಳಗಿನ ಆಂತರಿಕ ಹೋರಾಟವನ್ನು ಮೊದಲು ಬಗೆಹರಿಸಿಕೊಳ್ಳಿ ಎಂದು ಬಿಜೆಪಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದೆ. ಕಾಂಗ್ರೆಸ್‌ನಲ್ಲಿ ಅಹಿಂದ ವಿಚಾರವಾಗಿ ಪರ ಹಾಗೂ ವಿರೋಧ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ. ಅಹಿಂದ ಎಂದು ಹೊರಟಿದ್ದ ಸಿದ್ದರಾಮಯ್ಯ ದಿಢೀರನೆ ಅಲ್ಪಸಂಖ್ಯಾತರನ್ನು ಕೈಬಿಟ್ಟು ಹಿಂದ ಎನ್ನುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾಭವಗೊಂಡಾಗಲೇ ಜಾತಿ, … Continued