ವೀಡಿಯೊ..| ಹೆಂಡತಿ ಮನೆಯವರ ಕಾಟಕ್ಕೆ ಮನನೊಂದು ಎಸ್‌ ಎಸ್‌ ಪಿ ಕಚೇರಿ ಎದುರು ತನಗೆ ತಾನೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ…!

ಬದೌನ್: ಪತ್ನಿ ಹಾಗೂ ಅವರ ತವರು ಮನೆಯವರೊಂದಿಗಿನ ಜಗಳದಿಂದಾಗಿ ಮನನೊಂದ ಯುವಕನೊಬ್ಬ ಬುಧವಾರ ಮಧ್ಯಾಹ್ನ ಉತ್ತರ ಪ್ರದೇಶದ ಬದೌನ್‌ನಲ್ಲಿರುವ ಎಸ್‌ಎಸ್‌ಪಿ ಕಚೇರಿಯ ಗೇಟ್‌ನಲ್ಲಿ ತನಗೆ ತಾನೇ ಬೆಂಕಿ ಹಚ್ಚಿಕೊಂಡ ಆಘಾತಕಾರಿ ಘಟನೆ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯುವಕ ಕಚೇರಿ ಎದುರು ಬೆಂಕಿ ಹಚ್ಚಿಕೊಂಡ ನಂತರ ಪೊಲೀಸ್ … Continued

ಪಕ್ಕದ ಮನೆಗೆ ಹೋಗಿ ಚಹಾ ಕೇಳಿದ ನಂತರ ರೇಜರ್‌ ನಿಂದ ಇಬ್ಬರು ಮಕ್ಕಳ ಕತ್ತು ಸೀಳಿ ಕೊಂದ ಕ್ಷೌರಿಕ : ನಂತರ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವು

ಲಕ್ನೋ: ಉತ್ತರ ಪ್ರದೇಶದ ಬದೌನ್‌ನಲ್ಲಿ ಕ್ಷೌರಿಕನೊಬ್ಬ ಪಕ್ಕದಲ್ಲಿ ವಾಸಿಸುತ್ತಿದ್ದ ಇಬ್ಬರು ಮಕ್ಕಳನ್ನು ಕೊಂದು ಮತ್ತೊಬ್ಬನನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ನಡೆದಿದೆ. ನಂತರ ಕ್ಷೌರಿಕ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಂಗಳವಾರ ಸಂಜೆ ನಡೆದ ಘಟನೆ ನಗರದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ವರದಿಯಾಗಿದೆ. ಆರೋಪಿಯನ್ನು ಸಾಜಿದ್ ಎಂದು … Continued