ಯಾವುದು ಏರಿಕೆ..ಯಾವುದು ಇಳಿಕೆ

ನವ ದೆಹಲಿ: ಪ್ರಧಾನಿ  ಮೋದಿ ನೇತೃತ್ವದ ಈ ಒಂಬತ್ತನೇ ಬಜೆಟ್ ನಲ್ಲಿ ಈ ಬಾರಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದು,  ಅಭಿವೃದ್ಧಿ ಯೋಜನೆಗಳತ್ತ ಗಮನಹರಿಸಲಾಗಿದೆ. ಕೊರೊನಾ  ಕಾರಣದಿಂದ ವರ್ಷದಿಂದಲೂ ಜನರ ಆರ್ಥಿಕ ಹಿಂಜರಿತ ಉಂಟಾಗಿದ್ದು,ಹೀಗಾಗಿ ಆರ್ಥಿಕ ಪುನಶ್ಚೇತನಕ್ಕೆ  ಈ ಬಾರಿ ಸಾಮಾನ್ಯ ಜನರಿಗೆ ಬಜೆಟ್ ಯಾವ ರೀತಿ ಅನುಕೂಲವಾಗಿದೆ ಎಂಬ ಬಗ್ಗೆ ಚರ್ಚೆ ನಡೆದಿತ್ತು. ೨೦೨೧-೨೨ನೇ … Continued

ಬಜೆಟ್‌ ಪ್ರಸ್ತಾವಕ್ಕೆ ಎಐಟಿಯುಸಿ ವಿರೋಧ

ಬೆಂಗಳೂರು: ಕೇಂದ್ರದ ಬಜೆಟ್‌  ಜನಸಮಾನ್ಯರ ಮೇಲೆ ಮತ್ತಷ್ಟು ತೆರಿಗೆಗಳನ್ನು ಹೊರಿಸಿದೆ.  ಈ ಬಜೆಟ್ ಜನ ವಿರೋಧಿ ಹಾಗೂ ನಿರಾಶಾದಾಯಕ ಬಜೆಟ್ ಅಗಿದೆ ಎಂದು ಎಐಟಿಯುಸಿ ಹೇಳಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ ಪಕೊರೋನಾ  ಹಾಗೂ ಇತರೆ ಕಾರಣಗಳಿಂದ ನಿರುದ್ಯೋಗ ಹೆಚ್ಚಾಗಿದ್ದು, ಸಾವಿರಾರು ಜನರು ಬೀದಿ ಪಾಲಾಗಿದ್ದಾರೆ, ಸರ್ಕಾರದ ತೆರಿಗೆ … Continued

ಸಮೃದ್ಧ ಭಾರತ ನಿರ್ಮಾಣದ ಐತಿಹಾಸಿಕ ಬಜೆಟ್ : ಪ್ರಲ್ಹಾದ ಜೋಶಿ

  ಹುಬ್ಬಳ್ಳಿ :   ಕೇಂದ್ರ ಅರ್ಥ ಸಚಿವೆ  ನಿರ್ಮಲಾ ಸೀತಾರಾಮನ್  ಮಂಡಿಸಿದ ೨೦೨೧-೨೨ನೇ ಸಾಲಿನ ಆಯವ್ಯಯ ಆರೋಗ್ಯ ಹಾಗೂ ಸಮೃದ್ಧ ಭಾರತ ನವನಿರ್ಮಾಣದ ದಿಸೆಯಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ  ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ. ಈ ಅಯವ್ಯಯದಲ್ಲಿ ಆರು ಮುಖ್ಯ ಆಧಾರ ಸ್ಥಂಭಗಳನ್ನು ಪರಿಚಯಿಸಿದ ಅರ್ಥಸಚಿವರು ಇದರ ಒಟ್ಟು ಸಾರವಾಗಿ ಈ … Continued

ಆರೋಗ್ಯ, ಮೂಲ ಸೌಕರ್ಯ, ಬೆಳವಣಿಗೆ ದೃಷ್ಟಿಯ ಸಮತೋಲಿತ ಬಜೆಟ್‌

  ನವ ದೆಹಲಿ: ಕೇಂದ್ರ ಬಜೆಟ್ 2021-22 ಬಜೆಟ್‌  ಅನಾವರಣಗೊಂಡಿದ್ದು,  ಮೊದಲ ಬಾರಿಗೆ ಡಿಜಿಟಲ್ ಸ್ವರೂಪದಲ್ಲಿ ಮಂಡನೆಯಾಗಿದೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್   ನಿಯಂತ್ರಕ ಮಾನದಂಡಗಳನ್ನು ಅನುಸರಿಸುವ ಸಲುವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ  20,000 ಕೋಟಿ ರೂ.ಗಲ ಬಂಡವಾಳ ಹೂಡಿಕೆ ಪ್ರಕಟಿಸಿದ್ದಾರೆ. 2020-21ರ ಆರ್ಥಿಕ ವರ್ಷದಲ್ಲಿ ಪಿಎಸ್‌ಬಿಗಳ ಮರು ಬಂಡವಾಳೀಕರಣಕ್ಕಾಗಿ ಸರ್ಕಾರ   20,000 ಕೋಟಿ ರು. … Continued

ಕನಿಷ್ಠ ಬೆಂಬಲ ನೀಡಲು ಬದ್ಧ

ನವ ದೆಹಲಿ: 2021ನೇ ಸಾಲಿನ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರೈತರ ಏಳ್ಗೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬದ್ಧವಾಗಿದ್ದು,  ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆಗೆ  ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಬೆಳೆಗಳು ಹಾಗೂ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುವಂತೆ ಸರ್ಕಾರ ಮಾಡುತ್ತದೆ.  ವರ್ಷದಿಂದ ವರ್ಷಕ್ಕೆ ಸರ್ಕಾರ ಕೃಷಿ … Continued

ಡಿಜಿಟಲ್‌ ಜನಗಣತಿ, ಡಿಜಿಟಲ್‌ ಬಜೆಟ್‌

ನವ ದೆಹಲಿ: ದೇಶದ ಮೊದಲ ಡಿಜಿಟಲ್ ಜನಗಣತಿಗೆ ಕೇಂದ್ರ ಸರ್ಕಾರ 3,768 ಕೋಟಿ ರೂ. ಹಣ   ಮೀಸಲಿಟ್ಟಿದೆ ಎಂದು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಹೇಳಿದರು. ಬಜೆಟ್ 2021ರ ಮಂಡನೆ ಸಮಯದಲ್ವೇಲಿ  ಮಾತನಾಡಿದ ಅವರು, ದೇಶದ ಇತಿಹಾಸದಲ್ಲೇ  ಮೊದಲ ಬಾರಿಗೆ ಡಿಜಿಟಲ್ ಜನಗಣತಿ ಪ್ರಕಟಿಸಿ  ಡಿಜಿಟಲ್ ಜನಗಣತಿಗಾಗಿ ಕೇಂದ್ರ ಸರ್ಕಾರವು 3,768 ಕೋಟಿ ಮೀಸಲಿಡಲಿದೆ … Continued

ಯಾರಿಗೆ ವಿನಾಯ್ತಿ, ಯಾರಿಗೆ ಇಲ್ಲ..?

  ನವ ದೆಹಲಿ: ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಸೋಮವಾರ ಕೇಂದ್ರ ಬಜೆಟ್ 2021 ಅನ್ನು ಮಂಡಿಸಿದರು.  ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ  ಯಾವುದೇ ಬದಲಾವಣೆಗಳಿಲ್ಲ ಎಂದು ಘೋಷಿಸಿದರು. ಆದರೆ, 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆದಾಯದ ಮೂಲವಾಗಿ ಪಿಂಚಣಿ ಮತ್ತು ಬಡ್ಡಿ ಮಾತ್ರ ಇರುವವರು ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗುವುದು. ಹಾಗೂ  ಅನಿವಾಸಿ … Continued

ಶಾಲಾ ಶಿಕ್ಷಣಕ್ಕೆ ಈ ಬಾರಿ ಕಡಿಮೆ ಹಣ

ನವದೆಹಲಿ: ಶಾಲಾ ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್ಟಿನಲ್ಲಿ ಹಣ ನೀಡಿಕೆ ಪ್ರಮಾಣ  ಈ ಬಜೆಟ್‌ನಲ್ಲಿ  ಕುಸಿತ ಕಂಡಿದೆ.  ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುಂಬರುವ ಹಣಕಾಸು ವರ್ಷದಲ್ಲಿ 54,873.66 ಕೋಟಿ ರೂ.ಗಳನ್ನು ಪಡೆಯಲಿದ್ದು, ಇದು ಎರಡು ವರ್ಷಗಳಲ್ಲಿ ನಿಗದಿಪಡಿಸಿದ ಅತ್ಯಂತ ಕಡಿಮೆ ಬಜೆಟ್ ಆಗಿದೆ. ಕೊರೋನಾ ವೈರಸ್‌ನಿಂದ ತೊಂದರೆಗೊಳಗಾಗಿರುವ   ಶಾಲಾ ಶಿಕ್ಷಣಕ್ಕೆ ಹಂಚಿಕೆ … Continued

ಸ್ಟಾರ್ಟ್‌ ಕಂಪನಿಗಳ ತೆರಿಗೆ ರಜೆ ೧ ವರ್ಷ ವಿಸ್ತರಣೆ

COVID-19 ಸಾಂಕ್ರಾಮಿಕದ ಮಧ್ಯೆ ಭಾರತದ ಆರಂಭಿಕ ಉದ್ಯಮಗಳಿಗೆ ಸಹಾಯ ಮಾಡಲು, ಈ ವ್ಯವಹಾರಗಳಿಗೆ ತೆರಿಗೆ ರಜಾದಿನಗಳನ್ನು 2022 ರ ಮಾರ್ಚ್ 31ರ ವರೆಗೆ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ. “ಸ್ಟಾರ್ಟ್‌ಅಪ್‌ಗಳಿಗೆ ತೆರಿಗೆ ರಜಾದಿನಗಳನ್ನು 2022 ಮಾರ್ಚ್ 31 ರವರೆಗೆ ಒಂದು ವರ್ಷ ವಿಸ್ತರಿಸಲಾಗಿದೆ” ಸ್ಟಾರ್ಟ್‌ಅಪ್‌ಗಳಿಗೆ ನೀಡಲಾದ ಬಂಡವಾಳ ಲಾಭದ ವಿನಾಯಿತಿಯನ್ನು ಸಹ ಒಂದು ವರ್ಷ ಹೆಚ್ಚಿಸಲಾಗಿದೆ. … Continued

ಪ್ರತಿ ಲೀಟರ್‌ ಪೆಟ್ರೋಲಿಗೆ ೨.೫ ರೂ. ಕೃಷಿ ಸೆಸ್‌

ನವದೆಹಲಿ:  2021-22ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಇಂಧನದ ಮೇಲೆ ಕೃಷಿ ಸೆಸ್ ಅನ್ನು ಪ್ರಸ್ತಾಪಿಸಲಾಗಿದೆ.   ಬಜೆಟ್ ಅಡಿಯಲ್ಲಿ, ಸರ್ಕಾರವು ಪೆಟ್ರೋಲಿಗೆ  ಪ್ರತಿ ಲೀಟರಿಗೆ 2.5 ರೂ. ಹಾಗೂ ಪ್ರತಿ ಲೀಟರ್‌ ಡೀಸೆಲ್‌ಗೆ 4 ರೂ.ಗಳ ಕೃಷಿ ಸೆಸ್ ಅನ್ನು ಹಾಕುವ ಬಗ್ಗೆ  ಪ್ರಸ್ತಾಪಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ … Continued