ಕೇವಲ 7 ಸೆಕೆಂಡುಗಳಲ್ಲಿ ಹೃದ್ರೋಗ ಪತ್ತೆ ಹಚ್ಚುವ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಆ್ಯಪ್ ಸಿದ್ಧಪಡಿಸಿದ ಆಂಧ್ರ ಮೂಲದ 14 ವರ್ಷದ ಬಾಲಕ…!

ಈಗ ಅಮೆರಿಕದ ಟೆಕ್ಸಾಸ್‌ನ ಫ್ರಿಸ್ಕೊದಲ್ಲಿ ನೆಲೆಸಿರುವ ಆಂಧ್ರಪ್ರದೇಶದ ಅನಂತಪುರ ಮೂಲದ ಅದ್ಭುತ ಪ್ರತಿಭೆ 14 ವರ್ಷದ ಸಿದ್ಧಾರ್ಥ ನಂದ್ಯಾಲ ಎಂಬ ಹುಡುಗ ಹೃದಯ ಸಂಬಂಧಿ ಕಾಯಿಲೆ (Heart Disease) ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ(AI) ಬಳಸಿ ಅಪ್ಲಿಕೇಷನ್‌ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಒರಾಕಲ್‌ (Oracle) ಮತ್ತು ಎಆರ್‌ಎಂ(ARM)ನಿಂದ ವಿಶ್ವದ ಅತ್ಯಂತ ಕಿರಿಯ ಕೃತಕ … Continued

3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ 50,000 ರೂ.ಬಹುಮಾನ ; ಗಂಡು ಮಗುವಿಗೆ ಜನ್ಮ ನೀಡಿದರೆ ಒಂದು ಹಸು; ಘೋಷಣೆ ಮಾಡಿದ ಸಂಸದ…!

ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಕುಟುಂಬಗಳಿಗೆ ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಲು ಪ್ರೋತ್ಸಾಹಿಸಿದ ಹಿನ್ನೆಲೆಯಲ್ಲಿ, ಪಕ್ಷದ ವಿಜಯನಗರದ ಲೋಕಸಭಾ ಸದಸ್ಯರು ಕಲಿಸೆಟ್ಟಿ ಅಪ್ಪಲ ನಾಯ್ಡು ಅವರು ಮೂರನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ತಲಾ 50,000 ರೂ. ಬಹುಮಾನ ಘೋಷಿಸಿದ್ದಾರೆ…! ಅಲ್ಲದೆ, ಗಂಡು ಮಗುವಿಗೆ ಜನ್ಮ ನೀಡಿದರೆ ಮಹಿಳೆಗೆ ಹಸುವನ್ನು … Continued

ವೀಡಿಯೊ…| ತಿರುಪತಿ ಕಾಲ್ತುಳಿತದಲ್ಲಿ ಆರು ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ ; ಅಸ್ವಸ್ಥ ಮಹಿಳೆ ಹೊರಬರಲು ಗೇಟ್ ತೆರೆದ ನಂತರ ಗೊಂದಲ

ತಿರುಪತಿ ದೇವಸ್ಥಾನದ ಬಳಿ ಬುಧವಾರ ಸಂಜೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಜನದಟ್ಟಣೆ ಮತ್ತು ಅನಿಯಂತ್ರಿತ ಟೋಕನ್ ವಿತರಣೆಯು ಮಾರಣಾಂತಿಕ ತಿರುಪತಿ ಕಾಲ್ತುಳಿತ ಘಟನೆಗೆ ಕಾರಣಗಳೆಂದು ಚರ್ಚಿಸಲಾಗುತ್ತಿದೆ. ತಿರುಮಲ ಶ್ರೀವಾರಿ ವೈಕುಂಠ ದ್ವಾರ ಟಿಕೆಟ್ ಕೌಂಟರ್ ಬಳಿಯ ವಿಷ್ಣು ನಿವಾಸದ ಬಳಿ ದರ್ಶನ ಟೋಕನ್ ವಿತರಣೆ ವೇಳೆ ಈ … Continued

ಚಂದ್ರಬಾಬು ನಾಯ್ಡು ದೇಶದ ಅತಿ ಶ್ರೀಮಂತ ಸಿಎಂ ; ಮಮತಾ ಬ್ಯಾನರ್ಜಿ ಬಡ ಸಿಎಂ ; ಸಿದ್ದರಾಮಯ್ಯ ಎಷ್ಟನೇ ಸಿರಿವಂತ ಸಿಎಂ ಗೊತ್ತೆ..?

 ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು 931 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷ ರೂ.ಗಳೊಂದಿಗೆ ಅತ್ಯಂತ ಬಡವರು ಎಂದು ಸೋಮವಾರ ಬಿಡುಗಡೆಯಾದ ಅಸೋಸಿಯೇಷನ್ ​​​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ. ವಿವಿಧ ರಾಜ್ಯಗಳು ಮತ್ತು … Continued

ತಿರುಪತಿ ಲಡ್ಡು ತಯಾರಿಸಲು ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢ ಎಂದ ಟಿಡಿಪಿ…!

ಅಮರಾವತಿ : ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂದು ಲ್ಯಾಬ್ ವರದಿ ದೃಢಪಡಿಸಿದೆ. ಹಿಂದಿನ ವೈಎಸ್‌ಆರ್ ಕಾಂಗ್ರೆಸ್ (ವೈಎಸ್‌ಆರ್‌ಸಿಪಿ) ಸರ್ಕಾರ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ್ದರು. … Continued

ಹಿಂದಿನ ಜಗನ್ ಸರ್ಕಾರ ಆಡಳಿತದಲ್ಲಿ ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ; ಚಂದ್ರಬಾಬು ನಾಯ್ಡು ಗಂಭೀರ ಆರೋಪ

ಅಮರಾವತಿ : ಹಿಂದಿನ ವೈಎಸ್ಆರ್ ಕಾಂಗ್ರೆಸ್ ಸರ್ಕಾರದಲ್ಲಿ ʼತಿರುಪತಿ ಲಡ್ಡುʼಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗಂಭೀರ ಆರೋಪ ಮಾಡಿದ್ದಾರೆ. ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಈ ಆರೋಪವನ್ನು ತಳ್ಳಿಹಾಕಿದೆ ಮತ್ತು ಇದು ದುರುದ್ದೇಶಪೂರಿತ ಆರೋಪ ಎಂದು ಹೇಳಿದೆ. ಬುಧವಾರ ನಡೆದ … Continued

ವೀಡಿಯೊಗಳು…| ಆಂಧ್ರ ಸಿಎಂ ಧೈರ್ಯ ನೋಡಿ…: ರೈಲ್ವೆ ಸೇತುವೆ ಮೇಲಿಂದ ಪ್ರವಾಹ ಸ್ಥಿತಿ ವೀಕ್ಷಿಸುತ್ತಿದ್ದಾಗ ಇಂಚುಗಳಷ್ಟು ಸಮೀಪ ಹಾದುಹೋದ ರೈಲು

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ವಿಜಯವಾಡದ ಮಧುರಾನಗರದ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ರೈಲ್ವೆ ಸೇತುವೆ ಮೇಲೆ ಗುರುವಾರ ಪರಿಶೀಲಿಸುವ ವೇಳೆ ರೈಲಿಗೆ ಬಹಳ ಬಹಳ ಸಮೀಪದಲ್ಲಿಯೇ ಇದ್ದರೂ ಸ್ವಲ್ಪವೂ ವಿಚಲಿತರಾಗದೇ ಇರುವುದು ಗಮನ ಸೆಳೆದಿದೆ. ನಾಯ್ಡು ಮತ್ತು ಅವರ ತಂಡವು ರೈಲ್ವೇ ಹಳಿಯೊಂದರ ಕೆಳಗೆ ಉಕ್ಕಿ ಹರಿಯುತ್ತಿರುವ ಹೊಳೆಯನ್ನು ವೀಕ್ಷಿಸಲು ನಡೆದುಕೊಂಡು ಹೋಗುತ್ತಿದ್ದಾಗ … Continued

ವೀಡಿಯೊ..| ಅಂದು ಕಣ್ಣೀರಿಟ್ಟು ಸಿಎಂ ಆಗಿಯೇ ವಿಧಾನಸಭೆಗೆ ಬರುವೆ ಎಂದು ಶಪಥ ಮಾಡಿ ಹೊರನಡೆದಿದ್ದ ಚಂದ್ರಬಾಬು ನಾಯ್ಡು 31 ತಿಂಗಳ ನಂತರ ಸಿಎಂ ಆಗಿಯೇ ಕಾಲಿಟ್ಟರು..

ಅಮರಾವತಿ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ‘ತನ್ನ ಕುಟುಂಬಕ್ಕೆ ಅವಮಾನ ಮಾಡಲಾಗಿದೆ’ ಎಂದು ಕಣ್ಣೀರು ಸುರಿಸಿ ವಿಧಾನಸಭೆಯಿಂದ ಹೊರಬಂದ 31 ತಿಂಗಳ ನಂತರ ಇಂದು, ಶುಕ್ರವಾರ (ಜೂನ್‌ 21) ಆಂಧ್ರಪ್ರದೇಶ ವಿಧಾನಸಭೆಗೆ ಮರಳಿದ್ದಾರೆ. ಚಂದ್ರಬಾಬು ನಾಯ್ಡು ನವೆಂಬರ್ 2021 ರಲ್ಲಿ ತಾನು ಮುಖ್ಯಮಂತ್ರಿಯಾದ ನಂತರವೇ ವಿಧಾನಸಭೆಗೆ ಹಿಂತಿರುಗುವುದಾಗಿ ಪ್ರತಿಜ್ಞೆ ಮಾಡಿ ವಿಧಾಸಭೆಯಿಂದ … Continued

ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಇಂದು ಪ್ರಮಾಣ ; ಪವನ ಕಲ್ಯಾಣ ಡಿಸಿಎಂ

ವಿಜಯವಾಡ: ಆಂಧ್ರಪ್ರದೇಶದಲ್ಲಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದ 25 ಸದಸ್ಯರ ಸಚಿವ ಸಂಪುಟ ಇಂದು ಬುಧವಾರ (ಜೂನ್‌ 12) ಪ್ರಮಾಣ ವಚನ ಸ್ವೀಕರಿಸಲಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನೇತೃತ್ವದ ಸರ್ಕಾರದಲ್ಲಿ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರು ಏಕೈಕ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಬುಧವಾರ ಮುಂಜಾನೆ ಬಿಡುಗಡೆಯಾದ 24 ಸಚಿವರ ಪಟ್ಟಿಯಲ್ಲಿ ಜನಸೇನಾ ಪಕ್ಷದ ಮೂವರು … Continued

ವೀಡಿಯೊ…| ಅಂತ್ಯಕ್ರಿಯೆಗೆ ಒಯ್ಯುವಾಗ ರಾಮೋಜಿ ರಾವ್ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು

ಹೈದರಾಬಾದ್: ಮಾಧ್ಯಮ ಬ್ಯಾರೋನ್‌ ಚೆರುಕುರಿ ಹಾಗೂ ರಾಮೋಜಿ ರಾವ್‌ ಫಿಲಮ್‌ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ಅವರ ಅಂತ್ಯಕ್ರಿಯೆ ಭಾನುವಾರ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ತೆಲಂಗಾಣ ಪೊಲೀಸರ ತುಕಡಿ ರಾಮೋಜಿ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷರಿಗೆ ಗೌರವ ಸೂಚಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿತು. ಅಂತ್ಯಕ್ರಿಯೆಯಲ್ಲಿ ರಾಮೋಜಿ ರಾವ್ ಅವರ ಪುತ್ರ ಮತ್ತು … Continued