ಬೆಂಗಳೂರು : ಬೆಳ್ಳಂದೂರು ಪೊಲೀಸರಿಂದ 800 ಕೆಜಿ ಜೆಲಟಿನ್ ವಶ
ಬೆಂಗಳೂರು: ಬೆಂಗಳೂರಿನ ಭೋಗನಹಳ್ಳಿ ಸಮೀಪದ ನಿರ್ಮಾಣ ಸ್ಥಳದಲ್ಲಿ ಬಂಡೆಗಳನ್ನು ಸ್ಫೋಟಿಸಲು ಅಕ್ರಮವಾಗಿ ಬಳಸಲಾಗುತ್ತಿತ್ತು ಎನ್ನಲಾದ 800 ಕೆಜಿಗೂ ಹೆಚ್ಚು ಜೆಲಟಿನ್‌ನ್ನು ಬೆಳ್ಳಂದೂರು ಪೊಲೀಸರು ಭಾನುವಾರ (ಆಗಸ್ಟ್ 16) ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಸ್ಫೋಟಕ ವಸ್ತುಗಳ ಮೂಲ, ಅವುಗಳ ಸಂಗ್ರಹಣೆ ಹಾಗೂ ಬಳಕೆಗೆ ಅಗತ್ಯ ಅನುಮತಿಗಳನ್ನು ಪಡೆಯಲಾಗಿತ್ತೇ ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ. … Continued