ಕರ್ನಾಟಕದಲ್ಲಿ ಶನಿವಾರ 33 ಸಾವಿರದ ಸಮೀಪಕ್ಕೆ ಬಂದ ದೈನಂದಿನ ಕೊರೊನಾ ಸೋಂಕು..!

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಏರಿಕೆ ಮುಂದುವರಿದಿದೆ. ಇಂದು,ಶನಿವಾರ ರಾಜ್ಯದಲ್ಲಿ ಹೊಸದಾಗಿ 32,793 ಕೊರೊನಾ ಸೋಂಕು ದಾಖಲಾಗಿದೆ ಹಾಗೂ ಏಳು ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿಯೇ 22,284 ಪ್ರಕರಣ ಪತ್ತೆಯಾಗಿದ್ದು, 5 ಮಂದಿ ಮರಣ ಹೊಂದಿದ್ದಾರೆ. ರಾಜ್ಯದಲ್ಲಿ ಸಕಾರಾತ್ಮಕತೆ ಶೇ. 15 ಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,69,850ಕ್ಕೆ ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ … Continued

ಭಾರತದಲ್ಲಿ 2.68 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲು, ಓಮಿಕ್ರಾನ್ ಸೋಂಕು 6,041ಕ್ಕೆ ಏರಿಕೆ

ನವದೆಹಲಿ: ಭಾರತವು ಶನಿವಾರ 2,68,833 ಹೊಸ ಕೋವಿಡ್ -19 ಸೋಂಕುಗಳನ್ನು ವರದಿ ಮಾಡಿದೆ, ಇದು ನಿನ್ನೆಗಿಂತ 1.8% ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೊಂಡ ಮಾಹಿತಿ ತಿಳಿಸಿದೆ. ಇದು ದೇಶದ ಒಟ್ಟು ಪ್ರಕರಣವನ್ನು 3,68,50,962 ಕ್ಕೆ ಒಯ್ದಿದೆ. ಇದರಲ್ಲಿ 6,041 ಪ್ರಕರಣಗಳು ಕೋವಿಡ್‌ ಓಮಿಕ್ರಾನ್ ರೂಪಾಂತರದ ಸೋಂಕಾಗಿದೆ. ಕಳೆದ 24 ಗಂಟೆಗಳಲ್ಲಿ 402 … Continued

ಕರ್ನಾಟಕದಲ್ಲಿ ಹೊಸದಾಗಿ 28,723 ಕೊರೊನಾ ಸೋಂಕು ದಾಖಲು, 14 ಮಂದಿ ಸಾವು

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿದೆ. ಗುರುವಾರ ಮತ್ತಷ್ಟು ಹೆಚ್ಚಾಗಿದೆ. ಇಂದು, ಗುರುವಾರ ಹೊಸದಾಗಿ 28,723 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ. 3,105 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್​ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ. ನಿನ್ನೆ ಬುಧವಾರ, ಸಂಖ್ಯೆ 25 ಸಾವಿರ ದಾಟಿತ್ತು. ರಾಜಧಾನಿ ಬೆಂಗಳೂರಿನಲ್ಲಿಯೇ 20,121 ಮಂದಿಗೆ … Continued

ಕರ್ನಾಟಕದಲ್ಲಿ ಇಂದು 25 ಸಾವಿರ ಜನರಿಗೆ ಹೊಸದಾಗಿ ಕೊರೊನಾ ಸೋಂಕು..!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳವಾಗಿದೆ. ಇಂದು ಗುರುವಾರ, ಹೊಸದಾಗಿ ರಾಜ್ಯಾದ್ಯಂತ 25,005 ಜನರಿಗೆ ಹೊಸದಾಗಿ ಕೊರೊನಾ ಸೋಂಕು ದಾಖಲಾಗಿದೆ. ಬೆಂಗಳೂರಿನಲ್ಲಿಯೇ 18,374 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 1 ಲಕ್ಷ ಗಡಿಯನ್ನು ದಾಟಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಸುಧಕಾರ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಳೆದ … Continued

ಭಾರತದಲ್ಲಿ ಎರಡೂವರೆ ಲಕ್ಷದ ಸಮೀಪ ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ 27.1% ಹೆಚ್ಚು..!

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ (ಗುರುವಾರ) 2,47,417 ಹೊಸ ಕೋವಿಡ್ -19 ಸೋಂಕುಗಳನ್ನು ವರದಿ ಮಾಡಿದೆ, ಇದು ನಿನ್ನೆಗಿಂತ 27.1%ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೊಂಡ ಅಂಕಿಅಂಶಗಳು ತಿಳಿಸಿವೆ. ಇದು ದೇಶದ ಒಟ್ಟು ಸೋಂಕಿನ ಪ್ರಕರಣವನ್ನು 3,63,17,927ಕ್ಕೆ ಒಯ್ದಿದೆ. ಇದರಲ್ಲಿ 5,488 ಪ್ರಕರಣಗಳು ಓಮಿಕ್ರಾನ್ ರೂಪಾಂತರವಾಗಿದೆ. ಕಳೆದ 24 ಗಂಟೆಗಳಲ್ಲಿ 481 … Continued

ಕರ್ನಾಟಕದಲ್ಲಿ ಬುಧವಾರ 21 ಸಾವಿರಕ್ಕೂ ಹೆಚ್ಚು ದೈನಂದಿನ ಕೊರೊನಾ ಸೋಂಕು, ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಳ..!

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಬುಧವಾರ (ಕಳೆದ 24 ಗಂಟೆ) 21,390 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇವೇಳೆ ರಾಜ್ಯದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಹಾಗೂ 1,541 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಪ್ರತಿ ಜಿಲ್ಲೆಗಳಲ್ಲೂ ಕೂಡ ಕೊರೊನಾ ಪಾಸಿಟಿವ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ಇಂದು ಬೆಂಗಳೂರು … Continued

ಭಾರತದಲ್ಲಿ ಎರಡು ಲಕ್ಷದ ಸಮೀಪ ದೈನಂದಿನ ಕೊರೊನಾ ಸೋಂಕು ದಾಖಲು, ಇದು ಹಿಂದಿನ ದಿನಕ್ಕಿಂತ 15.9% ಹೆಚ್ಚು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ (ಬುಧವಾರ,) 1,94,720 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ನಿನ್ನೆಗಿಂತ 15.9% ಹೆಚ್ಚಾಗಿದೆ. ಇದು ಒಟ್ಟು ಪ್ರಕರಣವನ್ನು 3,60,70,510 ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 165 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 4,84,378 ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ (23) ಗರಿಷ್ಠ ಸಾವುನೋವುಗಳು … Continued

ಕರ್ನಾಟಕದಲ್ಲಿ ಮಂಗಳವಾರ ಹೊಸದಾಗಿ 14,473 ಜನರಿಗೆ ಕೊರೊನಾ ದೃಢ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಇಂದು, ಮಂಗಳವಾರ ಒಟ್ಟು 14,473 ಹೊಸದಾಗಿ ಸೋಂಕು ದಾಖಲಾಗಿದೆ. ಇದೇವೇಳೆ ಸೋಂಕಿನಿಂದ ಐವರು ಮೃತಪಟ್ಟಿದ್ದಾರೆ ಹಾಗೂ ಆಸ್ಪತ್ರೆಯಿಂದ 1,356 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 30,78,129 ಮಂದಿಗೆ ಕೊರೊನಾ ಬಂದಿದೆ. 39,66,461 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ … Continued

ಭಾರತದಲ್ಲಿ 1,68,063 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ಇದು ನಿನ್ನೆಗಿಂತ 6.5% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 1,68,063 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 6.5% ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಇದರೊಂದಿಗೆ, ದೇಶದಲ್ಲಿ ಒಟ್ಟು ಸೋಂಕು 3,58,75,790 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 277 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 4,84,213 … Continued

ಕರ್ನಾಟಕದಲ್ಲಿ ಸೋಮವಾರ ಹೊಸದಾಗಿ 11,698 ಕೊರೊನಾ ಸೋಂಕು, ಬೆಂಗಳೂರಲ್ಲಿ 146 ಓಮಿಕ್ರಾನ್‌ ಸೋಂಕು ದೃಢ

ಬೆಂಗಳೂರು: ಕರ್ನಾಟಕದಲ್ಲಿ ಇಂದು ಹೊಸದಾಗಿ 11,698 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದೇವೇಳೆ ಬೆಂಗಳೂರಿನಲ್ಲಿ 146 ಓಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆ ವರದಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 4 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ, ಅದರಲ್ಲಿ ಇಬ್ಬರು ಬೆಂಗಳೂರಿನವರು. ರಾಜ್ಯಾದ್ಯಂತ ಇಂದು 1,148 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಈಗ 60,148 ಸಕ್ರಿಯ ಪ್ರಕರಣಗಳಿವೆ. ಕೋವಿಡ್‌ … Continued