ಬಿಜೆಪಿ ಸರ್ಕಾರದ ಅವಧಿಯ ‘ಕೋವಿಡ್ ಹಗರಣ’ ತನಿಖೆಗೆ ಎಸ್‌ಐಟಿ ರಚಿಸಲು ಸಚಿವ ಸಂಪುಟ ಅನುಮೋದನೆ: ಎಚ್.ಕೆ. ಪಾಟೀಲ

ಬೆಂಗಳೂರು : ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ವೈದ್ಯಕೀಯ ಉಪಕರಣಗಳ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ನೇಮಿಸಲು (ಎಸ್ಐಟಿ) ರಾಜ್ಯ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ ತಿಳಿಸಿದ್ದಾರೆ. ಮುಖ್ಯಮಂತ್ರಿಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸಚಿವ ಸಂಪುಟದ ನಿರ್ಣಯಗಳ ಕುರಿತು … Continued

ಸಿಂಗಾಪುರದಲ್ಲಿ ಮತ್ತೆ ವಿಜೃಂಭಿಸುತ್ತಿರುವ ಕೋವಿಡ್‌-19 ; 6 ದಿನಗಳಲ್ಲಿ 25,900 ಪ್ರಕರಣಗಳು ದಾಖಲು : ಮಾಸ್ಕ್‌ ಧರಿಸಲು ಶಿಫಾರಸು

ಸಿಂಗಾಪುರ: ಸಿಂಗಾಪುರವು ಮತ್ತೊಂದು ಕೋವಿಡ್‌-19 (COVID-19) ಅಲೆಯ ಪುನರುತ್ಥಾನಕ್ಕೆ ಸಾಕ್ಷಿಯಾಗಿದೆ. ಅಧಿಕಾರಿಗಳು ಮೇ 5 ರಿಂದ ಮೇ 11ರವರೆಗೆ 25,900 ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಜನರಿಗೆ ಮತ್ತೆ ಮಾಸ್ಕ್‌ಗಳನ್ನು ಧರಿಸುವಂತೆ ಸಲಹೆ ನೀಡಿದ್ದಾರೆ. “ನಾವು ಅಲೆಯ ಆರಂಭಿಕ ಭಾಗದಲ್ಲಿದ್ದೇವೆ, ಅದು ಸ್ಥಿರವಾಗಿ … Continued

ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

ದಾಖಲೆಯ 613 ದಿನಗಳ ಕಾಲ ಕೊರೊನಾವೈರಸ್ (COVID-19) ಸೋಂಕಿನಿಂದ ಬಳಲುತ್ತಿದ್ದ ಡಚ್ ವ್ಯಕ್ತಿಯೊಬ್ಬರ ಸುದೀರ್ಘ ಜೀವನ್ಮರಣಗಳ ಹೋರಾಟದಲ್ಲಿ ಕೊನೆಗೂ ಜಯಗಳಿಸಲು ವಿಫಲರಾಗಿ ಕೊನೆಯುಸಿರು ಎಳೆದಿದ್ದಾರೆ. ಈ ಸಮಯದಲ್ಲಿ ವೈರಸ್ ಅನೇಕ ಬಾರಿ ರೂಪಾಂತರಗೊಂಡು ವಿಶಿಷ್ಟವಾದ ಹೊಸ ರೂಪಾಂತರವಾಗಿ ಮಾರ್ಪಟ್ಟಿದೆ ಎಂದು ಆಮ್ಸ್ಟರ್‌ಡ್ಯಾಮ್ ವಿಶ್ವವಿದ್ಯಾಲಯದ ಸಂಶೋಧನೆಯನ್ನು ಉಲ್ಲೇಖಿಸಿ ಟೈಮ್ ವರದಿ ಮಾಡಿದೆ. 72 ವರ್ಷ ವಯಸ್ಸಿನ ಹೆಸರಿಸದ … Continued

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರು, ದೀರ್ಘವ್ಯಾಧಿಯಿಂದ ಬಳಲುತ್ತಿರುವವರು ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಪಡೆಯಬಹುದು

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಜೆನ್-1 ಉಪ ತಳಿ ಪ್ರಕರಣಗಳಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಜನವರಿ 3 ರಿಂದ 60 ವರ್ಷ ಮೇಲ್ಪಟ್ಟವರು ಹಾಗೂ ದೀರ್ಘವ್ಯಾಧಿ (ಕೊಮೊರ್ಬಿಡಿಟಿ) ಬಳಲುತ್ತಿರುವವರು ಜಿಲ್ಲಾ ಆಸ್ವತ್ರೆಗಳಲ್ಲಿ ಲಸಿಕೆ ಪಡೆದುಕೊಳ್ಳಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದ್ದಾರೆ. ಆದರೆ, ಜೆನ್-1 ಉಪ ತಳಿ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ, ಆದರೆ ವೈರಸ್ … Continued