ಕೃಷಿ ಕಾಯ್ದೆಯಲ್ಲಿ ತೊಡಕಿದ್ದರೆ ಬದಲಾವಣೆಗೆ ಸಿದ್ಧ: ರೈತರಿಗೆ ಪ್ರಧಾನಿ ಅಭಯ

ನವದೆಹಲಿ: ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾನೂನುಗಳು ಬಲವಂತವಾಗಿಲ್ಲ ಮತ್ತು ಆಯ್ಕೆಗಳನ್ನು ಮಾತ್ರ ನೀಡುತ್ತವೆ. ಒಂದೊಮ್ಮೆ ರೈತರು ಮನವರಿಕೆಯಾಗುವ ಸಮರ್ಥ ಸಲಹೆಯೊಂದಿಗೆ ಬಂದರೆ ಕಾನೂನಿನಲ್ಲಿ ಬದಲಾವಣೆ ಮಾಡಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ, ಕೃಷಿ ಮಾರುಕಟ್ಟೆಗಳ ಹಳೆಯ ವ್ಯವಸ್ಥೆ ಮತ್ತು ಎಂಎಸ್‌ಪಿ ಮುಂದುವರಿಯುತ್ತದೆ ಎಂದು ಪುನರುಚ್ಚರಿಸಿದ ಅವರು, … Continued

ಮೃತ ರೈತರ ಕುಟುಂಬಸ್ಥರಿಗೆ ನೆರವು: ಐವರು ಶಿಕ್ಷಣತಜ್ಞರಿಂದ ಪೋರ್ಟಲ್‌

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಮೃತಪಟ್ಟ ರೈತರ ನೋಂದಣಿ ಹಾಗೂ ಅವರ ಕುಟುಂಬಸ್ಥರಿಗೆ ನೆರವು ನೀಡಲು ಐವರು ಶಿಕ್ಷಣತಜ್ಞರು ಪೋರ್ಟಲ್‌‌ ಆರಂಭಿಸಿದ್ದಾರೆ. ವಿಶ್ವವಿದ್ಯಾಲಯಗಳ ಪ್ರಸ್ತುತ ಮತ್ತು ಮಾಜಿ ಉಪಕುಲಪತಿಗಳು ಸೇರಿದಂತೆ ಐದು ಪ್ರಮುಖ ಶಿಕ್ಷಣ ತಜ್ಞರು ಭಾನುವಾರ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ (ಪಿಎಯು) ಪೋರ್ಟಲ್‌ಗೆ ಚಾಲನೆ ನೀಡಿದರು. ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದ … Continued

ಒಬಾಮಾಗೆ ನೀಡಿದಂತೆ ಪ್ರಧಾನಿ ಮೋದಿ ರೈತರಿಗೂ ಆತಿಥ್ಯ ನೀಡಲಿ

ಭರೂಚ್: ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾಗೆ ೨೦೧೫ರಲ್ಲಿ ಆತಿಥ್ಯ ನೀಡಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಭಟನಾ ನಿರತ ರೈತರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಬೇಕು ಹಾಗೂ ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದಾರೆ. ಭಾನುವಾರ ಗುಜರಾತ್‌ನ ಸ್ಥಳೀಯ ಸಂಸ್ಥೆಗಳಿಗೆ ಮುಂಬರುವ ಚುನಾವಣೆಗಾಗಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎರಡು … Continued

ರೈತರ ಚಕ್‌ ಜಾಮ್‌ ನಂತರ ದೆಹಲಿ ಗಡಿಗಳಲ್ಲಿ ಹೆಚ್ಚಿದ ಭದ್ರತೆ

ದೆಹಲಿ: ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ರೈತರು ಶನಿವಾರ ದೇಶವ್ಯಾಪಿ ಚಕ್ಜಾಮ್ ‌ ನಡೆಸಿದ ನಂತರ ದೆಹಲಿಯ ಎಲ್ಲ ಗಡಿಗಳಲ್ಲಿ ಭದ್ರತೆ ಇನ್ನಷ್ಟು ತೀವ್ರಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯನ್ನು ಹರಿಯಾಣದೊಂದಿಗೆ ಸಂಪರ್ಕಿಸುವ ಟಿಕ್ರಿ ಗಡಿಯಲ್ಲಿ ಪೋಲಿಸ್ ಮತ್ತು ಅರೆಸೈನಿಕ ಪಡೆಗಳ ಭಾರಿ ನಿಯೋಜನೆ ಕಂಡುಬಂದಿದೆ. ಜೊತೆಗೆ ದೆಹಲಿಯನ್ನು ಉತ್ತರ ಪ್ರದೇಶಕ್ಕೆ ಸಂಪರ್ಕಿಸುವ ಗಾಜಿಪುರ ಗಡಿಯಲ್ಲಿಯೂ ಭದ್ರತೆ … Continued

ದೆಹಲಿಯಲ್ಲಿ ೫೦ ರೈತರ ಬಂಧನ

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ರಾಜಧಾನಿಯ ಹಲವೆಡೆ ನಡೆಸಿದ ಚಕ್ಕಾ ಬಂದ್ ವೇಳೆ ಶಾಹೀದ್ ಪಾರ್ಕ್ ನಲ್ಲಿ 50 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಕಾಯ್ದೆ ವಾಪಸ್ಸಿಗೆ ಬಿಗಿಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿರುವ ರೈತರು ಶನಿವಾರ ದೇಶವ್ಯಾಪಿ ಕರೆ ನೀಡಿದ್ದ ರಸ್ತೆ ತಡೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಯಿತು. ದೆಹಲಿಯ ಶಾಹಿದ್ … Continued

ರೈತರ ಭೇಟಿಗೆ ತೆರಳಿದ ವಿಪಕ್ಷಗಳ ಸಂಸದರ ತಡೆದ ಪೊಲೀಸರು

  ರೈತರ ಭೇಟಿಗೆ ತೆರಳಿದ ವಿಪಕ್ಷಗಳ ಸಂಸದರ ತಡೆದ ಪೊಲೀಸರು ನವ ದೆಹಲಿ: ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾಗಲು ಅಕಾಲಿ ದಳ, ಡಿಎಂಕೆ, ಎನ್‌ಸಿಪಿ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ 10 ವಿರೋಧ ಪಕ್ಷಗಳ ೧೭ ಸಂಸದರನ್ನು ಘಾಜಿಪುರ ಗಡಿಯನ್ನು ತಲುಪದಂತೆ ಗುರುವಾರ ಪೊಲೀಸರು ತಡೆದರು. ಪ್ರತಿಭಟನಾ ನಿರತ ರೈತರ ಭೇಟಿಯನ್ನು … Continued