ವೈನ್ ಮದ್ಯವಲ್ಲ, ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಲಾಭ

ಮುಂಬೈ: ವೈನ್ ಮದ್ಯವಲ್ಲ, ವೈನ್ ಮಾರಾಟ ಹೆಚ್ಚಿದರೆ ರೈತರಿಗೆ ಹೆಚ್ಚಿನ ಲಾಭ ಬರುತ್ತದೆ ಎಂದು ಶಿವಸೇನೆಯ ಮುಖಂಡ ಸಂಜಯ ರಾವತ್ ಹೇಳಿದ್ದಾರೆ. ರಾಜ್ಯದ ಸೂಪರ್ ಮಾರ್ಕೆಟುಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಲು ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲಿ ರಾವತ್ ಈ ರೀತಿ ಸಮರ್ಥಿಸಿಕೊಂಡಿದ್ದಾರೆ. ಈ ಕ್ರಮದಿಂದ ರೈತರ ಆದಾಯ ದ್ವಿಗೊಳ್ಳಲಿದೆ. ಆದರೆ ಬಿಜೆಪಿ … Continued

ಕೋವಿಡ್ ಪರೀಕ್ಷೆಗೆ ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ

ಬೆಂಗಳೂರು : ಕೊರೊನಾ ಪರೀಕ್ಷೆ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗಸೂಚಿಯಲ್ಲಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ಮಾತ್ರ ಟೆಸ್ಟ್ ಮಾಡಿಸಬೇಕು. ವಿದೇಶದಿಂದ ಬರುವವರಿಗೆ ಎಂದಿನಂತೆ ಟೆಸ್ಟಿಂಗ್ ಇರುತ್ತದೆ ಎಂದು ಮಾರ್ಗಸೂಚಿ ತಿಳಿಸಿದೆ. : ಕರ್ನಾಟಕ ಸರ್ಕಾರವು ಕೊರೊನಾ ವೈರಸ್ ಸೋಂಕು ಪತ್ತೆಗೆ ರೂಪಿಸಿರುವ … Continued

ಸತ್ಯ ನಾಡೆಲ್ಲ ವಿಶ್ವದ ನಂಬರ್​ ಒನ್​ ಸಿಇಒ….ಸುಂದರ್ ಪಿಚೈ ನಂಬರ್‌ 5, ಟಾಟಾದ ಚಂದ್ರಶೇಖರನ್​​ಗೆ 25ನೇ ಸ್ಥಾನ: ಆನಂದ ಮಹೀಂದ್ರಾ ಮುಖೇಶ್​ ಅಂಬಾನಿಗಿಂತ ಟಾಪ್‌..!

ನ್ಯೂಯಾರ್ಕ್: ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲಾ ಅವರನ್ನು ವಿಶ್ವದ ಅಗ್ರ ಸಿಇಒ ಎಂದು ಬ್ರಾಂಡ್ ಫೈನಾನ್ಸ್ ಬ್ರ್ಯಾಂಡ್ ಗಾರ್ಡಿಯನ್‌ಶಿಪ್ ಇಂಡೆಕ್ಸ್ ಶ್ರೇಯಾಂಕ ನೀಡಿದೆ. ಅಮೆರಿಕದಲ್ಲಿ ಮೊದಲ ತಲೆಮಾರಿನ ಭಾರತೀಯ ವಲಸಿಗರಾದ ನಾದೆಲ್ಲಾ, “ಮೈಕ್ರೋಸಾಫ್ಟ್‌ನ ಅದೃಷ್ಟವನ್ನು ತನ್ನ ಕೆಲಸದ ಸಂಸ್ಕೃತಿಯನ್ನು ಟೀಮ್‌ವರ್ಕ್, ನಾವೀನ್ಯತೆ ಮತ್ತು ಒಳಗೊಳ್ಳುವಿಕೆಯ ಕಡೆಗೆ ಬದಲಾಯಿಸುವ ಮೂಲಕ ಮತ್ತು ಅವರಿಗೆ ಬೆಳವಣಿಗೆಯ ಮನಸ್ಥಿತಿಯನ್ನು ತುಂಬುವ … Continued

ಮಿಲ್ಕಿ ವೇ ನಕ್ಷತ್ರಪುಂಜದಲ್ಲಿ ವಿಚಿತ್ರ ವಸ್ತು ಪತ್ತೆ..! ಇದರಿಂದ ಪ್ರತಿ 18.18 ನಿಮಿಷಗಳಿಗೊಮ್ಮೆ ಸಂಕೇತ ರವಾನೆ…!!

ಆಸ್ಟ್ರೇಲಿಯಾದ ಸಂಶೋಧಕರು ಕ್ಷೀರಪಥದಲ್ಲಿ ಒಂದು ವಿಚಿತ್ರವಾದ ವಸ್ತುವನ್ನು ಕಂಡುಹಿಡಿದಿದ್ದಾರೆ ಎಂದು ಹೇಳಿದ್ದಾರೆ. ಖಗೋಳಶಾಸ್ತ್ರಜ್ಞರು ಇದುವರೆಗೆ ನೋಡಿದ ಯಾವುದೇ ವಸ್ತುವಿಗಿಂತ ಇದು ಭಿನ್ನವಾಗಿದೆ. ತನ್ನ ಪ್ರಬಂಧ ಮಂಡನೆಗಾಗಿ ಕೆಲಸ ಮಾಡುತ್ತಿರುವ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯು ಮೊದಲು ಗುರುತಿಸಿದ ವಸ್ತುವು ಪ್ರತಿ ಗಂಟೆಗೆ ಮೂರು ಬಾರಿ ರೇಡಿಯೊ ಶಕ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗಿದೆ. ಮರ್ಚಿಸನ್ ವೈಡ್‌ಫೀಲ್ಡ್ … Continued

ವಿಧಾನ ಪರಿಷತ್‌ ವಿಪಕ್ಷ ಸ್ಥಾನ ತಪ್ಪಿದ್ದಕ್ಕೆ ತೀವ್ರ ಅಸಮಾಧಾನ: ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಲು ಸಿ.ಎಂ.ಇಬ್ರಾಹಿಂ ನಿರ್ಧಾರ

ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಬಿ.ಕೆ. ಹರಿಪ್ರಸಾದ ​ಅವರನ್ನು ನೇಮಕ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ಸಿನ​ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗಾಗಿ ದೇವೇಗೌಡರನ್ನು ಬಿಟ್ಟಿದ್ದೆವು. ಸಿದ್ದರಾಮಯ್ಯ ಸಲುವಾಗೆ ದೇವೇಗೌಡರನ್ನು ಬಿಟ್ಟು ಬಂದೆ. 1996ರಲ್ಲಿ ರಾಜ್ಯಸಭೆ ಟಿಕೆಟ್ ಘೋಷಿಸಿ ಕ್ಯಾನ್ಸಲ್ ಮಾಡಿದರು. ಆಗ ಕಾಂಗ್ರೆಸ್ … Continued

ರಾಷ್ಟ್ರ ರಾಜಧಾನಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ…! ವಿಡಿಯೊ ವೈರಲ್‌ ನಂತರ ನಾಲ್ವರ ಬಂಧನ

ನವದೆಹಲಿ: ಅತ್ಯಾಚಾರ ಸಂತ್ರಸ್ತೆಯ ಕೂದಲು ಕತ್ತರಿಸಿ ಮುಖಕ್ಕೆ ಮಸಿ ಬಳಿದ ಆಕೆಯ ನೆರೆಹೊರೆಯವರು ಅವಳನ್ನು ಪರೇಡ್‌ ಮಾಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ..! ಅವಳನ್ನು ಪರೇಡ್‌ ಮಾಡಿದ್ದಲ್ಲದೆ ಹರ್ಷೋದ್ಗಾರದ ನಡುವೆ ಥಳಿಸಿದ್ದಾರೆ ಎಂದು ದೆಹಲಿ ಮಹಿಳಾ ಆಯೋಗ ಇಂದು, ಗುರುವಾರ ತಿಳಿಸಿದೆ. ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ. ಮಹಿಳೆಯನ್ನು … Continued

ಪಾಕಿಸ್ತಾನದ ಸಿಂಧ್‌ನಲ್ಲಿ ಹಿಂಗ್ಲಜ್ ಮಾತಾ ದೇವಾಲಯ ಧ್ವಂಸ: ಇದು 22 ತಿಂಗಳಲ್ಲಿ 11ನೇ ಘಟನೆ

ಸಿಂಧ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಥಾರ್ಪಾರ್ಕರ್ ಜಿಲ್ಲೆಯ ಹಿಂಗ್ಲಜ್ ಮಾತಾ ದೇವಸ್ಥಾನವನ್ನು ದುಷ್ಕರ್ಮಿಗಳ ಗುಂಪೊಂದು ಧ್ವಂಸಗೊಳಿಸಿದೆ. ಕಳೆದ 22 ತಿಂಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ ದೇಗುಲಗಳ ಮೇಲೆ ನಡೆದ 11ನೇ ದಾಳಿ ಇದಾಗಿದೆ. ಘಟನೆಯನ್ನು ಖಂಡಿಸಿರುವ ಪಾಕಿಸ್ತಾನ ಹಿಂದೂ ಮಂದಿರ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಕ್ರಿಶೇನ್ ಶರ್ಮಾ, ಇಸ್ಲಾಂ ಮೂಲಭೂತವಾದಿಗಳು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ. … Continued

ಓಮಿಕ್ರಾನ್ ಸೋಂಕಿತರು ಗಮನಾರ್ಹ ರೋಗನಿರೋಧಕ ಪ್ರತಿಕ್ರಿಯೆ ಹೊಂದಿದ್ದಾರೆ, ಇದು ಡೆಲ್ಟಾ ರೂಪಾಂತರವನ್ನೂ ತಟಸ್ಥಗೊಳಿಸಬಹುದು: ಐಸಿಎಂಆರ್‌ ಅಧ್ಯಯನ

ನವದೆಹಲಿ: ಕೋವಿಡ್-19ರ ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾದವರು ಗಮನಾರ್ಹವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೊಂದಿದ್ದಾರೆ, ಇದು ಓಮಿಕ್ರಾನ್ ಮಾತ್ರವಲ್ಲದೆ ಡೆಲ್ಟಾ ರೂಪಾಂತರ ಮತ್ತು ಇತರ ಕಾಳಜಿಯ ರೂಪಾಂತರಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಡೆಸಿದ ಅಧ್ಯಯನವು ತೋರಿಸಿದೆ. . ಅಧ್ಯಯನವು SARS-CoV-2 ನ B.1, ಆಲ್ಫಾ, ಬೀಟಾ, ಡೆಲ್ಟಾ, … Continued

ಮುಕ್ತ ಮಾರುಕಟ್ಟೆ ಅನುಮೋದನೆ ನಂತರ ಕೋವಿಶೀಲ್ಡ್-ಕೋವಾಕ್ಸಿನ್‌ 275 ರೂ.ಗಳಾಗುವ ಸಾಧ್ಯತೆ

ನವದೆಹಲಿ: ಕೊರೊನಾ ವೈರಸ್ ವಿರುದ್ಧ ಲಸಿಕೆಗಳನ್ನು ಕೈಗೆಟುಕುವಂತೆ ಮಾಡುವ ಪ್ರಯತ್ನದಲ್ಲಿ, ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಎರಡು ಕೋವಿಡ್-19 ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನ ಬೆಲೆಯನ್ನು ಪ್ರತಿ ಡೋಸ್‌ಗೆ 150 ಹೆಚ್ಚುವರಿ ಸೇವಾ ಶುಲ್ಕ ದೊಂದಿಗೆ 275 ರೂ.ಗಳಿಗೆ ನಿಗದಿಪಡಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ (ಇಯುಎ) ಪಡೆದಿರುವ ಎರಡು ಲಸಿಕೆಗಳು … Continued

ಕರ್ನಾಟಕದಲ್ಲಿ ಮಂಗಳವಾರ ಹೊಸದಾಗಿ 48,905 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 48,905 ಕೊರನಾ ಸೋಂಕು ದಾಖಲಾಗಿದ್ದು, ಇದೇ ಸಮಯದಲ್ಲಿ 39 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 22,427 ಮಂದಿಗೆ ಸೋಂಕು ತಗುಲಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 3654413ಕ್ಕೆ ಏರಿಕೆಯಾಗಿದೆ, ಇದುವರೆಗೆ 3257769 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 357909 ಸಕ್ರಿಯ ಪ್ರಕರಣಗಳಿವೆ. ಬಾಗಲಕೋಟೆ 610, ಬಳ್ಳಾರಿ 1,141, ಬೆಳಗಾವಿ 791, ಬೆಂಗಳೂರು … Continued