ಕೇಂದ್ರ ಬಜೆಟ್ ಮಂಡನೆಯ ದಿನಾಂಕ ಘೋಷಣೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರಂದು ಪ್ರಾರಂಭವಾಗಲಿದ್ದು, ಕೇಂದ್ರ ಬಜೆಟ್ 2022-23 ಅನ್ನು ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಅಧಿವೇಶನವು ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 8 ರಂದು ಮುಕ್ತಾಯಗೊಳ್ಳಲಿದೆ. ಅಧಿವೇಶನದ ಮೊದಲ ಭಾಗವು ಫೆಬ್ರವರಿ 11ರಂದು ಮುಕ್ತಾಯಗೊಳ್ಳಲಿದೆ. ಒಂದು ತಿಂಗಳ … Continued

ಫೆಬ್ರವರಿ ಮೊದಲ ವಾರದಲ್ಲಿ ಸೋಂಕು ಗರಿಷ್ಠ ಮಟ್ಟ ತಲುಪುತ್ತದೆ..ಆದ್ರೆ ಲಾಕ್ ಡೌನ್ ಮಾಡಲ್ಲ: ಸಚಿವ ಸುಧಾಕರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಇನ್ನೂ ಗರಿಷ್ಠ ಮಟ್ಟಕ್ಕೆ ಹೋಗಿಲ್ಲ. ಫೆಬ್ರವರಿ ಮೊದಲ ವಾರ ಹೋಗುತ್ತದೆ. 3 ಅಥವಾ 4ನೇ ವಾರದಿಂದ ಕಡಿಮೆ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಗೆ ತರುವ ಚಿಂತನೆ ಇಲ್ಲ. ಲಾಕ್‌ಡೌನ್‌ನಿಂದ ಸೋಂಕು ನಿಯಂತ್ರಣ ಆಗುವುದಿಲ್ಲ. … Continued

ಕೋವಾಕ್ಸಿನ್ ಈಗ ವಯಸ್ಕರು-ಮಕ್ಕಳಿಗೆ ಸಾರ್ವತ್ರಿಕ ಲಸಿಕೆ: ಭಾರತ್ ಬಯೋಟೆಕ್

ನವದೆಹಲಿ: ಭಾರತದ ಪ್ರಮುಖ ಪ್ರಗತಿಯಲ್ಲಿ, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೊರೊನಾವೈರಸ್ ವಿರೋಧಿ ಲಸಿಕೆ – ಕೋವಾಕ್ಸಿನ್ – ಈಗ ಜಾಗತಿಕವಾಗಿ “ವಯಸ್ಕರು ಮತ್ತು ಮಕ್ಕಳಿಗಾಗಿ ಸಾರ್ವತ್ರಿಕ ಲಸಿಕೆ” ಎಂದು ಗುರುತಿಸಲ್ಪಟ್ಟಿದೆ. ಕೋವಾಕ್ಸಿನ್ ಈಗ ವಯಸ್ಕರು ಮತ್ತು ಮಕ್ಕಳಿಗೆ ಸಾರ್ವತ್ರಿಕ ಲಸಿಕೆಯಾಗಿದೆ. ಕೋವಿಡ್ -19 ವಿರುದ್ಧ ಜಾಗತಿಕ ಲಸಿಕೆ ಅಭಿವೃದ್ಧಿಪಡಿಸುವ ನಮ್ಮ ಗುರಿಗಳನ್ನು ಸಾಧಿಸಲಾಗಿದೆ ಮತ್ತು ಪರವಾನಗಿಗಾಗಿ ಎಲ್ಲವೂ … Continued

ಚೀನಾದಲ್ಲಿ ಕೋವಿಡ್‌-19 ಸೋಂಕಿತರಿಗೆ ಕಠಿಣ ನಿರ್ಬಂಧ: ಲೋಹದ ಪೆಟ್ಟಿಗೆಗಳಲ್ಲಿ ಸೋಂಕಿತರ ವಾಸ..! ವೀಕ್ಷಿಸಿ

ಪ್ರಪಂಚದಾದ್ಯಂತ ಕೋವಿಡ್‌-19 ಪ್ರಕರಣಗಳ ಪ್ರಸ್ತುತ ಉಲ್ಬಣವು ವೈರಸ್ ಹರಡುವುದನ್ನು ತಡೆಯಲು ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಲು ಹಲವಾರು ದೇಶಗಳನ್ನು ಪ್ರೇರೇಪಿಸಿದೆ, ಆದರೆ ಸಾಮಾಜಿಕ ಮಾಧ್ಯಮದಲ್ಲಿ ರೌಂಡ್ ಮಾಡುತ್ತಿರುವ ಕೆಲವು ಚೀನಾದ ವಿಡಿಯೊಗಳು ಚೀನಾ ಕೋವಿಡ್‌-19 ನಿಗ್ರಹಗಳನ್ನು ಸಂಪೂರ್ಣವಾಗಿ ಮತ್ತೊಂದು ಹಂತಕ್ಕೆ ತೆಗೆದುಕೊಂಡಿದೆ ಎಂಬುದನ್ನು ತೋರಿಸುತ್ತದೆ. ಅಲ್ಲಿನ ನಿವಾಸಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುತ್ತಿರುವ ವಿಡಿಯೊಗಳ ಸರಣಿಯಲ್ಲಿ, ಚೀನಾದಲ್ಲಿ … Continued

ಅತಿದೀರ್ಘ ಕೊರೊನಾ ಚಿಕಿತ್ಸೆ… 8 ಕೋಟಿ ರೂ. ಖರ್ಚು…50 ಎಕರೆ ಜಮೀನು ಮಾರಾಟ.. ವಿದೇಶಿ ವೈದ್ಯರಿಂದ 254 ದಿನಗಳ ಕಾಲ ಚಿಕಿತ್ಸೆ.. ಆದ್ರೂ ಬದುಕ್ಲಿಲ್ಲ..

ಎಂಟು ತಿಂಗಳ ವರೆಗೆ ಕೊರೊನಾ ಹಾಗೂ ನಂತರದ ತೊಂದರೆಗೆ ಚಿಕಿತ್ಸೆಗೆ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆಗೆ ಸುಮಾರು 8 ಕೋಟಿ ರೂ.ವೆಚ್ಚ ಮಾಡಿದರೂ ಮಧ್ಯಪ್ರದೇಶದ ರೈತ ಮಂಗಳವಾರ ರಾತ್ರಿ ಕೊರೊನಾ ಸಂಬಂಧಿ ತೊಂದರೆಯಿಂದ ಕೊನೆಗೂ ಬದುಕುಳಿಯಲಿಲ್ಲ..! ಮೃತಪಟ್ಟಿದ್ದಾರೆ. ಏಪ್ರಿಲ್ 2021 ರಲ್ಲಿ ಮಧ್ಯಪ್ರದೇಶದ ರೇವಾ ರೈತ ಧರಂಜಯ್ ಸಿಂಗ್ (50) ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರ … Continued

ಬತ್ತದ ಉತ್ಸಾಹ.. 56ನೇ ಪ್ರಯತ್ನದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದ 77ರ ವೃದ್ಧ..! ಈಗ 12ನೇ ತರಗತಿ ಪರೀಕ್ಷೆಗೆ ದಾಖಲು..!!

ಜಲೋರ್: ನಿಮ್ಮಲ್ಲಿ ಉತ್ಸಾಹವಿದ್ದರೆ, ಏನು ಬೇಕಾದರೂ ಸಾಧ್ಯ ಮತ್ತು ಅದಕ್ಕೆ ಉಜ್ವಲ ಉದಾಹರಣೆಯೆಂದರೆ ರಾಜಸ್ಥಾನದ ವ್ಯಕ್ತಿ. ಕನಸುಗಳನ್ನು ನನಸಾಗಿಸಲು ತಡ ಎಂಬುದಿಲ್ಲ ಎಂದು ಸಾಬೀತುಪಡಿಸುವ ಮೂಲಕ, 77 ವರ್ಷದ ಜಲೋರ್‌ನ ನಿವೃತ್ತ ಸರ್ಕಾರಿ ನೌಕರ ಹುಕುಮ್‌ದಾಸ್ ವೈಷ್ಣವ್, ಹತ್ತನೇ ತರಗತಿ ಪರೀಕ್ಷೆಯನ್ನು ತಮ್ಮ 56ನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. 55 ಸಲದ ಪ್ರಯತ್ನದಲ್ಲಿ ಅವರಿಗೆ ಉತ್ತೀರ್ಣವಾಗಲು ಸಾಧ್ಯವಾಗಿರಲಿಲ್ಲ. … Continued

ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ರದ್ದು

ಬೆಂಗಳೂರು: ಕೋವಿಡ್‌ -19 ನಿರ್ಬಂಧ ಇದ್ದರೂ ಸರ್ಕಾರಕ್ಕೆ ಸಡ್ಡು ಹೊಡೆದ ಆರಂಭಿಸಿದ್ದ ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್‌ ನಾಯಕರು ಹೈಕೋರ್ಟ್‌ ತರಾಟೆಯ ನಂತರ ಇಂದು ಕೊನೆಗೊಳಿಸಿದ್ದಾರೆ. ಸರ್ಕಾರದ ಆದೇಶ ಮತ್ತು ಹೈಕೋರ್ಟ್‌ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಇಂದು, ಗುರುವಾರ ಬೆಳಿಗ್ಗೆ ರಾಮನಗರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಮೇಕೆದಾಟು ಪಾದಯಾತ್ರೆಯನ್ನು ಸದ್ಯಕ್ಕೆ ಮುಂದೂಡಲು ರಾಜ್ಯ ಕಾಂಗ್ರೆಸ್ … Continued

ಡಿಎನ್​ಎ ಟೆಸ್ಟ್​ನಲ್ಲಿ ನಿಜಾಂಶ ಬಯಲಾಯ್ತು…14 ವರ್ಷಗಳಲ್ಲಿ ಹಾಲು ಮಾರಾಟಗಾರ 800 ಮಕ್ಕಳಿಗೆ ತಂದೆ..!

ದಕ್ಷಿಣ ಕ್ಯಾಲಿಫೋರ್ನಿಯಾದ ಹಾಲು ಮಾರಾಟಗಾರನೊಬ್ಬ 800 ಮಕ್ಕಳ ತಂದೆ ಎನ್ನುವ ಸತ್ಯವೊಂದು ಡಿಎನ್​ಎ ಪರೀಕ್ಷೆಯಲ್ಲಿ ಬಯಲಾಗಿದೆ ಎಂದು ಡೈಲಿ ಮೇಲ್​ ಸುದ್ದಿ ಸಂಸ್ಥೆ ವರದಿ ಮಾಡಿದೆ. 1950 ರಿಂದ 1964ರ ಅವಧಿಯಲ್ಲಿ ರಾಂಡಾಲ್​ ಎನ್ನುವ ವ್ಯಕ್ತಿ ಮನೆಮನೆಗೆ ಹಾಲು ಮಾರಾಟ ಮಾಡುತ್ತಿದ್ದ. ಆಗಿನ ಸಂದರ್ಭದಲ್ಲಿ ಹಾಲಿನ ಪ್ಯಾಕೆಟ್‌ಗಳು ಇಲ್ಲದ ಕಾರಣ ರಾಂಡಾಲ್​ ಸಾನ್​ ಡಿಗಿಯೋ ಸುತ್ತಮುತ್ತಲಿನ … Continued

ದೇಶ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟ ಸಹೋದರರು 74 ವರ್ಷಗಳ ನಂತರ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಭೇಟಿಯಾದರು..! ಆ ಅಪೂರ್ವ ಕ್ಷಣ ವೀಕ್ಷಿಸಿ

ನವದೆಹಲಿ: 1947ರಲ್ಲಿ ಭಾರತ ವಿಭಜನೆಯಾದಾಗ ಮೊಹಮ್ಮದ್ ಸಿದ್ದಿಕ್ ಶಿಶುವಾಗಿದ್ದರು. ಅವರ ಕುಟುಂಬವು ವಿಭಜನೆಯಾಯಿತು. ಅವರ ಹಿರಿಯ ಸಹೋದರ ಹಬೀಬ್ ಅಲಿಯಾಸ್ ಶೆಲಾ ಭಾರತದ ಭಾಗದಲ್ಲಿ ಬೆಳೆದರು. ಈಗ 74 ವರ್ಷಗಳ ನಂತರ, ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಅನ್ನು ಭಾರತಕ್ಕೆ ಸಂಪರ್ಕಿಸುವ ಕರ್ತಾರ್‌ಪುರ ಕಾರಿಡಾರ್ ಸಹೋದರರನ್ನು ಮತ್ತೆ ಒಂದುಗೂಡಿಸಿದೆ. ಒಡಹುಟ್ಟಿದವರ ಪುನರ್ಮಿಲನದ ಭಾವುಕ ಕ್ಷಣಗಳ ವಿಡಿಯೊ … Continued

100ಕ್ಕೂ ಹೆಚ್ಚು ನೆಲಬಾಂಬ್, ಸ್ಫೋಟಕ ಪತ್ತೆ ಹಚ್ಚಿದ ಅಪರೂಪದ ಇಲಿ ಸಾವು

ನೊಮ್ ಪೆನ್: ಐದು ವರ್ಷಗಳ ವೃತ್ತಿಜೀವನದಲ್ಲಿ 100ಕ್ಕೂ ಹೆಚ್ಚು ನೆಲಬಾಂಬುಗಳು ಮತ್ತು ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದ ಆಗ್ನೇಯ ಏಷ್ಯಾದ ರಾಷ್ಟ್ರದಲ್ಲಿ ತನ್ನ ಛಾಪು ಮೂಡಿಸಿದ್ದ ಕಾಂಬೋಡಿಯಾದ ನೆಲಬಾಂಬ್ ತಜ್ಞ ಇಲಿ ಮಗವಾ ತನ್ನ 8ನೇ ವಯಸ್ಸಿನಲ್ಲಿ ನಿಧನ ಹೊಂದಿದೆ. ವಾರಾಂತ್ಯದಲ್ಲಿ ಮರಣ ಹೊಂದಿದ ಮಗವಾ, ಅಂತಾರಾಷ್ಟ್ರೀಯ ಚಾರಿಟಿ ಅಪೊಪೊ (APOPO) ನಿಂದ ನಿಯೋಜಿಸಲಾದ ಅತ್ಯಂತ ಯಶಸ್ವಿ … Continued