2013ರ ನರೇಂದ್ರ ಮೋದಿ ಪಾಟ್ನಾ ಸಮಾವೇಶದಲ್ಲಿ ಸರಣಿ ಸ್ಫೋಟ ಪ್ರಕರಣ: ನಾಲ್ವರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ

ಪಾಟ್ನಾ: 2013ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶದ ಸಮಯದಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸರಣಿ ಬಾಂಬ್​​​ ಸ್ಫೋಟ ಪ್ರಕರಣದ ಒಂಬತ್ತು ಅಪರಾಧಿಗಳ ಪೈಕಿ ನಾಲ್ವರಿಗೆ ರಾಷ್ಟ್ರೀಯ ತನಿಖಾ ದಳ(ಎನ್​ಐಎ)ದ ವಿಶೇಷ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ. ಕಳೆದ ವಾರ ನ್ಯಾಯಾಲಯವು 10 ಆರೋಪಿಗಳ ಪೈಕಿ ಒಂಬತ್ತು ಆರೋಪಿಗಳಾದ ಹೈದರ್ ಅಲಿ ಅಲಿಯಾಸ್ ‘ಬ್ಲ್ಯಾಕ್ … Continued

ವಿವಾದಿತ 3 ಕೃಷಿ ಕಾನೂನುಗಳನ್ನು ರದ್ದುಪಡಿಸಲು ಕೇಂದ್ರ ಸರ್ಕಾರಕ್ಕೆ ನ.26ರ ವರೆಗೆ ಗಡುವು ನೀಡಿದ ಟಿಕಾಯತ್‌

ಗಾಜಿಯಾಬಾದ್: ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ಕಾನೂನುಗಳನ್ನು ನವೆಂಬರ್ 26ರೊಳಗೆ ಕೇಂದ್ರಸರ್ಕಾರ ರದ್ದು ಪಡಿಸಬೇಕು. ಇಲ್ಲವಾದರೆ ದೆಹಲಿಯ ಗಡಿ ಭಾಗದಲ್ಲಿ ರೈತರು ಹೋರಾಟವನ್ನು ತೀವ್ರಗೊಳಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್‍ನ ಮುಖ್ಯಸ್ಥ ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ … Continued

ಜನರ ಮನೆ ಬಾಗಿಲಿಗೆ ಸರ್ಕಾರದ ಆಡಳಿತ: ಜನ ಸ್ಪಂದನ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ, ೫೬ ಸೇವೆಗಳ ಸೇರ್ಪಡೆ

ಬೆಂಗಳೂರು: ಆಡಳಿತವನ್ನು ಜನರ ಮನೆಯ ಬಾಗಿಲಿಗೇ ತಲುಪಿಸುವ ಜನ ಸೇವಕ ಮತ್ತು ಜನ ಸ್ಪಂದನ ಯೋಜನೆ ರಾಜ್ಯದಲ್ಲಿ ಇಂದಿನಿಂದ ಜಾರಿಯಾಗಿದ್ದು, ರಾಜ್ಯದ ಜನತೆ ಸರ್ಕಾರದ ಸೇವೆಗಳನ್ನು ಮನೆ ಬಾಗಿಲಲ್ಲೇ ಪಡೆದುಕೊಳ್ಳಬಹುದಾಗಿದೆ. ವಿಧಾನಸೌಧದಲ್ಲಿ ಕನ್ನಡ ರಾಜ್ಯೋತ್ಸವದ ದಿನ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನ ಸೇವಕ ಮತ್ತು ಜನ ಸ್ಪಂದನ ಯೋಜನೆಗೆ ಚಾಲನೆ ನೀದರು. ನಾಗರಿಕರು … Continued

ಪುನೀತ್​ ರಾಜಕುಮಾರ 2 ಕಣ್ಣುಗಳು 4 ಜನರಿಗೆ ಅವಳವಡಿಕೆ: ಹೇಗೆಂದು ವೈದ್ಯರಿಂದ ಮಾಹಿತಿ

ಬೆಂಗಳೂರು: ಬದುಕಿದ್ದಾಗ ಅನೇಕರಿಗೆ ಸಹಾಯ ಹಸ್ತ ಚಾಚಿದ್ದ ಪುನೀತ್​ ರಾಜ್​ಕುಮಾರ್​ ಸಾವಿನ ನಂತರವೂ ಅವರು ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ. ಅವರ ಎರಡು ಕಣ್ಣುಗಳನ್ನು ನಾಲ್ಕು ಜನರಿಗೆ ಅಳವಡಿಸಲಾಗಿದೆ. ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಡಾ. ರಾಜ್​ಕುಮಾರ್ ಕೂಡ ಕಣ್ಣುಗಳನ್ನು ದಾನ ಮಾಡಿದ್ದರು. ಅವರ … Continued

ಅಸ್ಸಾಂ: ಬುರ್ಖಾ ಧರಿಸದೆ ಜೀನ್ಸ್ ಧರಿಸಿ ಅಂಗಡಿಗೆ ಬಂದಿದ್ದಕ್ಕೆ ಮುಸ್ಲಿಂ ಯುವತಿಯನ್ನು ಅವಾಚ್ಯವಾಗಿ ನಿಂದಿಸಿ ಹೊರಹಾಕಿದ ಅಂಗಡಿ ಮಾಲೀಕ…!

ಮುಸ್ಲಿಂ ಯುವತಿಯೊಬ್ಬಳು ತಮ್ಮ ಅಂಗಡಿಗೆ ಬುರ್ಖಾದ ಬದಲು ಜೀನ್ಸ್ ಧರಿಸಿ ಬಂದಿದ್ದಕ್ಕೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ತಂದೆ ಮತ್ತು ಆತನ ಮಗನನ್ನು ಅಸ್ಸಾಂನ ಬಿಶ್ವನಾಥ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ತಂದೆ-ಮಗ ಇಬ್ಬರ ಮಾಲೀಕತ್ವದ ಅಂಗಡಿಯಲ್ಲಿ ಇಯರ್ ಫೋನ್ ಖರೀದಿಸಲು ಈ ಯುವತಿ ತೆರಳಿದ್ದಳು. ಆಕೆ ಬುರ್ಖಾ ಬದಲು ಜೀನ್ಸ್‌ ಧರಿಸಿದ್ದಕ್ಕೆ ಸೇವೆಯನ್ನು ನಿರಾಕರಿಸಿದ್ದಲ್ಲದೆ, ಇಬ್ಬರೂ ನಿಂದನೆ … Continued

ನಾಯಿಗೆ ಹಿಂಸೆ ನೀಡುತ್ತಿದ ವ್ಯಕ್ತಿ ಮೇಲೆ ದಾಳಿ ಮಾಡಿದ ಆಕಳು..ಅದರ ಕೋಪ ಹೇಗಿತ್ತೆಂದರೆ..!: ದೃಶ್ಯ ವಿಡಿಯೊದಲ್ಲಿ ಸೆರೆ

ಪ್ರಾಣಿಗಳು ಹೇಗೆ ಪ್ರೀತಿಗೆ ಸ್ಪಂದಿಸುತ್ತವೆಯೇ ಅದೇ ರೀತಿ ಹಿಂಸೆ ಮಾಡಿದರೆ ಅದನ್ನು ಸಹಿಸಿಕೊಳ್ಳುವುದಿಲ್ಲ, ತಮಗಷ್ಟೇ ಅಲ್ಲ, ಮತ್ತೊಂದು ಪ್ರಾಣಿಗೆ ಹಿಂಸೆ ಮಾಡುವುದನ್ನೂ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಅನೇಕ ಸಂದರ್ಭಗಳಲ್ಲಿ ಸಾಬೀತು ಪಡಿಸಿವೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ವ್ಯಕ್ತಿಯೊಬ್ಬ ನಾಯಿಗೆ ಕಿರುಕುಳ ನೀಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಯಿಯ ಕಿವಿಗಳನ್ನು ಹಿಂಡುತ್ತಿದ್ದ ವ್ಯಕ್ತಿಯನ್ನು ನೋಡಿದ ಅಲ್ಲೇ ಸಮೀಪದಲ್ಲಿದ್ದ … Continued

ಪುನೀತ್ ಓದಿಸುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದ ತಮಿಳು ನಟ ವಿಶಾಲ್…!:ವರದಿ

ಬೆಂಗಳೂರು: ಪುನೀತ್ ರಾಜ್​​ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದು ತಮಿಳು ನಟ ವಿಶಾಲ್​ ಭಾನುವಾರ (ಅಕ್ಟೋಬರ್ 31) ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರಿಂದ ಉಚಿತ ಶೈಕ್ಷಣಿಕ ನೆರವು ಪಡೆಯುತ್ತಿರುವ 1800 ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವುದಾಗಿ ತಮಿಳು ನಟ ವಿಶಾಲ್ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. . ಹೃದಯಾಘಾತದಿಂದ ಪುನೀತ್ ರಾಜ್​ಕುಮಾರ್ ಅಕ್ಟೋಬರ್ 29 … Continued

2020ರಲ್ಲಿ ಭಾರತದಲ್ಲಿ ಪ್ರತಿದಿನ 31 ಮಕ್ಕಳ ಆತ್ಮಹತ್ಯೆ, ಶೇ 21ರಷ್ಟು ಹೆಚ್ಚಳ: ಎನ್​ಸಿಆರ್​ಬಿ ವರದಿ

ನವದೆಹಲಿ: ಭಾರತದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರದ ದತ್ತಾಂಶಗಳು ಈ ಅಂಶವನ್ನು ಪುಷ್ಟೀಕರಿಸಿವೆ. ಕೊರೊನಾ ಪಿಡುಗು ಮಕ್ಕಳ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸಿರಬಹುದು ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (National Crime Records Bureau – NCRB) ಪ್ರಕಾರ 2020ರಲ್ಲಿ ಒಟ್ಟು 11,396 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. … Continued

ಜಿ 20 ನಾಯಕರ ಅಂತಿಮ ಹೇಳಿಕೆಯಲ್ಲಿ ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆಗೆ 2050ರ ಗಡುವಿನ ಉಲ್ಲೇಖವಿಲ್ಲ

ರೋಮ್:‌ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು “ಅರ್ಥಪೂರ್ಣ ಮತ್ತು ಪರಿಣಾಮಕಾರಿ” ಕ್ರಮವನ್ನು ಒತ್ತಾಯಿಸುವ ಜಿ 20 ಪ್ರಮುಖ ಆರ್ಥಿಕತೆಗಳ ಗುಂಪಿನ ನಾಯಕರು ಭಾನುವಾರ ಅಂತಿಮವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಇದು ಕೆಲವು ಕಾಂಕ್ರೀಟ್ ಬದ್ಧತೆಗಳನ್ನು ನೀಡುತ್ತದೆ. ರಾಜತಾಂತ್ರಿಕರ ನಡುವಿನ ಸಮಾಲೋಚನೆಯ ಫಲಿತಾಂಶವು ಸ್ಕಾಟ್‌ಲ್ಯಾಂಡ್‌ನಲ್ಲಿನ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ ಬಹುದೊಡ್ಡ ಕೆಲಸ ಮಾಡಬೇಕಾಗಿದೆ, ಅಲ್ಲಿ … Continued

66 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ವಿವರ ಇಲ್ಲಿದೆ

ಬೆಂಗಳೂರು :ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಸಾಧಕರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಬಿಡುಗಡೆ ಮಾಡಿದ್ದಾರೆ. 66 ಸಾಧಕರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ. ಸಂಘ-ಸಂಸ್ಥೆ ಶ್ರೀ ವೀರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ ಗದಗ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ದಾವಣಗೆರೆ ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ … Continued