ವರಿಷ್ಠರಿಗೆ ಬೆದರಿಕೆ ಹಾಕಿ ಯಡಿಯೂರಪ್ಪ ನನಗೆ ಸಿಎಂ ಸ್ಥಾನ ತಪ್ಪಿಸಿದರು: ಯತ್ನಾಳ ಹೊಸ ಬಾಂಬ್..!

ವಿಜಯಪುರ: ಬಿ.ಎಸ್. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ಬಳಿಕ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಮತ್ತೊಂದು ರಾಜಕೀಯ ಬಾಂಬ್‌ ಸಿಡಿಸಿದ್ದಾರೆ. ನನಗೆ ಮುಖ್ಯಮಂತ್ರಿ ಆಗುವ ಅವಕಾಶವಿತ್ತು, ಆದರೆ ಯಡಿಯೂರಪ್ಪ ನನಗೆ ಅವಕಾಶ ತಪ್ಪಿಸಿದರು. ಯತ್ನಾಳ್ ಅವರನ್ನ ಮುಖ್ಯಮಂತ್ರಿ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ‌ ಕೆಡಹುತ್ತೇನೆ ಎಂದು ಕೇಂದ್ರದ ನಾಯಕರಿಗೆ ಯಡಿಯೂರಪ್ಪ ಬೆದರಿಕೆ ಹಾಕಿದ್ದರು ಎಂದು … Continued

2021ರಲ್ಲಿ ಈವರೆಗೆ ಆರ್‌ಬಿಐನಿಂದ ಸಹಕಾರಿ ಬ್ಯಾಂಕುಗಳಿಗೆ 100ಕ್ಕೂ ಹೆಚ್ಚು ನಿರ್ದೇಶನಗಳು, ಮೂರರ ಪರವಾನಗಿ ರದ್ದು

ಮುಂಬೈ: 2021ರಲ್ಲಿ ಇಲ್ಲಿಯವರೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 101 ನಿರ್ದೇಶನಗಳನ್ನು ಹೊರಡಿಸಿದೆ, ತಪ್ಪಾದ ಅಥವಾ ಕಳಪೆ ನಡೆಸುತ್ತಿರುವ ನಗರ ಸಹಕಾರಿ ಬ್ಯಾಂಕುಗಳ ಮೇಲೆ ವಿವಿಧ ನಿಯಂತ್ರಣ ಕ್ರಮಗಳನ್ನು ವಿಧಿಸಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ನಿಯಂತ್ರಕರು ಮೂರು ಸಹಕಾರಿ ಬ್ಯಾಂಕುಗಳ ಪರವಾನಗಿಯನ್ನು ರದ್ದುಗೊಳಿಸಿದ್ದಾರೆ, ಸೆಂಟ್ರಲ್ ಬ್ಯಾಂಕ್ 2020 ರಲ್ಲಿ ಪ್ರಾರಂಭಿಸಿದ ಸಹಕಾರಿ ಉದ್ಯಮದ … Continued

ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಮೊದಲ ಮತ್ತು ಏಕೈಕ ಉದ್ಯೋಗ ಅರ್ಜಿ 2.5 ಕೋಟಿ ರೂ.ಗಳಿಗೆ ಮಾರಾಟ

ವರ್ಷಗಳಲ್ಲಿ ನಾವು ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಸ್ಮರಣಿಕೆಗಳನ್ನು ಕೋಟ್ಯಂತರ ರೂಪಾಯಿಗಳಿಗೆ ಹರಾಜು ಮಾಡಲು ಪ್ರಾರಂಭಿಸಿದ್ದೇವೆ. ಅದಕ್ಕೆ ಈಗ ಹೊಸ ಸೇರ್ಪಡೆ ಯಾಗಿದೆ.ಅವರ ಮೊದಲ ಹಾಗೂ ಏಕೈಕ ಉದ್ಯೋಗದ ಅರ್ಜಿಯನ್ನು ಈಗ 2.5 ಕೋಟಿ ರೂ.ಗಳಿಗೆ ಹರಾಜು ಮಾಡಲಾಗಿದೆ. ಸ್ಟೀವ್ ಜಾಬ್ಸ್ ಯಾವಾಗಲೂ ಅನೇಕರಿಗೆ ಗೊತ್ತಿರುವಂತೆ ನೆಚ್ಚಿನ ತಂತ್ರಜ್ಞಾನ ಕಂಪನಿ ಸ್ಥಾಪಿಸಲು ಹೆಸರುವಾಸಿಯಾಗಿದ್ದಾರೆ. ಆದಾಗ್ಯೂ, … Continued

ಕರ್ನಾಟಕದ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಉಪವಾಸ

ಚೆನ್ನೈ: ಕರ್ನಾಟಕದ ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಜಟಾಪಟಿ ನಡೆಯುತ್ತಿದೆ. ತಮಿಳುನಾಡಿನ ಪ್ರತಿಪಕ್ಷ ಬಿಜೆಪಿ ಸಹ ತಮಿಳುನಾಡು ಸರ್ಕಾರಕ್ಕೆ ಬೆಂಬಲ ನೀಡಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಮೇಕೆದಾಟು ಯೋಜನೆ ವಿರೋಧಿಸಿ ಕರ್ನಾಟಕದ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಆಗಸ್ಟ್ 5ರಂದು ಕೆ. ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿ ಶಾಸಕರು, … Continued

ಸಿಬಿಎಸ್‌ಇ 12 ನೇ ತರಗತಿ ಫಲಿತಾಂಶ ಇಂದು ಮಧ್ಯಾಹ್ನ 2 ಗಂಟೆಗೆ ಪ್ರಕಟ

ನವದೆಹಲಿ: ಸಿಬಿಎಸ್‌ಇ 12 ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶವನ್ನು ಇಂದು ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಶುಕ್ರವಾರ ಪ್ರಕಟಿಸಿದೆ. ಸಿಬಿಎಸ್‌ಇ 12 ನೇ ತರಗತಿಯ ಫಲಿತಾಂಶಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ cbseresults.nic.in ನಲ್ಲಿ ಲಭ್ಯವಿರುತ್ತವೆ. ಇದಲ್ಲದೇ, digilocker.gov.in ಮತ್ತು ಡಿಜಿಲಾಕರ್ ಆಪ್ ಕೂಡ ಫಲಿತಾಂಶಗಳನ್ನು ಹೋಸ್ಟ್ ಮಾಡುತ್ತದೆ. ವಿದ್ಯಾರ್ಥಿಗಳು … Continued

ಟೋಕಿಯೊ ಒಲಿಂಪಿಕ್ಸ್‌: ಭಾರತಕ್ಕೆ 2 ನೇ ಪದಕದ ಭರವಸೆ , ಮಹಿಳೆಯರ 69 ಕೆಜಿ ಬಾಕ್ಸಿಂಗ್ ಸೆಮಿಫೈನಲ್ ಗೆ ಲೋವ್ಲಿನಾ ಬೊರ್ಗೊಹೈನ್‌

ಟೋಕಿಯೋ: ಭಾರತೀಯ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ (69 ಕೆಜಿ) ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ನೀಡುವ ಭರವಸೆ ನೀಡಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ತೈಪೆಯ ನಿಯಾನ್-ಚಿನ್ ಚೆನ್ ಅವರನ್ನು 4-1 ಅಂಕಗಳಿಂದ ಸೋಲಿಸಿದರು. ಮೀರಾಬಾಯಿ ಚಾನು ಕಳೆದ ಶನಿವಾರ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ … Continued

ಉ.ಕ.ಜಿಲ್ಲೆ ನೆರೆ: ಭೂಕುಸಿತವಾದ ಕಳಚೆ ಗ್ರಾಮದ ಸಂಪೂರ್ಣ ಸ್ಥಳಾಂತರ, ಅಧ್ಯಯನ ವರದಿ ಆಧಾರದ ಮೇಲೆ ಜಿಲ್ಲೆ ನೆರೆ ಹಾನಿ ಶಾಶ್ವತ ಪರಿಹಾರಕ್ಕೆ ಕ್ರಮ

ಉತ್ತರ ಕನ್ನಡ ಜಿಲ್ಲೆ ಪ್ರವಾಹ ಪೀಡಿತ ಸ್ಥಳಗಳ ಪರಿಶೀಲನೆ ನಡೆಸಿದ ಬಸವರಾಜ ಬೊಮ್ಮಾಯಿ ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಭೂಕುಸಿತಕ್ಕೊಳಗಾದ ಕಳಚೆ‌ ಗ್ರಾಮದಲ್ಲಿ ಪರಿಹಾರ ನೀಡಿದರೂ ಮನೆ ಕಟ್ಟುವುದು ಕಷ್ಟಸಾಧ್ಯ ಕೆಲಸ. ಹೀಗಾಗಿ ಗ್ರಾಮವನ್ನೇ ಸಂಪೂರ್ಣ ಸ್ಥಳಾಂತರಿಸಿ. ನಾಳೆಯಿಂದಲೇ ಕೆಲಸ ಮಾಡಬೇಕು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಈ ಸ್ಥಳಾಂತರಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು … Continued

ಪೈಶಾಚಿಕ..ಮಂಗಗಳಿಗೆ ವಿಷವುಣಿಸಿ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಕಟ್ಟೆಸೆದ ದುಷ್ಕರ್ಮಿಗಳು: 30 ಕೋತಿಗಳು ಸಾವು, ವಿಡಿಯೋ ವೈರಲ್‌..!

ಹಾಸನ: ಮನುಷ್ಯರ ಪೈಶಾಚಿಕ ಕೃತ್ಯಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಸುಮಾರು 60ರಷ್ಟು ಮಂಗಗಳಿಗೆ ವಿಷಹಾರ ನೀಡಿ ಅವುಗಳಿಗೆ ಬಡಿದು ಅವುಗಳನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ರಸ್ತೆ ಬದಿ ಎಸೆದಿರುವ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯ ಗ್ರಾಮವೊಮದರಲ್ಲಿ ವರದಿಯಾಗಿದೆ. ಆಘಾತಕಾರಿ ಘಟನೆಯೊಂದರಲ್ಲಿ, ಕರ್ನಾಟಕದ ಹಾಸನ ಜಿಲ್ಲೆಯ ಹಳ್ಳಿಯೊಂದರಲ್ಲಿ ಗುರುವಾರ ಮುಂಜಾನೆ 30 ಕೋತಿಗಳು ಮೃತಪಟ್ಟಿವೆ. ಇತರ … Continued

ತವರೂರು ಹುಬ್ಬಳ್ಳಿಯಲ್ಲಿ ಒಬ್ಬಂಟಿಯಾದ ಸಿಎಂ ಬೊಮ್ಮಾಯಿ: ಚರ್ಚೆಗೆ ಗ್ರಾಸ..!

ಹುಬ್ಬಳ್ಳಿ:ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಹುಬ್ಬಳ್ಳಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ಅವರಿಂದ ಸ್ವಪಕ್ಷೀಯರೇ ದೂರ ಉಳಿದ ಕಾರಣ ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆಯಲ್ಲಿಯೇ ಏಕಾಂಗಿಯಾಗಿದ್ದಾರಾ ಎಂಬ ಅನುಮಾನ ಮೂಡುವಂತೆ ಮಾಡಿದೆ. ಮುಖ್ಯಮಂತ್ರ ಸ್ಥಾನಕ್ಕೇರಿದ ಬಳಿಕ ಇದೇ ಮೊದಲ ಬಾರಿಗೆ ಜನಿಸಿದ ಊರಿಗೆ ಭೇಟಿ ನೀಡಿದ್ದ ಬೊಮ್ಮಾಯಿ ಆಗಮನದ ವೇಳೆ ಧಾರವಾಡ ಜಿಲ್ಲೆಯ ಬಿಜೆಪಿಯ ಬೆರಳೆಣಿಕೆ ಮುಖಂಡರು ಹಾಜರಿದ್ದಿದ್ದು … Continued

ಕೇಂದ್ರದ ಮಹತ್ವದ ನಿರ್ಧಾರ.. ವೈದ್ಯಕೀಯ ಸೀಟು: ಒಬಿಸಿಗೆ ಶೇ. 27, ಆರ್ಥಿಕ ದುರ್ಬಲ ವರ್ಗಕ್ಕೆ ಶೇ. 10 ಮೀಸಲಾತಿ ಪ್ರಕಟ

ನವದೆಹಲಿ: 2021-22ನೇ ಸಾಲಿನ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅಖಿಲ ಭಾರತ ಕೋಟಾದಲ್ಲಿ ಒಬಿಸಿಗಳಿಗೆ ಶೇ. 27 ಮತ್ತು ಆರ್ಥಿಕ ದುರ್ಬಲ ವರ್ಗಕ್ಕೆ(ಇಡಬ್ಲ್ಯೂಎಸ್) ಶೇ. 10 ರಷ್ಟು ಮೀಸಲಾತಿಯನ್ನು ಸರ್ಕಾರ ಗುರುವಾರ ಪ್ರಕಟಿಸಿದೆ. ಕಳೆದ ಸೋಮವಾರ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೀರ್ಘಕಾಲದಿಂದ ಬಾಕಿ ಇರುವ ಈ … Continued