ಕೋವಿಡ್​​ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರ್ಕಾರ ಸೂಚನೆ

ಬೆಂಗಳೂರು: ಕೋವಿಡ್ ಕಡಿಮೆಯಾಗಿದೆ ಎಂದು ನಿಟ್ಟುಸಿರು ಬಿಡುವ ಹೊತ್ತಿನಲ್ಲೇ ಮೂರನೇ ಅಲೆ‌ಯ ಆತಂಕ ಹೆಚ್ಚಿದೆ. ಈ ಸಂಬಂಧ‌‌ ಶನಿವಾರ ಪ್ರಮುಖ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಕೇರಳ ಗಡಿ ಭಾಗದಲ್ಲಿ ತೀವ್ರ ನಿಗಾ ವಹಿಸಲು ತಿಳಿಸಿದ್ದಾರೆ. ಈ ಸಂಬಂಧ ಮುಖ್ಯಮಮತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, … Continued

ಸಚಿವ ಸಂಪುಟ ವಿಸ್ತರಣೆ ಕುರಿತು ಎರಡು ದಿನಗಳಲ್ಲಿ ಬಿಜೆಪಿ ಹೈಕಮಾಂಡ್‌ನಿಂದ ಸಂದೇಶ ಬರುವ ಸಾಧ್ಯತೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಒಂದೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿ ಹೈಕಮಾಂಡ್ ನಿಂದ ಸಂದೇಶ ಬರುವ ಸಾಧ್ಯತೆಯಿದ್ದು, ಅದನ್ನು ಅಂತಿಮಗೊಳಿಸಲು ಮತ್ತೊಮ್ಮೆ ನವದೆಹಲಿಗೆ ತೆರಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದ್ದಾರೆ. ನಾನು ಇಂದು ಜೆಪಿ ನಡ್ಡಾ (ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ) ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಆದರೆ ನಿನ್ನೆ ಅವರನ್ನು ಭೇಟಿಯಾಗಿದ್ದೆ. ಹೆಚ್ಚಾಗಿ … Continued

ಅಲ್ವಿದಾ…! ರಾಜಕೀಯಕ್ಕೆ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ‘ಗುಡಬೈ: ‘ಯಾವ ಪಕ್ಷಕ್ಕೂ ಸೇರಲ್ಲ ಎಂದು ಸ್ಪಷ್ಟನೆ

ನವದೆಹಲಿ: ಆಘಾತಕಾರಿ ಕ್ರಮದಲ್ಲಿ, ಮಾಜಿ ಕೇಂದ್ರ ಸಚಿವ ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಅವರು ರಾಜಕೀಯವನ್ನು ತೊರೆಯುತ್ತಿರುವುದಾಗಿ ಶನಿವಾರ ಪ್ರಕಟಿಸಿದ್ದಾರೆ. ಆದಾಗ್ಯೂ, ಅವರು ಬೇರೆ ಯಾವುದೇ ರಾಜಕೀಯ ಪಕ್ಷ – ಟಿಎಂಸಿ, ಕಾಂಗ್ರೆಸ್, ಸಿಪಿಎಂ ಸೇರಲು ಹೋಗುವುದಿಲ್ಲ ಎಂದು ದೃ ಢಪಡಿಸಿದ್ದಾರೆ ಮತ್ತು ಯಾವುದೇ ರಾಜಕೀಯ ಪಕ್ಷದಿಂದ ತಮಗೆ ಯಾವುದೇ ಕರೆಗಳು … Continued

ಪುಲ್ವಾಮಾ ದಾಳಿ ಸಂಚುಕೋರ, ಮೋಸ್ಟ್‌ ವಾಂಟೆಡ್‌ ಜೈಶ್ ಭಯೋತ್ಪಾದಕ ಅಬು ಸೈಫುಲ್ಲಾ ಎನ್ಕೌಂಟರ್ ನಲ್ಲಿ ಹತ: ಅಧಿಕಾರಿಗಳು

ಶ್ರೀನಗರ : 2019ರ ಪುಲ್ವಾಮ ಭಯೋತ್ಪಾದಕ ದಾಳಿಯ ಸಂಚುಕೋರ ಜೈಶ್​-ಎ-ಮೊಹಮ್ಮದ್ ಉಗ್ರ ಸಂಘಟನೆ ಸದಸ್ಯ ಸೈಫುಲ್ಲಾನನ್ನು ಇಂದು ಕಾಶ್ಮೀರದ ಭದ್ರತಾ ಸಿಬ್ಬಂದಿ ಕೊಂದು ಹಾಕಿದ್ದಾರೆ. ಅಬು ಅಬು ಸೈಫುಲ್ಲಾ, ಅಥವಾ ಲಂಬೂ ಅಥವಾ ಮೊಹಮ್ಮದ್ ಇಸ್ಮಾಯಿಲ್ ಅಲ್ವಿ ಇಂದು (ಶನಿವಾರ) ಬೆಳಿಗ್ಗೆ ಪುಲ್ವಾಮದ ದಾಚಿಗಮ್​ ಅರಣ್ಯ ಪ್ರದೇಶದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಮತ್ತೊಬ್ಬ ಜೈಶ್​ ಉಗ್ರವಾದಿಯೂ ಮೃತಪಟ್ಟಿದ್ದಾರೆ. … Continued

ಗಮನಿಸಿ..ಕೇರಳ-ಮಹಾರಾಷ್ಟ್ರದಿಂದ ಬರುವವರಿಗೆ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು: ನೆರೆಯ ಮಹಾರಾಷ್ಟ್ರ ಹಾಗೂ ಕೇರಳದಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ 72 ಗಂಟೆಗಳ ಒಳಗೆ ಮಾಡಿಸಿರುವ ಆರ್‍ಟಿಪಿಸಿಆರ್ ಪರೀಕ್ಷೆಯ ನೆಗೆಟೀವ್ ವರದಿ ಹಾಜರುಪಡಿಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸು ಆಧರಿಸಿ ರಾಜ್ಯ ಸರ್ಕಾರ ಪರಿಷ್ಕøತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮೊದಲು ಕೋವಿಡ್‍ನ ಎರಡನೇ ಲಸಿಕೆ ಪಡೆದವರಿಗೆ ಪರೀಕ್ಷಾ ವರದಿ … Continued

ಕೆಲಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಳ: ಮತ್ತೆ ನೈಟ್​, ವೀಕೆಂಡ್​ ಕರ್ಫ್ಯೂ ಜಾರಿ ಸಾಧ್ಯತೆ, ಗಡಿಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಿಎಂ ಸಭೆ

ಬೆಂಗಳೂರು : ಇಳಿಕೆ ಕಾಣುತ್ತಿದ್ದ ಕೊರೊನಾ ಸೋಂಕು ಇದೀಗ ಕೇರಳ, ಮಹಾರಾಷ್ಟ್ರದಲ್ಲಿ ತೀವ್ರವಾಗಿ ಹೆಚ್ಚುತ್ತಿದ್ದು, ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಹೀಗಾಗಿ ಕೊರೊನಾ ಸೋಂಕು ತೀವ್ರವಾಗಿ ಹರಡಿದರೆ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಸಾಧ್ಯತೆ ಕಂಡುಬರುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಶನಿವಾರ) ಗಡಿ ಜಿಲ್ಲೆಗಳು ಹಾಗೂ ಸೋಂಕು ಹೆಚ್ಚುತ್ತಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, … Continued

ಖಾಸಗಿ ಆಸ್ಪತ್ರೆಗಳಿಂದ ಅಧಿಕ ಶುಲ್ಕ ವಿಧಿಸಲ್ಪಟ್ಟ ಕೋವಿಡ್‌ -19 ರೋಗಿಗಳಿಗೆ ಸಹಾಯ ನೀಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು: ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್‌ -19 ಚಿಕಿತ್ಸೆಗಾಗಿ ಅಸಹಾಯಕ ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸುತ್ತಿವೆ ಎಂಬ ಆರೋಪದ ಮೇಲೆ ಕುಂದುಕೊರತೆ ಪರಿಹಾರಕ್ಕಾಗಿ ಯಾಂತ್ರಿಕ ವ್ಯವಸ್ಥೆಯನ್ನು ತ್ವರಿತವಾಗಿ ರಚಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಕೋರಿದೆ. ವಿಶಾಲ ನಿಯತಾಂಕಗಳ ಆಧಾರದ ಮೇಲೆ ಜೂನ್ 2020 ರಲ್ಲಿ ರಾಜ್ಯ ಸರ್ಕಾರವು ಕೋವಿಡ್‌-19 ಚಿಕಿತ್ಸೆಗೆ ದೈನಂದಿನ ಶುಲ್ಕವನ್ನು ವಿಧಿಸಿತ್ತು … Continued

ಕೋವಿಡ್‌-19 ಆರಂಭಿಕ ಲಕ್ಷಣಗಳು ವಯಸ್ಸು, ಪುರುಷರು-ಮಹಿಳೆಯರ ನಡುವೆ ಬದಲಾಗುತ್ತವೆ: ಬ್ರಿಟನ್‌ ಅಧ್ಯಯನ…!

ಲಂಡನ್: ಕೋವಿಡ್ -19 ಸೋಂಕನ್ನು ಸೂಚಿಸುವ ಆರಂಭಿಕ ರೋಗಲಕ್ಷಣಗಳು ವಯೋಮಾನದವರಲ್ಲಿ ಮತ್ತು ಪುರುಷರು ಹಾಗೂ ಮಹಿಳೆಯರ ನಡುವೆ ಬದಲಾಗುತ್ತವೆ ಎಂದು ಬ್ರಿಟನ್ನಿನ ಹೊಸ ಸಂಶೋಧನೆ ಕಂಡುಹಿಡಿದಿದೆ. ಗುರುವಾರ ‘ದಿ ಲ್ಯಾನ್ಸೆಟ್ ಡಿಜಿಟಲ್ ಹೆಲ್ತ್’ ಜರ್ನಲ್ಲಿನಲ್ಲಿ ಪ್ರಕಟವಾದ ಈ ಅಧ್ಯಯನವನ್ನು ಲಂಡನ್ನಿನ ಕಿಂಗ್ಸ್ ಕಾಲೇಜಿನ ಸಂಶೋಧಕರು ಸ್ವಯಂ-ವರದಿ ಮಾಡಿದ ಜಡ್‌ಒಇ ಕೋವಿಡ್ (ZOE COVID) ಸಿಂಪ್ಟಮ್ ಸ್ಟಡಿ … Continued

ವಾರದೊಳಗೆ ರಾಜ್ಯ ಸಚಿವ ಸಂಪುಟ ರಚನೆ ಸಾಧ್ಯತೆ; ನಡ್ಡಾ ಭೇಟಿ ಬಳಿಕೆ ಸಿಎಂ ಬೊಮ್ಮಾಯಿ ಹೇಳಿಕೆ

ನವದೆಹಲಿ: ವಾರದೊಳಗೆ ರಾಜ್ಯ ಸಚಿವ ಸಂಪುಟದ ರಚನೆಯಾಗಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದ್ದಾರೆ. ಇಂದು ೯ಶುಕ್ರವಾರ) ಪ್ರಧಾನಿ ಭೇಟಿ ಬಳಿಕೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿನಡ್ಡಾ ಅವರ ಜೊತೆಗೆ ಸಂಪುಟ ರಚನೆ ಕುರಿತು ಚರ್ಚಿಸಿದ್ದೇನೆ. ಮತ್ತೆ ದೆಹಲಿಗೆ ಬರಬೇಕೋ ಬೇಡವೋ ಎಂಬುದನ್ನು ಅವರು ತಿಳಿಸುತ್ತಾರೆ. ಕೆಲವೆ ದಿನಗಳಲ್ಲಿ ಸಂಪುಟ … Continued

ಕರ್ನಾಟಕದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಸಿಎಂ ಬೊಮ್ಮಾಯಿ ತಮ್ಮನ್ನು ಭೇಟಿಯಾದ ನಂತರ ಪ್ರಧಾನಿ ಮೋದಿ ಟ್ವೀಟ್

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಬಸವರಾಜ ಬೊಮ್ಮಾಯಿ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿ … Continued