ಮಧ್ಯಪ್ರದೇಶ ಮುಸ್ಲಿಂ ಹುಡುಗಿಯ ಭಗವದ್ಗೀತೆ ಪ್ರೀತಿ…೫೦೦ಶ್ಲೋಕಗಳು ಈಕೆಗೆ ಸಲೀಸು

ಭೋಪಾಲ್: ಅಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಧರ್ಮದ ಚೌಕಟ್ಟಿಲ್ಲ, ಧರ್ಮ ಅಡ್ಡಿಯಲ್ಲ ಎಂಬುದಕ್ಕೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಮುಷಾರಿಫ್ ಖಾನ್ ಉತ್ತಮ ಉದಾಹರಣೆಯಾಗಿದ್ದಾರೆ. ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಭಗವದ್ಗೀತೆ ಶ್ಲೋಕಗಳನ್ನು ಬಹಳ ಸ್ಫುಟವಾಗಿ ಪಠಿಸುತ್ತಾಳೆ. ಇದು ಅವಳ ಹೆತ್ತವರು ಮತ್ತು ಶಿಕ್ಷಕರ ಸಂತೋಷಕ್ಕೆ ಕಾರಣವಾಗಿದೆ. ಇದನ್ನು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಜ್ಞಾಪಕ ಶಕ್ತಿಯ … Continued

ಅರೆರೆರೆ…ಈಗ ಸೀರಂ ಇನ್ಸ್ಟಿಟ್ಯೂಟ್‌, ಭಾರತ ಬಯೋಟೆಕ್‌ಗೂ ಒಳನುಸುಳುವ ಚೀನಾ ಹ್ಯಾಕರ್‌ಗಳು…!!

ಮುಂಬೈ: ಚೀನಾದ ವಿಚ್ಛಿದ್ರಕಾರಕ ಪ್ರಯತ್ನಗಳು ವಿದ್ಯುತ್ ಕಡಿತ ಉಂಟು ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಅದು ಭಾರತೀಯ ಲಸಿಕೆ ತಯಾರಕರ ಐಟಿ ವ್ಯವಸ್ಥೆಗಳನ್ನೂ ಹ್ಯಾಕಿಂಗ್ ಮಾಡುತ್ತವೆ…! ಇತ್ತೀಚಿನ ದಿನಗಳಲ್ಲಿ ಚೀನಿಯರು ಹೊಂಚು ಹಾಕಿರುವ ಇಂತಹ ಎರಡು ಕಂಪನಿಗಳು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ … Continued

ಬಂಗಾಳದಲ್ಲಿ ಮುಸ್ಲಿಂ ಧರ್ಮಗುರು ಸಿದ್ದಿಕಿ ಪಕ್ಷದ ಜೊತೆ ಮೈತ್ರಿ: ಕಾಂಗ್ರೆಸ್‌ ನಾಯಕತ್ವದ ವಿರುದ್ಧ ತಿರುಗಿಬಿದ್ದ ಶರ್ಮಾ

ಪಶ್ಚಿಮ ಬಂಗಾಳದ ಮುಸ್ಲಿಂ ಧರ್ಮಗುರು ಅಬ್ಬಾಸ್ ಸಿದ್ದಿಕಿ ನೇತೃತ್ವದ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಒಂದಿಗೆ ಕಾಂಗ್ರೆಸ್‌ ಪಸ್ಚಿಮ ಬಂಗಾಳ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವುದನ್ನು ಕಾಂಗ್ರೆಸ್ಸಿನ ಹಿರಿಯ ಮುಖಂಡ ಆನಂದ್ ಶರ್ಮಾ ಸೋಮವಾರ ಖಂಡಿಸಿದ್ದು, ಇದು ಪಕ್ಷದ ಪ್ರಮುಖ ಸಿದ್ಧಾಂತ, ಗಾಂಧಿ ಮತ್ತು ನೆಹರೂ ಜಾತ್ಯತೀತತೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಪಕ್ಷವು ಕೋಮುವಾದಿಗಳ ವಿರುದ್ಧ ಹೋರಾಡುವಲ್ಲಿ … Continued

ರಾಜಕಾರಣಿಗಳು ದಪ್ಪ ಚರ್ಮದವರೆಂದು ದಪ್ಪ ಸೂಜಿ ಬಳಸಲು ಯೋಜಿಸುತ್ತಿದ್ದೀರಾ: ಲಸಿಕೆ ನೀಡಿದ ದಾದಿಯರಿಗೆ ಪ್ರಧಾನಿ ಮೋದಿ ಪ್ರಶ್ನೆ

ರಾಜಕಾರಣಿಗಳು “ತುಂಬಾ ದಪ್ಪ ಚರ್ಮದವರೆಂದು ದಪ್ಪ ಸೂಜಿ ಬಳಸಲು ಯೋಜಿಸುತ್ತಿದ್ದೀರಾ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕೋವಿಡ್ -19 ಲಸಿಕೆ ನೀಡುವ ದಾದಿಯರನ್ನು ಕೇಳಿ ಹಾಸ್ಯ ಮಾಡಿದ ಪ್ರಸಂಗ ನಡೆಯಿತು. ಪ್ರಧಾನಿ ಮೋದಿ ತಮ್ಮ ಮೊದಲ ಡೋಸ್ ಕೊವಿಡ್‌-19 ಲಸಿಕೆಯನ್ನು ಸೋಮವಾರ ಇಲ್ಲಿನ ಏಮ್ಸ್‌ನಲ್ಲಿ ತೆಗೆದುಕೊಂಡರು. ಪುದುಚೇರಿಯವರಾದ ನರ್ಸ್ ಪಿ. ನಿವೇದ ಭಾರತ್ ಬಯೋಟೆಕ್‌ನ … Continued

ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್‌ ಬದಲಿಗೆ, ಜೂನ್ 21 ರಿಂದ ಜುಲೈ 5 ರ ವರೆಗೆ ನಡೆಯಲಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್‌ಕುಮಾರ್, ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಸಲಹೆ, ಮನವಿಗಳನ್ನು ಪರಿಗಣಿಸಿ … Continued

ಹೈದರಾಬಾದ್‌ನಲ್ಲಿ ಕೊವಿಡ್‌ ಲಸಿಕೆ ಡೋಸ್‌ ಪಡೆದ ಶತಾಯುಷಿ..!

ಹೈದರಾಬಾದ್: ತೆಲಂಗಾಣದ ಶತಮಾನ ಕಂಡ ವಯೋವೃದ್ಧರೊಬ್ಬರು ಎಲ್ಲಾ ಆತಂಕಗಳನ್ನು ಬದಿಗೊತ್ತಿ ಹೈದರಾಬಾದ್‌ನಲ್ಲಿ ಶಾಟ್ ಕೊವಿಡ್‌ -೧೯ ಚುಚ್ಚುಮದ್ದು ತೆಗೆದುಕೊಂಡರು. ಹೈದರಾಬಾದ್ ನಿವಾಸಿ ಮತ್ತು ಮಾಜಿ ಉದ್ಯಮಿ ಜೈದೇವ್ ಚೌಧರಿ (100) ಸೋಮವಾರ ಮೆಡಿಕೋವರ್ ಆಸ್ಪತ್ರೆಗಳಲ್ಲಿ ಮೊದಲ ಶಾಟ್ ತೆಗೆದುಕೊಂಡರು. ಅಧಿಕಾರಿಗಳ ಪ್ರಕಾರ, ಅವರು ಸಂತಸದಿಂದ ಇದ್ದಾರೆ. ಮತ್ತು ಹೆಚ್ಚು ಸಾಮಾಜಿಕವಾಗಿ ಸಕ್ರಿಯ ಜೀವನವನ್ನು ಆನಂದಿಸಲು ಲಸಿಕೆ … Continued

ಅತ್ಯಾಚಾರದ ಆರೋಪಿಗೆ ಬಾಧಿತ ಹುಡುಗಿ ಮದುವೆಯಾಗುತ್ತೀಯಾ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಯುವತಿಯನ್ನು ಹಲವು ಬಾರಿ ಬಲಾತ್ಕಾರ ಮಾಡಿದ ಆರೋಪ ಎದುರಿಸುತ್ತಿರುವ ಸರಕಾರಿ ಉದ್ಯೋಗಿಯಾಗಿರುವ ಆರೋಪಿಗೆ ಸರ್ವೋಚ್ಚ ನ್ಯಾಯಾಲಯವು ಬಾಧಿತ ಹುಡುಗಿಯನ್ನು ಮದುವೆಯಾಗುತ್ತೀಯಾ? ಎಂದು ಪ್ರಶ್ನಿಸಿದೆ. ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ ಆರೋಪಿಗೆ “ನೀನು ಸರಕಾರಿ ಉದ್ಯೋಗಿಯಾಗಿ ಯುವತಿಯನ್ನು ಬಲತ್ಕಾರ ಮಾಡುವ ಮುಂಚೆ ವಿಚಾರ ಮಾಡಬೇಕಿತ್ತು. ಅವಳನ್ನು ಮದುವೆಯಾಗುವಂತೆ ನಾವು ನಿನಗೆ ಒತ್ತಾಯ ಮಾಡುವುದಿಲ್ಲ. ನಿನಗೆ ಅವಳನ್ನು … Continued

ನಾನು ಯಾರನ್ನಾದರೂ ಕೊಲ್ಲಲು ಹೋಗುತ್ತೇನೆಯೇ ? : ವಿಮಾನ ನಿಲ್ದಾಣದಲ್ಲಿ ತನ್ನ ವಶಕ್ಕೆ ಪಡೆದ ಪೊಲೀಸರಿಗೆ ನಾಯ್ಡು ಪ್ರಶ್ನೆ

ನೀವು ನಾಟಕ ಆಡುತ್ತಿದ್ದೀರಾ? ನನ್ನನ್ನು ಯಾಕೆ ಬಂಧಿಸುತ್ತಿದ್ದೀರಿ…? ” ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ರೆನಿಗುಂಟಾದ ತಿರುಪತಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಪೊಲೀಸರು ವಶಕ್ಕೆ ಪಡೆದ ವಿಡಿಯೋ ವೈರಲ್‌ ಆಗಿದ್ದು ಆ ವಿಡಿಯೋದಲ್ಲಿ ಅವರು ಪೊಲೀಸರೊಂದಿಗೆ ಈ ರೀತಿ ವಾದ ಮಾಡಿದ್ದಾರೆ. ಅವರು ಜಗನ್ ಮೋಹನ್ ರೆಡ್ಡಿ … Continued

ಪಶ್ಚಿಮ ಬಂಗಾಳದಲ್ಲಿ ೮ ಹಂತದ ಚುನುವಣೆ: ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ

ನವ ದೆಹಲಿ: ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲಾಗಿದೆ. ವಕೀಲ ಎಂ.ಎಲ್. ಶರ್ಮಾ ಎಂಬವರು ಸಲ್ಲಿಸಿರುವ ಮನವಿಯಲ್ಲಿ, ರಾಜ್ಯದಲ್ಲಿ ಎಂಟು ಹಂತದ ಚುನಾವಣೆಗಳನ್ನು ನಡೆಸದಂತೆ ತಡೆಯಲು ಮತದಾನ ಸಮಿತಿಗೆ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಕೋರಲಾಗಿದೆ. ಫೆಬ್ರವರಿ 26 ರಂದು ಚುನಾವಣಾ … Continued

ತುಮಕೂರಿನಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಸಹಜ ಬೇಸಾಯ ಆಶ್ರಮ

ಸಹಜ ಕೃಷಿಗಾಗಿ ತುಮಕೂರಿನಲ್ಲಿ ‘ಗಾಂಧಿ ಸಹಜ ಬೇಸಾಯ ಆಶ್ರಮ’ ಎಂಬ ಹೆಸರಲ್ಲಿ ರೈತ ಆಶ್ರಮ ನಿರ್ಮಾಣವಾಗುತ್ತಿದ್ದು, ರೈತರಿಗಾಗಿಯೇ ತೆರೆದಿರುವ ದೇಶದ ಮೊದಲ ಆಶ್ರಮವೆಂಬ ಹೆಗ್ಗಳಿಕೆ ಇದಕ್ಕೆ ಸಿಗಲಿದೆ. ಮಹಾತ್ಮ ಗಾಂಧೀಜಿ ತತ್ವಗಳು, ಕಲ್ಪನೆಗಳಡಿ ತುಮಕೂರಿನ ಹೊನ್ನುಡಿಕೆ ಚೆಕ್‌ ಪೋಸ್ಟ್‌ ಬಳಿ ಈ ಕುಟೀರ ತಲೆ ಎತ್ತುತ್ತಿದೆ. ಈಗಾಗಲೇ ಸಹಜ ಬೇಸಾಯದ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿತೊಡಗಿಸಿಕೊಂಡಿರುವ … Continued