ಐಪಿಎಲ್‌ ೧೪ನೇ ಆವೃತ್ತಿ: ದೇಶದ ೪-೫ ನಗರಗಳಲ್ಲಿ ಆಯೋಜನೆಗೆ ಚಿಂತನೆ

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ೧೪ನೇ ಆವೃತ್ತಿಯನ್ನು ಒಂದು ನಗರದಲ್ಲಿ ಆಯೋಜಿಸುವ ಬದಲು ದೇಶದ ೪-೫ ನಗರಗಳಲ್ಲಿ ಆಯೋಜಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ. ಐಪಿಎಲ್‌ನ ೧೪ನೇ ಆವೃತ್ತಿಯನ್ನು ಒಂದಕ್ಕಿಂತ ಹೆಚ್ಚು ನಗರಗಳಲ್ಲಿ ಆಡಬಹುದು, ಈ ಕುರಿತು ಚರ್ಚೆ ನಡೆದಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂಲತಃ ಯೋಜಿಸಿದ್ದಕ್ಕಿಂತ ಹೆಚ್ಚಿನ ಸ್ಥಳಗಳಲ್ಲಿ ಐಪಿಎಲ್ ನಡೆಸುವ … Continued

ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಜನರು ತಕ್ಕ ಪಾಠ ಕಲಿಸ್ತಾರೆ:ಶ್ರೀನಿವಾಸ ಪ್ರಸಾದ ಎಚ್ಚರಿಕೆ

ಮೈಸೂರು: ಚುನಾವಣೆಗೆ ಇನ್ನೂ ಸಮಯವಿದೆ ಎಂದುಕೊಂಡು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಕಣ್ಮುಚ್ಚಿ ಕುಳಿತುಕೊಂಡರೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ ಅವರು ಸಿಎಂ ಯಡಿಯೂರಪ್ಪ ಅವರ ಹೆಸರು ಪ್ರಸ್ತಾಪಿಸದೇ ಟೀಕೆ ಮಾಡಿದರು. ಅಧಿಕಾರದ ಅಮಲನ್ನು ತಲೆಗೇರಿಸಿಕೊಂಡರೆ ಜನರು ಪಾಠ ಕಲಿಸುವುದರಲ್ಲಿ ಸಂಶಯವಿಲ್ಲ. ಪಕ್ಷಕ್ಕೆ ದುಡಿಯುವವರು ಕೆಲವರಾದರೆ, ಸ್ವಾರ್ಥಕ್ಕಾಗಿ ಮಾಡಿಕೊಳ್ಳುವವರು … Continued

ಕೆಂಪು ಕೋಟೆಯಲ್ಲಿ ಜನಸಂದಣಿ ಸಮಾಧಾನಿಸಲು ಯತ್ನಿಸುತ್ತಿದ್ದೆ ಎಂದ ಸಿಧು, ನೈಜ ಚಿತ್ರಣ ‌ ಮುಂದೆ ಇಡಿ ಎಂದು ಪೊಲೀಸರಿಗೆ ಸೂಚಿಸಿದ ಕೋರ್ಟ್

ತನಿಖಾ ಅಧಿಕಾರಿ “ಆರೋಪಿಗಳ ತಪ್ಪನ್ನು ಸಾಬೀತುಪಡಿಸಲು ಮಾತ್ರ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿಲ್ಲ, ಬದಲಿಗೆ ಅವನು ನ್ಯಾಯಾಲಯದ ಮುಂದೆ ನಿಜವಾದ ಚಿತ್ರಣವನ್ನು ನೀಡಬೇಕಾಗಿದೆ  ಎಂದು ಹೇಳಿರುವ ದೆಹಲಿ ನ್ಯಾಯಾಲಯವು ದೆಹಲಿ ಪೊಲೀಸರಿಗೆ ತನಿಖೆಯನ್ನು “ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿ ನಡೆಸುವಂತೆ  ಸೂಚಿಸಿದೆ. ಗಣರಾಜ್ಯೋತ್ಸವದಂದು ಕೆಂಪು ಕೋಟೆಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ನಟ, ಕಾರ್ಯಕರ್ತ ದೀಪ್‌ ಸಿಧು ಅವರು ಜನವರಿ 26 ರಂದು … Continued

ಪಿಎಸ್‌ಎಲ್‌ವಿ-ಸಿ 51 / ಅಮೆಜೋನಿಯಾ -1 ಮಿಷನ್ ಉಡಾವಣೆಯ ಕೌಂಟ್ಡೌನ್ ಆರಂಭ

ಬೆಂಗಳೂರು: ಪಿಎಸ್‌ಎಲ್‌ವಿ-ಸಿ 51 / ಅಮೆಜೋನಿಯಾ -1 ಮಿಷನ್ ಉಡಾವಣೆಯ ಕೌಂಟ್ಡೌನ್ ಶನಿವಾರ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಆರಂಭವಾಗಿದೆ. ಪಿಎಸ್‌ಎಲ್‌ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ನ 53 ನೇ ಮಿಷನ್ ಆಗಿರುವ ಪಿಎಸ್‌ಎಲ್‌ವಿ-ಸಿ 51 ರಾಕೆಟ್, ಬ್ರೆಜಿಲ್‌ನ ಅಮೆಜೋನಿಯಾ -1 ಅನ್ನು ಪ್ರಾಥಮಿಕ ಉಪಗ್ರಹವಾಗಿ ಮತ್ತು 18 ಸಹ ಉಪಗ್ರಹಗಳನ್ನು … Continued

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡಿನಲ್ಲಿ ದಾಖಲು

ಬೆಂಗಳೂರು: ಸೋಲಾಪುರ- ವಿಜಯಪುರ ಮಾರ್ಗದ 25.54 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿಯು ಕೇವಲ 18 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದು ಈಗ ಲಿಮ್ಕಾ ಬುಕ್‌ ಆಫ್‌ ರೆಕಾರ್ಡಿನಲ್ಲಿ ದಾಖಲಾಗಿದೆ. ಹೀಗೆಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೇ ಟ್ವೀಟ್ ಮಾಡಿದ್ದಾರೆ.ಅಲ್ಲದೆ ತಂಡಕ್ಕೆ ಅಭಿನೆಂದನೆಯನ್ನೂ ಸಲ್ಲಿಸಿದ್ದಾರೆ.ಈ ಕಾಮಗಾರಿಯು ರಾಷ್ಟ್ರೀಯ ಹೆದ್ದಾರಿ ಮೂಲಕ ಅನುಷ್ಠಾನಗೊಳ್ಳುತ್ತಿದೆ. ಇದು ಶಾಳಘಣೀಯ … Continued

ಮುಕೇಶ ಅಂಬಾನಿ ಮನೆ ಸಮೀಪ ನಿಂತಿದ್ದ ಜೆಲೆಟಿನ್‌ ಇಟ್ಟಿದ್ದ ಸ್ಕಾರ್ಪಿಯೋ ಕದ್ದು ತಂದಿದ್ದು..!

ಮುಂಬೈ: ವಾಹನದ ಮಾಲೀಕ (ಸ್ಕಾರ್ಪಿಯೋ) ಹಿರೆನ್ ಮನ್ಸುಖ್, ಶುಕ್ರವಾರ ಮಧ್ಯಾಹ್ನ ದಕ್ಷಿಣ ಮುಂಬೈನ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದು, ಅಂಬಾನಿಯ ಮನೆಯ ಬಳಿ ಪತ್ತೆಯಾದ ಎಸ್‌ಯುವಿಯ ದೃಶ್ಯಗಳನ್ನು ನೋಡಿದ ನಂತರ, ಇದು ತಮ್ಮ ವಾಹನಕ್ಕೆ ಹೋಲುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಥಾಣೆ ನಿವಾಸಿ ಮನ್ಸುಖ್ ಸುದ್ದಿಗಾರರೊಂದಿಗೆ ಮಾತನಾಡಿ, ಫೆಬ್ರವರಿ 17 ರಂದು ಎಸ್‌ಯುವಿಯನ್ನು … Continued

 ನಾಲ್ಕು ವಾರದಲ್ಲಿ  ಸ್ಫೋಟಕ ವಸ್ತು ಹಿಂತಿರುಗಿಸದಿದ್ದರೆ ಲೈಸೆನ್ಸ್ ರದ್ದು 

ರಾಯಚೂರು, ( ಹಟ್ಟಿ ಚಿನ್ನದ ಗಣಿ): ಕಲ್ಲುಕ್ವಾರಿ ಮತ್ತು ಗಣಿಗಾರಿಕೆ ಪ್ರದೇಶಗಳಲ್ಲಿ ಯಾರಾದರೂ ಕಾನೂನು ಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರೆ, ನಾಲ್ಕು ವಾರದೊಳಗೆ ಹಿಂತಿರಿಗಿಸಬೇಕು.ಇಲ್ಲದಿದ್ದರೆ ಅಂತಹವರ ಲೈಸೆನ್ಸ್ ( ಪರವನಾಗಿ)ಯನ್ನು ರದ್ದುಪಡಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್. ನಿರಾಣಿ ಎಚ್ಚರಿಕೆ ನೀಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಪ್ರದೇಶಕ್ಕೆ ಇಂದು … Continued

 ಕೊವಿಡ್ ಸಮಯದ ೩ನೇ ತ್ರೈಮಾಸಿಕ: ಮೊದಲ ಸಲ ಶೇ. ೦.೪ ಬೆಳವಣಿಗೆ ಕಂಡ ಜಿಡಿಪಿ 

ಮೊದಲ ಸಲ ಸಕಾರಾತ್ಮ ಬೆಳವಣಿಗೆ ಕಂಡ ಆರ್ಥಿಕ ದರ ಶುಕ್ರವಾರ ಬಿಡುಗಡೆಯಾದ ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಸತತ ಎರಡು ತ್ರೈಮಾಸಿಕಗಳ ನಂತರ ಡಿಸೆಂಬರ್ ಅಂತ್ಯದ ಮೂರು ತಿಂಗಳಲ್ಲಿ ಭಾರತದ ಒಟ್ಟು ಜಿಡಿಪಿ 0.4% ರಷ್ಟು  ಬೆಳವಣಿಗೆ ( ಗ್ರೋಥ್‌) ಕಂಡಿದೆ. ಕೊರೊನಾ ವೈರಸ್ ಸೋಂಕುಗಳ ಉಲ್ಬಣದಿಂದ ಉಂಟಾದ ಹೊಸ ಸವಾಲುಗಳನ್ನು ಎದುರಿಸುತ್ತಿರುವ ಏಷ್ಯಾದ ಮೂರನೇ … Continued

ಪಂಚ ರಾಜ್ಯಗಳಿಗೆ ಚುನಾವಣೆ ದಿನಾಂಕ ಪ್ರಕಟ: ಪಶ್ಚಿಮ ಬಂಗಾಳದಲ್ಲಿ ೮ಹಂತ, ಅಸ್ಸಾಂನಲ್ಲಿ 3ಹಂತ, ತಮಿಳುನಾಡು- ಕೇರಳ, ಪುದುಚೇರಿಯಲ್ಲಿ ಒಂದೇ ಹಂತದ ಚುನಾವಣೆ

ನವದೆಹಲಿ: ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತದ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. ಅಸ್ಸಾಂ ಚುನಾವಣೆ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಮೂರು ಹಂತಗಳಲ್ಲಿ ನಡೆಯಲಿದ್ದು, ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏ.೬ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಕೇರಳದ ಮಲಪ್ಪುರಂ … Continued

ಇದು ಕೇವಲ ಟ್ರೈಲರ್’ .. ಅಂಬಾನಿ ನಿವಾಸದ ಬಳಿ ನಿಲ್ಲಿಸಿದ್ದ ಎಸ್‌ಯುವಿ ಕಾರಿನ ಬ್ಯಾಗ್‌ನಲ್ಲಿ ಪತ್ತೆಯಾದ ಪತ್ರದಲ್ಲಿದ್ದ ಎಚ್ಚರಿಕೆ

ಮುಂಬೈ: ಮುಖೇಶ್ ಅಂಬಾನಿಯ ನಿವಾಸ ಆಂಟಿಲಿಯಾ ಬಳಿ ಎಸ್‌ಯುವಿಯಿಂದ ವಶಪಡಿಸಿಕೊಂಡ 20 ಜೆಲೆಟಿನ್ ಸ್ಟಿಕ್‌ಗಳ ಜೊತೆಗೆ, ರಿಲಯನ್ಸ್ ಇಂಡಸ್ಟ್ರಿಗಳ ಒಡೆತನದ ಫ್ರ್ಯಾಂಚೈಸ್ ಕ್ರಿಕೆಟ್ ತಂಡವಾದ ಮುಂಬೈ ಇಂಡಿಯನ್ಸ್‌ನ ಚೀಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಖೇಶ್ ಮತ್ತು ನೀತಾ ಅಂಬಾನಿ ಅವರನ್ನು ಉದ್ದೇಶಿಸಿ ಬೆದರಿಕೆ ಪತ್ರವನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. “ಇದು ಕೇವಲ ಟ್ರೈಲರ್ ಆಗಿದ್ದು, ಮುಂದಿನ ಬಾರಿ … Continued