ಹುಬ್ಬಳ್ಳಿ : ಬನ್ನಿ ಭಾವಗಳೇ… ಕನ್ನಡ ನುಡಿ ಹಬ್ಬಕೆ ಕರೆಯುತಿದೆ ಕೈ ಬೀಸಿ

(ನವೆಂಬರ್‌ ೨೬ರಂದು ಸಾಯಂಕಾಲ ೫:೩೦ಕ್ಕೆ ವಿದ್ಯಾನಗರ ಲಿಂಗರಾಜನಗರ ರಸ್ತೆಯ ಕಾಳಿದಾಸ ನಗರ ಬಸ್ ನಿಲುಗಡೆ ಕನ್ನಡ ನುಡಿ ಹಬ್ಬ ಜರುಗಲಿದ್ದು, ಆ ನಿಮಿತ್ಯವಾದ ಲೇಖನ) ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕದ ಏಕೀಕರಣ ಒಂದು ಮಹತ್ವ ಪೂರ್ಣ ಐತಿಹಾಸಿಕ ಘಟನೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಾಡು-ನುಡಿ ಕನ್ನಡದ ಸ್ಥಿತಿ ಗತಿ ವಿಷಯ ಚರ್ಚೆಗೆ ಬಂದಾಗ ಈ ನಾಡಿನ … Continued

ಹುಬ್ಬಳ್ಳಿ: ಯುವತಿ ಮಾತನಾಡಿಸಿದ್ದಕ್ಕೆ ವಿದ್ಯಾರ್ಥಿ ಅಪಹರಿಸಿ ಹಲ್ಲೆ

ಹುಬ್ಬಳ್ಳಿ: ಯುವತಿಯನ್ನು ಮಾತನಾಡಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬನನ್ನು ಅಪಹರಣ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಾಲ್ವರು ಸೇರಿ ಆತನ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಕೇಶ್ವಾಪುರ … Continued

ದೆಹಲಿ-ಹುಬ್ಬಳ್ಳಿ – ದೆಹಲಿ ಇಂಡಿಗೋ ವಿಮಾನಯಾನಕ್ಕೆ ಸಚಿವ ಜೋಶಿ ಚಾಲನೆ

ಹುಬ್ಬಳ್ಳಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಜೊತೆ ವರ್ಚುವಲ್ ಸಭೆಯ ಮೂಲಕ ದೆಹಲಿ-ಹುಬ್ಬಳ್ಳಿ, ಹುಬ್ಬಳ್ಳಿ-ದೆಹಲಿ ನಡುವೆ ನೇರ ವಿಮಾನಯಾನಕ್ಕೆ ಇಂದು, ಸೋಮವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ವಿಮಾನಯಾನ ಸೇವೆಯಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕ ಜನರ … Continued

ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಪ್ರಮೋದ ಮುತಾಲಿಕ್ ಕರೆ

ಹುಬ್ಬಳ್ಳಿ: ‘ಪ್ರಸ್ತುತ ದೀಪಾವಳಿ ಸಂದರ್ಭದಲ್ಲಿ ಹಲಾಲ್ ಗುರುತು ಇರುವ ವಸ್ತುಗಳನ್ನು ನಿರಾಕರಿಸಿ ಹಲಾಲ್ ಮುಕ್ತ ದೀಪಾವಳಿ ಹಬ್ಬ ಆಚರಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕರೆ ನೀಡಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಾಲ್‌ ಹಿಂದೂ ಸಂಪ್ರದಾಯ, ಸಂಸ್ಕೃತಿಗೆ ವಿರೋಧ. ಹಿಂದೂ ವ್ಯಾಪಾರಸ್ಥರಿಂದಲೇ ಖರೀದಿಸಿ ಶಾಸ್ತ್ರೋಕ್ತವಾಗಿ ಹಬ್ಬ ಆಚರಿಸಬೇಕು ಎಂದು ಹೇಳಿದರು. ಹಲಾಲ್ … Continued

ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ನಿಧನ

ಹುಬ್ಬಳ್ಳಿ: ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ಅವರು ಶುಕ್ರವಾರ (ಅಕ್ಟೋಬರ್‌ 7) ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಬ್ಬಾರ್ ಖಾನ್ ಹೊನ್ನಳ್ಳಿ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು, ಶುಕ್ರವಾರ ನಿಧನರಾದರು. ಜಬ್ಬಾರ್‌ ಖಾನ್‌ ಹೊನ್ನಾಳಿ ಅವರು ಎಸ್​.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ಯುವಜನ ಮತ್ತು … Continued

ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ; 800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

ಹುಬ್ಬಳ್ಳಿ:  ಸರಳ ವಾಸ್ತು ಖ್ಯಾತಿಯ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಇಲ್ಲಿನ  ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸುಮಾರು 800ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಎಸಿಪಿ ವಿನೋದ್‌ ಮುಕ್ತೇದಾರ ಆರೋಪ ಪಟ್ಟಿ ಸಲ್ಲಿಸಿದ್ದು, ಕೊಲೆಗೆ ಕಾರಣವಾದ ಚಂದ್ರಶೇಖರ ಗುರೂಜಿ ಮತ್ತು ಆರೋಪಿಗಳಿಬ್ಬರ ನಡುವಿನ ಆಸ್ತಿ ವಿವಾದ ಹಾಗೂ ಇತರ ವಿಷಯಗಳಿಗೆ … Continued

ಯುವಕನಿಗೆ ಬಲವಂತದಿಂದ ಖತ್ನಾ ಮಾಡಿಸಿ ಮತಾಂತರ ಯತ್ನದ ಆರೋಪ: ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲು

ಹುಬ್ಬಳ್ಳಿ : ಮಂಡ್ಯದ ಯಾದವನಹಳ್ಳಿ ಗ್ರಾಮದ ಯುವಕನೊಬ್ಬನಿಗೆ ಮರ್ಮಾಂಗದ ಖತ್ನಾ ಮಾಡಿ ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ 11 ಮಂದಿ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕಿನ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ (26) ಎಂಬವರು ತನ್ನನ್ನು ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು 11 ಮಂದಿ … Continued

ಪಿಎಫ್ಐ ಮುಖಂಡರ ಮನೆ ಮೇಲೆ ಎನ್‌ಐಎ ದಾಳಿ: ಹುಬ್ಬಳ್ಳಿಯಲ್ಲಿ ಪ್ರತಿಭಟನೆ, ಕೆಲವರು ವಶಕ್ಕೆ

ಹುಬ್ಬಳ್ಳಿ: ಎನ್‌ಐಎದವರು ಪಿಎಫ್ಐ ಹಾಗೂ ಎಸ್ ಡಿಪಿಐ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದನ್ನು ಖಂಡಿ ಪಿಎಫ್‌ಐ ಕಾರ್ಯಕರ್ತರು ಗೋಬ್ಯಾಕ್ ಎನ್ ಐಎ ಎಂದು ಘೋಷಣೆ ಕೂಗಿ ನಗರದ ಕೌಲಪೇಟೆಯಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕುಮ್ಮಕ್ಕಿನಿಂದಾಗಿ ಎನ್‌ಐಎದವರು ಪಿಎಫ್ಐ ಹಾಗೂ ಎಸ್‌ಡಿಪಿಐ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿದ್ದಾರೆಂದು … Continued

ಹುಬ್ಬಳ್ಳಿ : ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಕಾರು, ಮಹಿಳೆ ಸೇರಿ ಮೂವರು ಸಾವು

ಹುಬ್ಬಳ್ಳಿ : ತಾಲೂಕಿನ ವರೂರು ಗ್ರಾಮದ ಗಣೇಶ ಹೊಟೇಲ್‌ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮಹಿಳೆ ಸೇರಿ ಮೂವರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಅಪಘಾತದಲ್ಲಿ ದಾವಣಗೆರೆ ಮೂಲದ ಚಾಲಕ ಶಾರೂಕ್‌ (27), ಸೊಹೇಲ್ (26), ಚಿಕ್ಕಮಗಳೂರು ಜಿಲ್ಲೆ ಆಲದೂರಿನ ಎಚ್.ಕೆ. ಸುಶೀಲಾ (35) ಮೃತಪಟ್ಟಿದ್ದಾರೆ ಹಾಗೂ … Continued

ಮುರುಘಾ ಶರಣರ ವಿರುದ್ಧ ಆರೋಪ; ಸಂಪೂರ್ಣ ಹೊಣೆ ತನಿಖಾಧಿಕಾರಿಗೆ, ಯಾವುದೇ ಒತ್ತಡವಿಲ್ಲ: ಎಡಿಜಿಪಿ ಅಲೋಕಕುಮಾರ್

ಹುಬ್ಬಳ್ಳಿ: ಚತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾದ ಪೋಕ್ಸೊ ಪ್ರಕರಣದ ಕುರಿತು ಎಲ್ಲ ವಿಧದಲ್ಲೂ ತನಿಖೆ ನಡೆಯುತ್ತಿದೆ.ಸಂಪೂರ್ಣ ತನಿಖೆ ಹೊಣೆಯನ್ನು ಪ್ರಕರಣದ ತನಿಖಾಧಿಕಾರಿಗೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಯಾರಿಂದಲೂ ಒತ್ತಡ ಬಂದಿಲ್ಲ’ ಎಂದು ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಕರಣಕ್ಕೆ … Continued