47,262 ಜನರಿಗೆ ಸೋಂಕು.. ಭಾರತ 130 ದಿನಗಳಲ್ಲಿ ಕಂಡ ದೈನಂದಿನ ಅತಿದೊಡ್ಡ ಏರಿಕೆ..!!

ನವ ದೆಹಲಿ: ಕಳೆದ 24 ತಾಸಿನಲ್ಲಿ ದೇಶದಲ್ಲಿ 47,262 ಜನರು ಕೊರೊನಅ ಸೋಂಕು ದಾಖಲಾದ ವರದಿಯಾಗಿದೆ. ಇದೇ ಅವಧಿಯಲ್ಲಿ 275 ಜನರು ಈ ಕಾಯಿಲೆಗೆ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದು 130 ದಿನಗಳಲ್ಲಿ ದೇಶವು ಕಂಡ ದೈನಂದಿನ ಪ್ರಕರಣಗಳಲ್ಲಿ ಇದು ಅತಿದೊಡ್ಡ ಏರಿಕೆಯಾಗಿದೆ.. ಭಾರತವು ಕೊನೆಯದಾಗಿ 2020ರ ನವೆಂಬರ್‌ನಲ್ಲಿ 47,000 ಕ್ಕೂ … Continued

ತಮಿಳರ ವಿರುದ್ಧದ ಅಪರಾಧ: ಯುಎನ್‌ಹೆಚ್‌ಆರ್‌ಸಿಯಲ್ಲಿ ಶ್ರೀಲಂಕಾ ವಿರುದ್ಧದ ನಿರ್ಣಯಕ್ಕೆ ಮತದಾನದಿಂದ ದೂರ ಉಳಿದ ಭಾರತ

ನವ ದೆಹಲಿ: ಜಿನೀವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್‌ಹೆಚ್‌ಆರ್‌ಸಿ) ಶ್ರೀಲಂಕಾದ ತಮಿಳರ ವಿರುದ್ಧದ ಯುದ್ಧ ಅಪರಾಧಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ವಿರುದ್ಧದ ನಿರ್ಣಯದ ಮೇಲೆ ಭಾರತ ಮತ್ತು ಇತರ 13 ದೇಶಗಳು ಮತದಾನದಿಂದ ದೂರವುಳಿದಿವೆ. 47ರಲ್ಲಿ 22 ಸದಸ್ಯರು ಪರವಾಗಿ ಮತ ಚಲಾಯಿಸಿದ ನಂತರ ‘ಶ್ರೀಲಂಕಾದಲ್ಲಿ ಸಾಮರಸ್ಯದ ಹೊಣೆಗಾರಿಕೆ ಮತ್ತು ಮಾನವ ಹಕ್ಕುಗಳ ಉತ್ತೇಜನ’ ಎಂಬ … Continued

ಭಾರತದಲ್ಲಿ 40,715 ದೈನಂದಿನ ಕೊರೊನಾ ಪ್ರಕರಣ

ನವ ದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 40,715 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಕಳೆದ ಎರಡು ದಿನಗಳಲ್ಲಿ ದಾಖಲಾದ ದೈನಂದಿನ ಸೋಂಕುಗಳಿಗಿಂತ ಕಡಿಮೆ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ 199 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮಂಗಳವಾರ ತಿಳಿಸಿದ್ದಾರೆ. ಸೋಂಕಿನ ಸಂಖ್ಯೆ 11.68 ದಶಲಕ್ಷಕ್ಕೆ ಏರಿಕೆಯಾಗಿದ್ದು, … Continued

ಭಾರತದಲ್ಲಿ 46,951 ದೈನಂದಿನ ಕೊರೊನಾ ಸೋಂಕು…ಮಹಾರಾಷ್ಟ್ರವೇ ದೊಡ್ಡ ತಲೆನೋವು

ನವ ದೆಹಲಿ: ಭಾರತದಲ್ಲಿ ಕಳೆದ 24 ತಾಸಿನಲ್ಲಿ 46,951 ಹೊಸ ಕೊರೊನಾ ಸೋಂಕು ದಾಖಲಿಸಿದೆ.ಇದರಲ್ಲಿ 30,535 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಮತ್ತು 2,644 ಪ್ರಕರಣಗಳು ಪಂಜಾಬ್‌ನಲ್ಲಿ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಜನವರಿ 12 ರಿಂದ ಮೊದಲ ಬಾರಿಗೆ ದೇಶಾದ್ಯಂತ ಸಾವುಗಳ ಸಂಖ್ಯೆ 200 ಅಂಕಿಗಳನ್ನು ದಾಟಿದ್ದು, 212 ಜನ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು … Continued

ಭಾರತದಲ್ಲಿ 44 ಸಾವಿರ ಸಮೀಪಕ್ಕೆ ನೆಗೆದ ದೈನಂದಿನ ಕೊರೊನಾ ಸೋಂಕು…!

ನವ ದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಸ್ಫೋಟಗೊಂಡಿದ್ದು, ಕಳೆದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 43,846 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಕಳೆದ ವರ್ಷದ 112 ದಿನಗಳ ಗರಿಷ್ಠ ಸಂಖ್ಯೆಯಾಗಿದೆ. ಇದೇ ಸಮಯದಲ್ಲಿ ದಿನವೊಂದರಲ್ಲಿ 197 ಕೊವಿಡ್‌ ಮರನಗಳು ಸಂಭವಿಸಿವೆ. ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಪ್ರಕರಣ ಹೆಚ್ಚಳವಾಗಿದ್ದು ದೇಶದಲ್ಲಿ ಒಟ್ಟಾರೆ ಪ್ರಕರಣಗಳು ಹೆಚ್ಚಲು ಕಾರಣವಾಗಿದ್ದರೆ ಉಳಿದಂತೆ ದೆಹಲಿ, … Continued

ವಿಶ್ವದ ಸಂತಸವಾಗಿರುವ ದೇಶಗಳ ಪಟ್ಟಿ ಬಿಡುಗಡೆ : ಪಾಕಿಸ್ತಾನವು ಭಾರತಕ್ಕಿಂತ ಹೆಚ್ಚು ಸಂತೋಷವಾಗಿದೆ..!

ವಿಶ್ವದಲ್ಲಿ ಅತ್ಯಂತ ಸಂತಸವಾಗಿರುವ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ವಿಶ್ವಸಂಸ್ಥೆಯು ಶುಕ್ರವಾರ ಬಿಡುಗಡೆ ಮಾಡಿದ ವಿಶ್ವ ಸಂತೋಷ ವರದಿ 2021ರ ಪಟ್ಟಿಯಲ್ಲಿ ಫಿನ್ಲೆಂಡ್ ಅಗ್ರಸ್ಥಾನದಲ್ಲಿದ್ದು, 149 ರಾಷ್ಟ್ರಗಳ ಪೈಕಿ ಭಾರತ 139ನೇ ಸ್ಥಾನ ಪಡೆದುಕೊಂಡಿದೆ. ವಿಶೇಷವೆಂದರೆ ಪಾಕಿಸ್ತಾನವು ಭಾರಕ್ಕಿಂತ ಹೆಚ್ಚು ಸಂತೋಷ ಇರುವ ರಾಷ್ಟ್ರವಾಗಿದೆ. ಯಾಕೆಂದರೆ ಅದು 105ನೇ ಸ್ಥಾನದಲ್ಲಿದೆ. ವಿಶ್ವದ 149 ದೇಶಗಳ ನಾಗರಿಕರು … Continued

ಭಾರತದಲ್ಲಿ ಮತ್ತೆ ಕೊರೊನಾ ಹೆಚ್ಚಳ…40,953 ತಲುಪಿದ ದೈನಂದಿನ ಸೋಂಕು..!!

ನವ ದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅಬ್ಬರ ಹೆಚ್ಚಾಗುತ್ತಿದೆ. ಕಳೆದ 24 ತಾಸಿನಲ್ಲಿ 40,953 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಮದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ ನವೆಂಬರ್‌ 28ರ ನಂತರ ಇದು ಅತಿ ಹೆಚ್ಚಿನ ಪ್ರಕರಣವಾಗಿದೆ. ಕೊರೊನಾ ದೇಶಾದ್ಯಂತ ಮತ್ತೆ ಎಚ್ಚರಿಕೆ ಗಂಟೆ ಬಾರಿಸುತ್ತಿದೆ. ಕೇಂದ್ರ ಆರೋಗ್ಯ … Continued

ಜೂನ್ 1ರಿಂದ ಚಿನ್ನಾಭರಣಗಳಿಗೆ ಹಾಲ್ ಮಾರ್ಕಿಂಗ್ ಕಡ್ಡಾಯ ಮಾಡಿದ ಬಿಐಎಸ್

ನವ ದೆಹಲಿ : ಮಹತ್ವದ ಬೆಳವಣಿಗೆಯಲ್ಲಿ 2021ರ ಜೂನ್ 1ರಿಂದ ಅನ್ವಯವಾಗುವಂತೆ ಚಿನ್ನಾಭರಣ ಮತ್ತು ಕರಕುಶಲ ವಸ್ತುಗಳನ್ನು ಕಡ್ಡಾಯವಾಗಿ ಗುರುತಿಸುವಂ ಹಾಲ್ ಮಾರ್ಕಿಂಗ್ ಅನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕಡ್ಡಾಯಗೊಳಿಸಿ ಆದೇಶಿಸಿದೆ. ಈ ಕುರಿತು ಪ್ರಕನೆ ನೀಡಿರುವಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್), ಜೂನ್ 1, 2021ರಿಂದ, ಚಿನ್ನಾಭರಣಗಳು ಮತ್ತು ಕರಕುಶಲ ವಸ್ತುಗಳನ್ನು … Continued

59% ಭಾರತೀಯ ಉದ್ಯೋಗದಾತರು ರಿಮೋಟ್‌ ವರ್ಕಿಂಗ್‌ ಪರ ಇಲ್ಲ: ಸಮೀಕ್ಷೆಯಲ್ಲಿ ಬೆಳಕಿಗೆ

ನವ ದೆಹಲಿ: ಸಾಂಕ್ರಾಮಿಕ ರೋಗವು ಕಚೇರಿಯಿಂದ ಕೆಲಸ ಮಾಡುವುದಕ್ಕೆ ಅಡ್ಡಿಪಡಿಸುತ್ತಿದ್ದರೂ ಭಾರತದಲ್ಲಿ ಶೇ 59 ರಷ್ಟು ಉದ್ಯೋಗದಾತರು ದೂರಸ್ಥ (ರಿಮೋಟ್‌ ವರ್ಕಿಂಗ್‌) ಕೆಲಸದ ಪರ ಇಲ್ಲ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಜಾಬ್ ಸೈಟ್ ನಡೆಸಿದ ಸಮೀಕ್ಷೆಯ ಪ್ರಕಾರ, 67 ಪ್ರತಿಶತದಷ್ಟು ದೊಡ್ಡದಾದ ಮತ್ತು 70 ಪ್ರತಿಶತದಷ್ಟು ಮಧ್ಯಮ ಗಾತ್ರದ ಭಾರತೀಯ ಸಂಸ್ಥೆಗಳು ತಮ್ಮ ಜಾಗತಿಕ … Continued

ಭಾರತದಲ್ಲಿ 40 ಸಾವಿರ ಸನಿಹಕ್ಕೆ ಬಂದ ದೈನಂದಿನ ಕೊರೊನಾ ಸೋಂಕು..!

ನವ ದೆಹಲಿ: ಶುಕ್ರವಾರ ಬೆಳಿಗ್ಗೆ 8 ಕ್ಕೆ ಕೊನೆಗೊಂಡ ಕೊನೆಯ 24 ಗಂಟೆಗಳಲ್ಲಿ ಭಾರತದಲ್ಲಿ 39,726 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ 154 ಜನರು ಇದಕ್ಕೆ ಮೃತಪಟ್ಟಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,15,14,331ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 1,59,370 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 2,71,282 … Continued