ಭಾರತದೊಂದಿಗೆ ಉತ್ತಮ ಬಾಂಧವ್ಯ, ಪಾಕ್‌ ಬಯಕೆ ;ಮೋದಿಗೆ ಪಾಕ್‌ ಪ್ರಧಾನಿ ಪತ್ರ

ನವದೆಹಲಿ: ಪಾಕಿಸ್ತಾನ ಹಾಗೂ ಭಾರತದ ನಡುವಿನ ಎಲ್ಲಾ ಸಮಸ್ಯೆಗಳನ್ನು, ಬಹುಮುಖ್ಯವಾಗಿ ಜಮ್ಮು ಹಾಗೂ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಲು ರಚನಾತ್ಮಕಸಂವಾದಕ್ಕೆ ಶಕ್ತವಾದ ವಾತಾವರಣ ನಿರ್ಮಿಸಬೇಕಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪಾಕಿಸ್ತಾನ ದಿನಕ್ಕೆ ಶುಭಾಶಯ ಕೋರಿ ಪತ್ರ ಬರೆದಿದ್ದಕ್ಕೆ ಧನ್ಯವಾದ. ಸಾರ್ವಭೌಮ ರಾಜ್ಯ ಸೃಷ್ಟಿಯಲ್ಲಿ ನಮ್ಮ … Continued

ಭಾರತದಲ್ಲಿ ಸಂಬಳ ಪಡೆಯುವ ಎಷ್ಟು ಜನರು ಅಲ್ಟ್ರಾ-ರಿಚ್ ಕ್ಲಬ್‌ಗೆ ಸೇರಿದ್ದಾರೆ..?

ನವ ದೆಹಲಿ: ಭಾರತದ ಕನಿಷ್ಠ 14% ರಷ್ಟು ನಿವ್ವಳ ಮೌಲ್ಯದ ವ್ಯಕ್ತಿಗಳು (ultra-high net worth individuals) ಸಂಬಳ ಪಡೆಯುವ ನೌಕರರ ವಿಭಾಗದವರು ಎಂದು ನೈಟ್ ಫ್ರಾಂಕ್ ನಡೆಸಿದ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಇದರೊಂದಿಗೆ, ಅಲ್ಟ್ರಾ-ಶ್ರೀಮಂತ ಕ್ಲಬ್‌ನಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಏಷ್ಯಾ ಪೆಸಿಫಿಕ್‌ನಲ್ಲಿ ಭಾರತ ನಾಲ್ಕನೇ ಅತಿ ಹೆಚ್ಚು ಕೊಡುಗೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. … Continued

ಭಾರತದಲ್ಲಿ ಎರಡನೇ ದಿನವೂ ದೈನಂದಿನ ಕೊರೊನಾ ಪ್ರಕರಣ ತುಸು ಇಳಿಕೆ

ನವ ದೆಹಲಿ: ದೇಶದಲ್ಲಿ ಎರಡನೇ ಅಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು ಕಳೆದ 24 (ಮಂಗಳವಾರ) 56,211 ಹೊಸ ಕೊರೊನಾ ಸೋಂಕುಗಳು ಪತ್ತೆಯಾಗಿವೆ.ಒಂದೇ ದಿನ ಕೊರೊನಾ ಸೋಂಕಿಗೆ 271 ಜನರು ಮೃತಪಟ್ಟಿದ್ದಾರೆ. 37,028 ಜನ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೊರೊನಾ ಸೋಂಕು ಪೀಡಿತರಾದವರ ಸಂಖ್ಯೆ 1,20,95,855ಕ್ಕೆ ಏರಿಕೆ ಆಗಿದೆ.‌ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 1,62,114ಕ್ಕೆ … Continued

ಭಾರತದಲ್ಲಿ ಸೋಮವಾರವೂ 68 ಸಾವಿರ ದಾಟಿದ ದೈನಂದಿನ ಕೊರೊನಾ ಪ್ರಕರಣ..!

ನವ ದೆಹಲಿ: ದೇಶಾದ್ಯಂತ ಕೊರೊನಾ ಆರ್ಭಟ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ (ಸೋಮವಾರ) 68,020 ಜನರಲ್ಲಿ ಸೋಂಕು ಪತ್ತೆಯಾಗಿದೆ. 291 ಜನರು ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,20,39,644ಕ್ಕೆ ಏರಿಕೆಯಾಗಿದೆ. ಹಾಗೂ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 1,61,843ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 5,21,808 ಕೊರೊನಾ ಸಕ್ರಿಯ ಪ್ರಕರಣಗಳಿದ್ದು 1,13,55,993 ಸೋಂಕಿತರು ಗುಣಮುಖರಾಗಿದ್ದಾರೆ. … Continued

ಭಾರತದಲ್ಲಿ 63 ಸಾವಿರದ ಸನಿಹಕ್ಕೆ ಬಂದ ದೈನಂದಿನ ಕೊರೊನಾ ಸೋಂಕು..!

ನವ ದೆಹಲಿ: ದೇಶಾದ್ಯಂತ ಕೊರೊನಾ ಆರ್ಭಟ ದಿನೇ ದಿನೇ ಹೆಚ್ಚುತ್ತಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 62,714 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ತಾಸಿನಲ್ಲಿ 312 ಜನರು ಮಹಾಮಾರಿಗೆ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 1,61,552ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,19,71,624ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 4,86,310 … Continued

ಭಾರತದಲ್ಲಿ ಒಂದೇ ದಿನಕ್ಕೆ 62 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕು ದಾಖಲು..ಮಹಾರಾಷ್ಟ್ರದಲ್ಲೇ ಶೇ.60ಕ್ಕಿಂತ ಹೆಚ್ಚು..!!

ನವ ದೆಹಲಿ: ಕಳೆದ 24 ತಾಸಿನಲ್ಲಿ ಭಾರತದಲ್ಲಿ ಒಟ್ಟು 62,258 ಹೊಸ ಕೊರೊನಾ ಸೋಂಕುಗಳು ಪತ್ತೆಯಾಗಿದ್ದು, ಇದು ಕಳೆದ ಅಕ್ಟೋಬರ್‌ 16ರ ಈಚೆಗೆ ಕಂಡುಬಂದ ಅತಿ ಹೆಚ್ಚು ದೈನಂದಿನ ಪ್ರಕರಣಗಳಾಗಿವೆ. ಈ ಪೈಕಿ 36,902 ಪ್ರರಣಗಳು ಅಂದರೆ ಶೇ62ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲೇ ದಾಖಲಾಗಿವೆ. ಒಟ್ಟು 291 ಸಾವುಗಳು ವರದಿಯಾಗಿದ್ದು, ದರಲ್ಲಿ ಮಹಾರಾಷ್ಟ್ರದಲ್ಲಿ 117 ಮತ್ತು ಪಂಜಾಬ್‌ನಲ್ಲಿ … Continued

ಭಾರತದಲ್ಲಿ 159 ದಿನಗಳ ನಂತರ ಅತಿ ಹೆಚ್ಚು ದೈನಂದಿನ ಕೊರೊನಾ ಉಲ್ಬಣ…!!

ನವ ದೆಹಲಿ : ದೇಶದಲ್ಲಿ ಕೊರೋನಾ ಉಲ್ಬಣ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 59,118 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. 257 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಕ್ಟೋಬರ್ 17ರ ನಂತರ 159 ದಿನಗಳಲ್ಲಿ ದೈನಂದನ ಅತಿ ಹೆಚ್ಚು ಪ್ರಕರಣ ದಾಖಲಾಗಿರುವುದಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 32,987 … Continued

ಭಾರತದಲ್ಲಿ ಕೊರೊನಾ ಸ್ಫೋಟ:53 ಸಾವಿರ ದಾಟಿದ ಏಕದಿನದ ಸೋಂಕು..!!

ನವ ದೆಹಲಿ: ದೇಶಾದ್ಯಂತ ಕೊರೊನಾ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿತ್ತಲೇ ಇದೆ. ಭಾರತದಲ್ಲಿ ದೈನಂದಿನ ಸೋಂಕಿನ ಸಂಖ್ಯೆ ಗುರುವಾರದ ವರದಿಯಲ್ಲಿ 53 ಸಾವಿರ ದಾಟಿದೆ. ಕಳೆದ 24 ತಾಸಿನಲ್ಲಿ ದೇಶದಲ್ಲಿ 53,476 ಜನರಲ್ಲಿ ಸೋಂಕು ಪತ್ತೆಯಾಗಿದೆ ಹಾಗೂ 251 ಜನರು ಈ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ತಿಳಿಸಿದೆ. ದೇಶದಲ್ಲಿ … Continued

ಭಾರತದಲ್ಲಿ ಕಂಡುಬಂದ ಕೊರೊನಾದ ಹೊಸ ಡಬಲ್ ರೂಪಾಂತರಿ…ಏನಿದರ ಗುಣಲಕ್ಷಣ..?

ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ 18 ರಾಜ್ಯಗಳಲ್ಲಿ ಕೊರೊನಾ ವೈರಸ್‌ ಹೊಸ ‘ಡಬಲ್ ವೇರಿಯಂಟ್’ (ಎರಡು ರೂಪಾಂತರಿ) ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ . ಹಲವಾರು ರಾಜ್ಯಗಳಲ್ಲಿ ಇತ್ತೀಚಿನ ಕೊವಿಡ್‌-19 ಪ್ರಕರಣಗಳಲ್ಲಿನ ಹೆಚ್ಚಳ ವಿವರಿಸಲು ಸಾಕಷ್ಟು ಸಂಖ್ಯೆಯಲ್ಲಿ ಈ ರೂಪಾಂತರಗಳು ಪತ್ತೆಯಾಗಿಲ್ಲ. ರೂಪಾಂತರಗಳು ಸಂಭವಿಸುವುದು ವೈರಸ್‌ಗಳಲ್ಲಿ ಸ್ವಾಭಾವಿಕವಾಗಿದೆ ಮತ್ತು ತಜ್ಞರ … Continued

ಭಾರತದ 18 ರಾಜ್ಯಗಳಲ್ಲಿ ಕೋವಿಡ್ -19ರ ಹೊಸ ರೂಪಾಂತರಿ ವೈರಸ್‌ ಪತ್ತೆ: ಆರೋಗ್ಯ ಸಚಿವಾಲಯ

ಕೊರೊನಾ ವೈರಸ್ಸಿನ ಡಬಲ್ ರೂಪಾಂತರ”ವನ್ನು ದೇಶದ 18 ರಾಜ್ಯಗಳಲ್ಲಿ ಪತ್ತೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಐಎನ್‌ಎಸ್‌ಎಸಿಒಜಿ (INSACOG ) ತನ್ನ ಕೆಲಸ ಪ್ರಾರಂಭಿಸಿದಾಗಿನಿಂದ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಹಂಚಿಕೊಂಡ ಒಟ್ಟು 10 787 ಕೊರೊನಾ ಪಾಸಿಟಿವ್‌ ಮಾದರಿಗಳಲ್ಲಿ 771 ರೂಪಾಂತರಿ ವೈರಸ್‌ ಪತ್ತೆಯಾಗಿವೆ. ಇವುಗಳಲ್ಲಿ ಬ್ರಿಟನ್‌ (ಬಿ .1.1.7) ವಂಶಾವಳಿಯ … Continued