ಜಾರ್ಜಿಯಾದಲ್ಲಿ ಭೀಕರ ದುರಂತ; ವಿಷಾನಿಲ ಸೋರಿಕೆಯಿಂದ 12 ಭಾರತೀಯರ ಸಾವು
ಜಾರ್ಜಿಯಾ(Georgia) ದೇಶದ ಗುಡೌರಿಯಲ್ಲಿರುವ ಭಾರತೀಯ ಹೋಟೆಲ್ ಒಂದರಲ್ಲಿ ವಿಷಾನಿಲ ಸೋರಿಕೆಯಾಗಿ 12 ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಹೋಟೆಲ್‌ನ 2ನೇ ಮಹಡಿಯಲ್ಲಿರುವ ಕೋಣೆಗಳಲ್ಲಿ 12 ಮಂದಿಯ ಮೃತದೇಹ ಪತ್ತೆಯಾಗಿದೆ. ಕಾರ್ಬನ್ ಮೊನೋಕ್ಸೈಡ್ ಅನಿಲದಿಂದಾಗಿ ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಮೃತದೇಹಗಳ ಪರಿಶೀಲನೆ ನಡೆಸಲಾಗಿದ್ದು, ಮೇಲ್ನೋಟಕ್ಕೆ ಯಾವುದೇ ಗಾಯಗಳು ಅಥವಾ ಹಿಂಸಾಚಾರದ ಚಿಹ್ನೆಗಳು ಕಂಡುಬಂದಿಲ್ಲ … Continued