ಅಮೆರಿಕ | ಪತ್ನಿ, 3 ಸಂಬಂಧಿಕರನ್ನು ಗುಂಡಿಟ್ಟು ಕೊಂದ ಭಾರತೀಯ ಮೂಲದ ವ್ಯಕ್ತಿ ; ಕಪಾಟಿನಲ್ಲಿ ಅಡಗಿ ಪಾರಾದ ಮಕ್ಕಳು

ವಾಷಿಂಗ್ಟನ್/ಅಟ್ಲಾಂಟಾ: ಅಮೆರಿಕದ ಜಾರ್ಜಿಯಾ ರಾಜ್ಯದ ಲಾರೆನ್ಸ್‌ವಿಲ್ಲೆ ನಗರದಲ್ಲಿ ನಡೆದ ಭೀಕರ ಗುಂಡಿನ ದಾಳಿಗೆ ಭಾರತೀಯ ಮೂಲದ ಮಹಿಳೆ ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹತ್ಯಾಕಾಂಡ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ ಕಾಲಮಾನ ಶುಕ್ರವಾರ ಮುಂಜಾನೆ ಸುಮಾರು 2:30ರ ಸುಮಾರಿಗೆ ಘಟನೆ ನಡೆದಿದೆ. ಅಟ್ಲಾಂಟಾ ಸಮೀಪದ ಲಾರೆನ್ಸ್‌ವಿಲ್ಲೆ ನಗರದ ಮನೆಯೊಂದರಲ್ಲಿ ಗುಂಡು … Continued

ವೀಡಿಯೊ…| ಹುಂಡೈ ಘಟಕದ ಮೇಲೆ ಅಮೆರಿಕದ ಭದ್ರತಾ ಸಂಸ್ಥೆ ಸಿಬ್ಬಂದಿ ದಾಳಿ; ಅನೇಕ ವಲಸೆ ಕೊರಿಯನ್ನರಿಗೆ ಕೈಕೋಳ

ಅಮೆರಿಕದ ಜಾರ್ಜಿಯಾದಲ್ಲಿ ನಿರ್ಮಾಣವಾಗುತ್ತಿರುವ ಹುಂಡೈ-ಎಲ್‌ಜಿ ಸ್ಥಾವರದ ಮೇಲೆ ನಡೆದ ದಾಳಿಯಲ್ಲಿ ಬಂಧಿಸಲ್ಪಟ್ಟ 475 ಜನರಲ್ಲಿ ಹೆಚ್ಚಿನವರು ದಕ್ಷಿಣ ಕೊರಿಯನ್ನರು ಎಂದು ಶಂಕಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ವಿರೋಧಿ ಅಭಿಯಾನದ ಭಾಗವಾಗಿ ಇದುವರೆಗೆ ನಡೆಸಲಾದ ಅತಿದೊಡ್ಡ ಏಕ ಘಟಕದ ಕಾರ್ಯಾಚರಣೆ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಮದು ಮಾಡಿಕೊಂಡ ಸರಕುಗಳ ಮೇಲೆ ಸುಂಕ ವಿಧಿಸುವುದರ … Continued

ಜಾರ್ಜಿಯಾದಲ್ಲಿ ಭೀಕರ ದುರಂತ; ವಿಷಾನಿಲ ಸೋರಿಕೆಯಿಂದ 12 ಭಾರತೀಯರ ಸಾವು

ಜಾರ್ಜಿಯಾ(Georgia) ದೇಶದ ಗುಡೌರಿಯಲ್ಲಿರುವ ಭಾರತೀಯ ಹೋಟೆಲ್‌ ಒಂದರಲ್ಲಿ ವಿಷಾನಿಲ ಸೋರಿಕೆಯಾಗಿ 12 ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಹೋಟೆಲ್‌ನ 2ನೇ ಮಹಡಿಯಲ್ಲಿರುವ ಕೋಣೆಗಳಲ್ಲಿ 12 ಮಂದಿಯ ಮೃತದೇಹ ಪತ್ತೆಯಾಗಿದೆ. ಕಾರ್ಬನ್ ಮೊನೋಕ್ಸೈಡ್ ಅನಿಲದಿಂದಾಗಿ ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಮೃತದೇಹಗಳ ಪರಿಶೀಲನೆ ನಡೆಸಲಾಗಿದ್ದು, ಮೇಲ್ನೋಟಕ್ಕೆ ಯಾವುದೇ ಗಾಯಗಳು ಅಥವಾ ಹಿಂಸಾಚಾರದ ಚಿಹ್ನೆಗಳು ಕಂಡುಬಂದಿಲ್ಲ … Continued