ಬಿಹಾರದಲ್ಲಿ ರಾಜಕೀಯ ಬೆಳವಣಿಗೆ :ಸಿಎಂ ಸ್ಥಾನಕ್ಕೆ ನಿತೀಶಕುಮಾರ ರಾಜೀನಾಮೆ, ಇಂದು ಸಂಜೆ ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ..!

ಪಾಟ್ನಾ : ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶಕುಮಾರ ಭಾನುವಾರ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ ಎರಡ್ಮೂರು ದಿನಗಳಿಂದ ಬಿಹಾರ ರಾಜಕಾರಣದಲ್ಲಿನ ಎಲ್ಲಾ ವದಂತಿಗಳಿಗೆ ತೆರೆಬಿದ್ದಿದೆ. ಅವರು ಇಂದು, ಭಾನುವಾರ ಸಂಜೆ ಅಥವಾ ನಾಳೆ ಎನ್ ಡಿಎ ಜೊತೆಗೆ ಹೊಸ ಸರ್ಕಾರ ರಚಿಸುವ ಸಾಧ್ಯತೆಯಿದೆ. ಇಂದು, ಭಾನುವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಜೆಡಿಯು ಶಾಸಕರ ಸಭೆ … Continued

ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಈಗ ಒಡೆದ ಮನೆ..? ಎಎಪಿ, ಟಿಎಂಸಿ ನಂತ್ರ ಈಗ ಪ್ಲಗ್‌ ಎಳೆಯಲು ನಿತೀಶಕುಮಾರ ತಯಾರಿ..?!

ನವದೆಹಲಿ /ಪಾಟ್ನಾ: ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿಮಾಡಿಕೊಳ್ಳಲು ಒಪ್ಪದೆ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ನಂತರ ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬಣದಲ್ಲಿ ಚುನಾವಣೆ ಮೊದಲೇ ಅಲುಗಾಟ ಶುರುವಾಗಿದೆ. ಇಂದು, ಗುರುವಾರ, ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ಮಾರ್ಚ್ 30 ರಂದು ಭಾರತ ಜೋಡಿ … Continued

ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ಲಲ್ಲನ್ ಸಿಂಗ್ ರಾಜೀನಾಮೆ : ನಿತೀಶಕುಮಾರ ನೂತನ ಸಾರಥಿ

ನವದೆಹಲಿ: ಶುಕ್ರವಾರ ಮಧ್ಯಾಹ್ನ ದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿತೀಶಕುಮಾರ ಅವರನ್ನು ಬಿಹಾರದ ಆಡಳಿತಾರೂಢ ಜನತಾ ದಳ (ಯುನೈಟೆಡ್) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನದಿಂದ ಲಲ್ಲನ್ ಸಿಂಗ್ ಕೆಳಗಿಳಿದ ಕೆಲವೇ ನಿಮಿಷಗಳಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರನ್ನು ಮರು-ನೇಮಕಗೊಳಿಸಲಾಯಿತು. ಹಾಗೂ ವಾರಗಳ ಊಹಾಪೋಹಗಳಿಗೆ ತೆರೆಬಿತ್ತು. ಸಭೆಯ ನಂತರ ತಕ್ಷಣವೇ ಸುದ್ದಿಗಾರರೊಂದಿಗೆ … Continued