ಕಲಬುರಗಿಯಲ್ಲಿ ತೊಗರಿ ಪಾರ್ಕ್‌ ಸ್ಥಾಪನೆ ಖಚಿತ

ಯಾದಗಿರಿ : ಇಡೀ ರಾಜ್ಯದಲ್ಲಿಯೇ ಕಲ್ಯಾಣ ಕರ್ನಾಟಕದಲ್ಲಿ ಅತೀ ಹೆಚ್ಚು ರೈತರು ತೊಗರಿ ಬೆಳೆ ಬೆಳೆಯುತ್ತಾರೆ. ಅವರಿಗೆ ಸರ್ಕಾರದಿಂದ ಸೂಕ್ತ ನ್ಯಾಯ ಒದಗಿಸುವ ಮೂಲಕ ಅವರ ಆರ್ಥಿಕ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ ನಾಲವಾರ ಹೇಳಿದರು. ಮಸ್ಕಿ ವಿಧಾನಸಭಾ ಉಪಚುನಾವಣೆ ಪ್ರಚಾರಕ್ಕೆ ತೆರಳುವ ಸಂದರ್ಭದಲ್ಲಿ … Continued

ಬಿಗಿ ಭದ್ರತೆ ಮಧ್ಯೆಯೂ ಶ್ರೀ ಶರಣಬಸವೇಶ್ವರರ ಜಾತ್ರೆಯಲ್ಲಿ ಭಕ್ತರು ಭಾಗಿ

ಕಲಬುರಗಿ: ಹೋಳಿ ಪಂಚಮಿಯ ದಿನದಂದು ನಡೆಯುವ 18ನೇ ಶತಮಾನದ ಸಂತ, ಮಹಾದಾಸೋಹಿ  ಶ್ರೀ ಶರಣಬಸವೇಶ್ವರರ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆಯುವ ಶ್ರೀ ಶರಣಬಸವೇಶ್ವರರ 199ನೇ ಜಾತ್ರೆಯ ಧಾರ್ಮಿಕ ಆಚರಣೆ ಹಾಗೂ ರಥೋತ್ಸವ ಪೋಲಿಸರ ಭದ್ರತಾ ವ್ಯವಸ್ಥೆ ಮಧ್ಯೆ ಸರಳವಾಗಿ ನಡೆಯಿತು. ಬೆಳಿಗ್ಗೆಯಿಂದಲೇ ಶರಣಬಸವೇಶ್ವರ ದೇವಾಸ್ಥಾನದ ಎಲ್ಲ ಪ್ರವೇಶದ್ವಾರಕ್ಕೆ ಬ್ಯಾರಿಕೇಡ್‌ ಹಾಕುವ ಮೂಲಕ ಬಂದ್‌ ಮಾಡಲಾಗಿತ್ತು. ಆಯಾ ದ್ವಾರ  … Continued

ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಉಚ್ಛಾಯಿ ರಥೋತ್ಸವ

ಕಲಬುರಗಿ : ಕಲ್ಯಾಣ ಕರ್ನಾಟಕದ ಐತಿಹಾಸಿಕ ಕಲಬುರಗಿ ಶ್ರೀ ಶರಣಬಸವೇಶ್ವರರ 199ನೇ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು (ಗುರುವಾರ) ಏಪ್ರಿಲ್ 1ರಂದು ಸಂಜೆ ಉಚ್ಛಾಯಿ ರಥೋತ್ಸವ ನಡೆಯುವ ಮೂಲಕ ಚಾಲನೆ ದೊರಕಲಿದೆ. ಕಳೆದ ವರ್ಷ ಕೋವಿಡ ಹಿನ್ನೆಲೆಯಲ್ಲಿ ಜಾತ್ರೆ ರದ್ದು ಮಾಡಲಾಗಿತ್ತು. ಈ ತಿಂಗಳಲ್ಲಿ ಮತ್ತೆ ಕೊರೊನಾ ಅರ್ಭಟ ಹೆಚ್ಚಾಗಿದ್ದರಿಂದ ಮತ್ತೆ ಜಿಲ್ಲಾಡಳಿತ ರದ್ದು ಪಡಿಸಿದೆ. … Continued

ಕಲಬುರಗಿ-ಮಂಬೈ ವಿಮಾನ ಹಾರಾಟ ಆರಂಭ

ಕಲಬುರಗಿ:ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಕಲ್ಯಾಣ ‌ಕರ್ನಾಟಕದ ಪ್ರಮುಖ ‌ನಗರ ಕಲಬುರಗಿ ‌ಮಧ್ಯೆ ಅಲಯನ್ಸ್ ಏರ್ ಸಂಸ್ಥೆಯ ನೇರ ವಿಮಾನ ‌ಸಂಚಾರ ಗುರುವಾರದಿಂದ ಆರಂಭವಾಯಿತು. ಮುಂಬೈನಿಂದ ಹೊರಟ ಮೊದಲ ವಿಮಾನ ಬೆಳಿಗ್ಗೆ 9.07ಕ್ಕೆ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಎಂಟು ಜನ ಪ್ರಯಾಣಿಕರು ಬಂದರು. 9.40ಕ್ಕೆ ಇಲ್ಲಿಂದ ಹೊರಟ ವಿಮಾನದಲ್ಲಿ 22 ಪ್ರಯಾಣಿಕರು ತೆರಳಿದರು. ಮಹಾರಾಷ್ಟ್ರದಲ್ಲಿ … Continued

ಕಲಬುರಗಿ-ಮುಂಬೈ ವಿಮಾನ ಯಾನ ಮಾರ್ಚ್ 25ರಿಂದ ಆರಂಭ

ಕಲಬುರಗಿ: ಏರ್ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್ ಏರ್ ಇದೇ ಮಾರ್ಚ್ 25ರಿಂದ ಕಲಬುರಗಿ ಹಾಗೂ ಮುಂಬೈ ಮಧ್ಯೆ ವಾರದ ಎಲ್ಲ ದಿನವೂ ನೇರ ವಿಮಾನ ಹಾರಾಟ ಆರಂಭಿಸಲಿದೆ. ಕಲ್ಯಾಣ ಕರ್ನಾಟಕವನ್ನು ದೇಶದ ವಾಣಿಜ್ಯ ರಾಜಧಾನಿ ಮುಂಬೈಯೊಂದಿಗೆ ಸಂಪರ್ಕಿಸಬೇಕೆನ್ನುವ ಈ ಭಾಗದ ಉದ್ಯಮಿಗಳ ಬೇಡಿಕೆ ಈಡೇರಿದಂತಾಗಿದೆ. ಮಾ.25ರಿಂದ ನಿತ್ಯ ಬೆಳಿಗ್ಗೆ 7.20ಕ್ಕೆ ಮುಂಬೈನಿಂದ ಹೊರಡುವ 70 … Continued