ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: 8 ಆರೋಪಿಗಳ ಜಾಮೀನು ಅರ್ಜಿ ವಜಾ

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಎಂಟು ಜನ ಆರೋಪಿಗಳ ಜಾಮೀನು ಅರ್ಜಿಯನ್ನು ಕಲಬುರಗಿ ಜೆ.ಎಮ್.ಸಿ ಕೋರ್ಟ್ ವಜಾಗೊಳಿಸಿದೆ. ಪೊಲೀಸ್ ಸಬ್​ ಇನ್​ಸ್ಪೆಕ್ಟರ್ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಬಿಜೆಪಿ ಮುಖಂಡರಾದ ದಿವ್ಯಾ ಹಾಗರಗಿಯ ಪತಿ ರಾಜೇಶ್​ ಹಾಗರಗಿ, ವೀರೇಶ್, ಅರುಣ, ಪ್ರವೀಣ, ಚೇತನ, … Continued

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ; ಶಾಸಕರ ಗನ್ ಮ್ಯಾನ್ ಸೇರಿ ಇಬ್ಬರ ಬಂಧನ

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಜಾಡು ಹಿಡಿದು ಸಿಐಡಿ ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಗನ್‌ಮ್ಯಾನ್ ಸೇರಿ ಇಬ್ಬರು ಪೊಲೀಸ್ ಕಾನ್​ಸ್ಟೇಬಲ್​ಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ‌. ಕಲಬುರಗಿ ಸಿಟಿ ಆರ್ಮ್ಸ್ ರಿಸರ್ವ್ (ಸಿಎಆರ್) ಪೊಲೀಸ್ ಪೇದೆ ರುದ್ರಗೌಡ ಮತ್ತು ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಗನ್‌ ಮ್ಯಾನ್ ಅಯ್ಯಣ್ಣ ದೇಸಾಯಿ … Continued

ಕಾರ್-ಬೈಕ್‌ ಡಿಕ್ಕಿ: ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋದ ಮದುಮಗ ಸೇರಿ ಇಬ್ಬರು ಸಾವು

ಕಲಬುರಗಿ : ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ಬೈಕಿನಲ್ಲಿ ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮದುಮಗ ಸೇರಿ ಇಬ್ಬರು ಮೃತಪಟ್ಟ ಘಟನೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಬಳಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಮೃತಪಟ್ಟವರನ್ನು ಯಡ್ರಾಮಿ ತಾಲೂಕಿನ ಕೋಣಸಿರಸಗಿ ಗ್ರಾಮದ ದೇವೇಂದ್ರಪ್ಪ (30) ಹಾಗೂ ವಸ್ತಾರಿ ಗ್ರಾಮದ ಗುರುರಾಜ ( 30) ಎಂದು ಗುರುತಿಸಲಾಗಿದೆ. ದೇವೇಂದ್ರಪ್ಪ ಅವರ … Continued

ರೈತನಿಗೆ ಪರಿಹಾರ ನೀಡಲು ವಿಳಂಬ: ಜಿಲ್ಲಾಧಿಕಾರಿ ಕಾರನ್ನೇ ಜಪ್ತಿ ಮಾಡಲು ಕೋರ್ಟ್‌ ಆದೇಶ

ಕಲಬುರಗಿ: ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ರೈತ ಕಲ್ಲಪ್ಪ ಮೇತ್ರೆ ಅವರಿಗೆ ಪರಿಹಾರ ನೀಡುವಲ್ಲಿ ವಿಳಂಬವಾದ ಕಾರಣಕ್ಕೆ ಜಿಲ್ಲಾಧಿಕಾರಿ ಯಶವಂತ್ ಗುರುಕರ್‌ ಅವರ ಸರ್ಕಾರಿ ಕಾರು ಜಪ್ತಿ ಮಾಡುವಂತೆ ಕಲಬುರಗಿಯ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶಿಸಿದೆ. ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ರೈತ  2008ರಲ್ಲಿ ರೈತ ಕಲ್ಲಪ್ಪ ಮೇತ್ರೆಯ 33 ಗುಂಟೆ ಜಮೀನು … Continued

ಕಲಬುರಗಿ: ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರು ಲಿಂಗೈಕ್ಯ

ಕಲಬುರಗಿ: ಕಮಲಾಪುರ ತಾಲೂಕಿನ ಮಹಾಗಾಂವದ ಪ್ರಸಿದ್ದ ಕಳ್ಳಿಮಠದ ಪೀಠಾಧಿಪತಿ ಗುರುಲಿಂಗ ಶಿವಾಚಾರ್ಯರು (58) ಸಂಕ್ರಾಂತಿ ಹಬ್ಬದ ಅಂಗವಾಗಿ ನದಿಯಲ್ಲಿ ಈಜಾಡಿ ಸ್ನಾನ ಮಾಡಿ ನದಿಯಿಂದ ಹೊರಬಂದ ನಂತರ ಹೃದಯಾಘಾತಕ್ಕೆ ಒಳಗಾಗಿ ಲಿಂಗೈಕ್ಯರಾಗಿದ್ದಾರೆ. ಸಂಕ್ರಾಂತಿ ಹಬ್ಬದಂಗವಾಗಿ ಶಹಾಬಾದ ತಾಲೂಕಿನ ಸುಕ್ಷೇತ್ರ ಹೊನಗುಂಟಾ ಬಳಿಯ ಭೀಮಾನದಿಯಲ್ಲಿ ಸ್ವಲ್ಪ ಈಜಾಡಿ ಸ್ನಾನ ಮಾಡಲು ಹೋಗಿದ್ದರು. ಸ್ವಲ್ಪ ಹೊತ್ತು ಈಜಾಡಿ ಬಂದ … Continued

ಲಾಕ್ ಡೌನ್, ಸೆಮಿ ಲಾಕ್‌ಡೌನ್; ತಜ್ಞರ ಸಭೆ ಬಳಿಕ ಅಂತಿಮ ನಿರ್ಧಾರ, ಸಿಎಂ ಬೊಮ್ಮಾಯಿ

ಕಲಬುರಗಿ: ಕರ್ನಾಟಕದಲ್ಲಿ ಒಂದು ವಾರದಿಂದ ಕೋವಿಡ್ ಮತ್ತು ಓಮಿಕ್ರಾನ್ ಹೆಚ್ಚಾಗುತ್ತಿದೆ. ಹೀಗಾಗಿ ಇದನ್ನು ತಡೆಯಲು ಸುದಿರ್ಘ ಕ್ರಮ ಕೈಗೊಳ್ಳಬೇಕಾಗಿದೆ. ಔಷದಿ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ತಜ್ಞರನ್ನು ಕೇಳಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಗೆ ಮಾತನಾಡಿದ ಅವರು, ಇಂದು ಸಂಜೆ … Continued

ಮಾಶಾಳದಲ್ಲಿ ಹಿರೇಮಠದ ಮೇಲೆ ಕಲ್ಲು ತೂರಾಟ: ಗಾಜುಗಳು ಪುಡಿ

ಕಲಬುರ್ಗಿ: ಅಫಜಲಪುರ ತಾಲೂಕಿನ ಮಾಶಾಳ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. ಗುರುವಾರ ರಾತ್ರಿ ವೇಳೆ ಮಠದಲ್ಲಿ ಶ್ರೀಗಳು ಇದ್ದ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲದೇ ಕೇದಾರ ಶ್ರೀಗಳ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಕಿಡಿಗೇಡಿಗಳು ಮಠದ ಕಿಟಕಿಗಳಿಗೆ ಕಲ್ಲು ತೂರಿ ಗ್ಲಾಜನ್ನು ಪುಡಿ ಪುಡಿ … Continued

ಕೆಪಿಎಸ್‍ಸಿ ಪರೀಕ್ಷೆ : ರೈಲು ವಿಳಂಬದಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದವರಿಗೆ ಡಿ.29ಕ್ಕೆ ಮರು ಪರೀಕ್ಷೆ

ಬೆಂಗಳೂರು: ಡಿ.14 ರಂದು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಅಭಿಯಂತಕರು -1 ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಲಬುರಗಿ ಪರೀಕ್ಷಾ ಕೇಂದ್ರಗಳಲ್ಲಿ ಬೆಳಗಿನ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೇ ಮಧ್ಯಾಹ್ನದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರಿಂಗ್ ಹುದ್ದೆಯ ಸಾಮಾನ್ಯ ಪತ್ರಿಕೆಯ ಮರು ಪರೀಕ್ಷೆ ಡಿಸೆಂಬರ್‌ 29ರಂದು ನಡೆಯಲಿದ್ದು, ಬೆಂಗಳೂರಿನಲ್ಲಿ ನಡೆಸಲಾಗುತ್ತದೆ … Continued

ಪರಿಷತ್‌ ಚುನಾವಣೆ: ಬೆಳಗಾವಿಯಲ್ಲಿ ಕಾಂಗ್ರೆಸ್‌-ಪಕ್ಷೇತರ, ಕಲಬುರ್ಗಿ-ಬಳ್ಳಾರಿಯಲ್ಲಿ ಬಿಜೆಪಿ, ರಾಯಚೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ

ಬೆಳಗಾವಿ/ಕಲಬುರಗಿ/ಬಳ್ಳಾರಿ/ರಾಯಚೂರು: ಬೆಳಗಾವಿ ದ್ವಿಸದಸ್ಯ ಪರಿಷತ್ ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನೊಂದು ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಅವರು ಆಯ್ಕೆಯಾಗಿದ್ದಾರೆ. ಮೊದಲ ಪ್ರಾಶಸ್ತ್ಯದಲ್ಲಿ ಕಾಂಗ್ರೆಸಗೆ 3715 ಮತಗಳು ಬಂದರೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ 2526 ಮತಗಳು ಬಂದಿವೆ. ಬಿಜೆಪಿಯ ಮಹಾಂತೇಶ ಕವಟಗಿಮಠ ಗೆ 2454 … Continued

ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ, ಒಂದು ಮಗು ಪಾರು

ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಮಹಿಳೆ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯಲ್ಲಿ ಒಂದು ಮಗುವನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ತಾಯಿ ಲಕ್ಷ್ಮೀ ಏಳಕೆ (28), ಮಕ್ಕಳಾದ ಗೌರಮ್ಮ (6), ಸಾವಿತ್ರಿ (1) ಮೃತಪಟ್ಟಿದ್ದಾರೆ. ಬಾವಿಯಲ್ಲಿ ಮುಳುಗುತ್ತಿದ್ದ ಈಶ್ವರಿ (4)ಯನ್ನು ಸ್ಥಳೀಯರು ರಕ್ಷಿಸಿದ್ದಾರೆ‌. ಮೂವರೂ ಹೆಣ್ಣು ಮಕ್ಕಳನ್ನು … Continued