ಮಾ.೨೦ರಿಂದ ರಾಜ್ಯದಲ್ಲಿ ರೈತರ ಸಮಾವೇಶ

ದೆಹಲಿಯಲ್ಲಿ ರೈತ ಹೋರಾಟ ಬೆಂಬಲಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಾರ್ಚ್‌ ೨೦ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತ ಸಮಾವೇಶ ಆಯೋಜಿಸಲಾಗುವುದು ಎಂದು ರೈತ ಸಂಘದ ವರಿಷ್ಠೆ ಚುಕ್ಕಿ ನಂಜುಂಡಸ್ವಾಮಿ ಹೇಳಿದ್ದಾರೆ. ಮಾ.೨೦ರಂದು ಶಿವಮೊಗ್ಗ, ಮಾ.೨೧ರಂದು ಹಾವೇರಿ, ಮಾ.೨೨ರಂದು ಬೆಳಗಾವಿಯಲ್ಲಿ ರೈತ ಸಮಾವೇಶ ನಡೆಯಲಿದೆ. ಸಮಾವೇಶಗಳಲ್ಲಿ ಭಾರತೀಯ ಕಿಸಾನ ಯೂನಿಯನ್‌ ಮುಖಂಡ … Continued

ಫೆ.22ರಿಂದ ಶಾಲೆಗಳಲ್ಲಿ ಪೂರ್ಣ ಪ್ರಮಾಣದ ತಗತಿ ಶುರು ಆದರೆ ಕೆಲಭಾಗದಲ್ಲಿ 6-7ನೇ ತರಗತಿ ಆರಂಭವಿಲ್ಲ

  ಬೆಂಗಳೂರು: ಕೋವಿಡ್​ ಮಾರ್ಗಸೂಚಿಯನ್ವಯ 9 ರಿಂದ ದ್ವಿತೀಯ ಪಿಯುಸಿ ವರೆಗೆ ತರಗತಿಗಳನ್ನು ಆರಂಭಿಸಿರುವ ರಾಜ್ಯ ಸರ್ಕಾರ, ಇದೀಗ ಉಳಿದ ತರಗತಿಗಳ ಆರಂಭಕ್ಕೆ ಅನಮತಿ ನೀಡಿದೆ. ಫೆ.22ರಿಂದ 6ರಿಂದ 8 ನೇ ತರಗತಿ ವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿ ಶುರುವಾಗಲಿದೆ. 1ರಿಂದ5 ನೇ ತರಗತಿ ವರೆಗೆ ವಿದ್ಯಾಗಮ ಪ್ರಾರಂಭವಾಗಲಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.​ಸುರೇಶ್​ … Continued

ಗಾಜಿಪುರ ರೈತ ಹೋರಾಟಕ್ಕೆ ಕರ್ನಾಟಕದ ೫೦ ರೈತರು

ಗಾಜಿಪುರ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಭಾರತೀಯ ಕಿಸಾನ್‌ ಯೂನಿಯನ್‌ ನಡೆಸುತ್ತಿರುವ ಚಳವಳಿಯಲ್ಲಿ ಪಾಲ್ಗೊಳ್ಳಲು ಕರ್ನಾಟಕದ ೫೦ ಜನ ರೈತರ ಗುಂಪು ಸೋಮವಾರ ಆಗಮಿಸಿತು. ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಹೋರಾಟಗಾರರ ಡೇರೆಗಳನ್ನು ಕರ್ನಾಟಕದ ಕೃಷಿಕರು ಸೇರಿಕೊಂಡರು. ನಾವು ಬೆಂಗಳೂರು ಹಾಗೂ ಮೈಸೂರಿನಲ್ಲಿ ರೈತ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಅಲ್ಲದೇ ಉತ್ತರ ಪ್ರದೇಶದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಭಾಗವಹಿಸಿದ್ದೆವೆ. … Continued

ನಿಮ್ಹಾನ್ಸ್‌ನಲ್ಲಿ ಮರೆವಿನ ಕಾಯಿಲೆ ಚಿಕಿತ್ಸಾ ಕೇಂದ್ರ

ಬೆಂಗಳೂರು: ಇಲ್ಲಿನ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮೆಂಟಲ್‌ ಹೆಲ್ತ್‌ ಆಂಡ್‌ ನ್ಯೂರೋ ಸಾಯನ್ಸ್‌ (ನಿಮ್ಹಾನ್ಸ್)‌ ನಲ್ಲಿ ಮೊದಲ ಮರೆವಿನ ಕಾಯಿಲೆ ಚಿಕಿತ್ಸಾ ಕೇಂದ್ರ ಆರಂಭವಾಗಲಿದೆ. ಇಲ್ಲಿನ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರದ ಕ್ಯಾಂಪಸ್‌ನಲ್ಲಿ ನೂತನ ಕೇಂದ್ರ ಆರಂಭಗೊಳ್ಳುವುದು. ಕೇಂದ್ರ ನಿರ್ಮಾಣಗೊಳ್ಳಲು ಕನಿಷ್ಟ ೧೮ ತಿಂಗಳುಗಳ ಅವಶ್ಯಕತೆಯಿದೆ ಎಂದು ಮನೋವೈದ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಪಿ.ಟಿ.ಶಿವಕುಮಾರ ತಿಳಿಸಿದ್ದಾರೆ. ವಸತಿ … Continued

ರಾಜ್ಯದಲ್ಲಿ ೪೭೪ ಜನರಿಗೆ ಕೊರೋನಾ, ೪೭೦ ಜನ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಕಳೆದ ೨೪ ತಾಸಿನಲ್ಲಿ ಕೊರೊನಾದಿಂದ ಇಬ್ಬರು ಸೋಂಕಿತರು ಮೃತಪಟ್ಟಿದ್ದು, 474 ಜನರಿಗೆ ಸೋಂಕು ದೃಢಪಟ್ಟಿದೆ ಬೆಂಗಳೂರು ನಗರದಲ್ಲಿ ಕೊರೊನಾದಿಂದ ಇಬ್ಬರು ಮೃತಪಟ್ಟಿದ್ದಾರೆ. 470 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 5917 ಸಕ್ರಿಯ ಪ್ರಕರಣಗಳಿವೆ ,146 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಪಂ ವ್ಯವಸ್ಥೆ ರದ್ದತಿಗೆ ರಾಜ್ಯ ಸರ್ಕಾರ ಚಿಂತನೆ: ಈಶ್ವರಪ್ಪ

ಬೆಂಗಳೂರು: ರಾಜ್ಯದಲ್ಲಿ ೩ ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಬದಲಾಯಿಸಿ ೨ ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಸಂವಿಧಾನ ತಿದ್ದುಪಡಿಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್   ಖಾತೆ ಸಚಿವ ಕೆ. ಎಸ್. ಈಶ್ವರಪ್ಪ ವಿಧಾನಸಭೆಗೆ ತಿಳಿಸಿದರು. ಶೂನ್ಯ ವೇಳೆಯಲ್ಲಿ … Continued

ವಾರದಲ್ಲಿ ಕಾರ್ಯಾರಂಭ ಮಾಡಲು ವಿಸ್ಟ್ರಾನ್‌ ನಿರ್ಧಾರ

ಬೆಂಗಳೂರು: ಹಲವು ತಿಂಗಳುಗಳ ಹಿಂದೆ ದಾಳಿಗೊಳಗಾಗಿದ್ದ ತೈವಾನ್‌ ಕಂಪನಿ ವಿಸ್ಟ್ರಾನ್‌ ಇನ್ನೊಂದು ವಾರದಲ್ಲಿ ಕಾರ್ಯಾರಂಭ ಮಾಡಲು ನಿರ್ಧರಿಸಿದೆ. ಕಾರ್ಖಾನೆ ಆರಂಭಿಸಲು ವಿಸ್ಟ್ರಾನ್‌ ಸರಕಾರದಿಂದ ಅಗತ್ಯ ಅನುಮತಿ ಪಡೆದುಕೊಂಡಿದ್ದು, ಇನ್ನೊಂದು ವಾರದಲ್ಲಿ ಉತ್ಪಾದನೆ ಆರಂಭಿಸುವುದು. ಡಿಸೆಂಬರ್‌ ೧೨ರಂದು ಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಉಗ್ರ ರೂಪ ತಳೆದಿದ್ದರಿಂದ ಕೋಲಾರ ಜಿಲ್ಲೆ ನಾರಾಯಣಪುರದಲ್ಲಿರುವ ಕಾರ್ಖಾನೆಯಲ್ಲಿ ಸುಮಾರು ೫೨ ಕೋಟಿ ರೂ. … Continued

ಮಂಡ್ಯ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪ

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ 1,600 ಟನ್‌ಗಳಷ್ಟು ಲಿಥಿಯಂ ನಿಕ್ಷೇಪ ಇರುವುದು ಪ್ರಾಥಮಿಕ ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಕೇಂದ್ರ ಸರಕಾರ  ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಪರಮಾಣು ಇಂಧನ ಇಲಾಖೆಯ ಘಟಕ  ಅಟಾಮಿಕ್ ಮಿನರಲ್ಸ್ ಡೈರೆಕ್ಟರೇಟ್ ಫಾರ್ ಎಕ್ಸ್‌ಪ್ಲೋರೇಶನ್ ಅಂಡ್ ರಿಸರ್ಚ್ (ಎಎಮ್‌ಡಿ) ಮಾರ್ಲಗಲ್ – ಅಲಪಟ್ಟಣ ಪ್ರದೇಶದ ಪೆಗ್‌ಮ್ಯಾಟೈಟ್‌ಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಹೊಸ ತಂತ್ರಜ್ಞಾನಗಳಲ್ಲಿ … Continued

ಇಂದಿನಿಂದ ರಾಷ್ಟ್ರಪತಿಗಳ  ೪ ದಿನಗಳ ಕರ್ನಾಟಕ ಪ್ರವಾಸ

ಬೆಂಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ನಾಲ್ಕು ದಿನಗಳ ಕಾಲ ಅನೇಕ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ವಿಶೇಷ ವಿಮಾನದ ಮೂಲಕ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸುವ ರಾಷ್ಟ್ರಪತಿ ಅವರು ಶುಕ್ರವಾರ (ಫೆ.೫) ಮಧ್ಯಾಹ್ನ ಏರೋ ಇಂಡಿಯಾ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ.6ರಂದು ತಲಕಾವೇರಿಗೆ ಭೇಟಿ ನೀಡಲಿದ್ದು, ಅಂದು ಮಧ್ಯಾಹ್ನ ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ … Continued

ಕೊರೋನಾ: ಕರ್ನಾಟಕದಲ್ಲಿ ೫೨೨ ಪಾಸಿಟಿವ್ ಪ್ರಕರಣ‌, ನಾಲ್ವರ ಸಾವು

ಬೆಂಗಳೂರು: ಕರ್ನಾಟಕದಲ್ಲಿ  522 ಹೊಸ ಕೋವಿಡ್ -19 ಪ್ರಕರಣಗಳು ಮತ್ತು ನಾಲ್ಕು ಸಂಬಂಧಿತ ಸಾವುಗಳಾಗಿವೆ ಎಂದು ವರದಿಯಾಗಿದೆ. ಚೇತರಿಕೆಯ ನಂತರ 465 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, 6,029 ಸಕ್ರಿಯ ಪ್ರಕರಣಗಳಿವೆ. ಉಳಿದಿವೆ.ಒಟ್ಟಾರೆಯಾಗಿ  ಸೋಂಕಿತರ ಸಂಖ್ಯೆ   9,39,387  ತಲುಪಿದ್ದು,  12,217 ಮರಣಗಳು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಸಕ್ರಿಯ ಪ್ರಕರಣಗಳಲ್ಲಿ, 145 ರೋಗಿಗಳು ವಿವಿಧ ಆಸ್ಪತ್ರೆಗಳ ತೀವ್ರ … Continued