1 ಕೋಟಿ ರೂ. ಹಣ ಕೊಡು, ಇಲ್ಲದಿದ್ದರೆ….; ಕ್ರಿಕೆಟರ್‌ ಮೊಹಮ್ಮದ್ ಶಮಿಗೆ ಕೊಲೆ ಬೆದರಿಕೆ

ನವದೆಹಲಿ: ಭಾರತದ ವೇಗಿ ಮೊಹಮ್ಮದ್ ಶಮಿ ಅವರಿಗೆ ಭಾನುವಾರ ಇ ಮೇಲ್ ಮೂಲಕ ಕೊಲೆ ಬೆದರಿಕೆ ಬಂದಿದ್ದು, ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆದೇಶದ ಮೇರೆಗೆ ಸೋಮವಾರ ಎಫ್‌ಐಆರ್ ದಾಖಲಾಗಿದ್ದು, ಶಮಿ ಪರವಾಗಿ ಅವರ ಸಹೋದರ ಹಸೀಬ್ ಈ ದೂರು ದಾಖಲಿಸಿದ್ದಾರೆ ಮತ್ತು … Continued

ಚಾಂಪಿಯನ್ಸ್‌ ಟ್ರೋಫಿ | ರಂಜಾನ್ ಉಪವಾಸದ ವೇಳೆ ಸೆಮಿಫೈನಲ್ ಪಂದ್ಯದಲ್ಲಿ ಎನರ್ಜಿ ಡ್ರಿಂಕ್ ಕುಡಿದಿದ್ದಕ್ಕೆ ಕ್ರಿಕೆಟಿಗ ಶಮಿಯನ್ನು ಕ್ರಿಮಿನಲ್ ಎಂದ ಮುಸ್ಲಿಂ ಧರ್ಮಗುರು

ನವದೆಹಲಿ : ಮಂಗಳವಾರ ಆಸ್ಟ್ರೇಲಿಯಾ ವಿರುದ್ಧದ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಉಪವಾಸ ಮಾಡದೇ ಇದ್ದುದಕ್ಕಾಗಿ ಭಾರತದ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮೊಹಮ್ಮದ್ ಶಮಿ ಅವರನ್ನು ಮುಸ್ಲಿಂ ಧರ್ಮಗುರು ಟೀಕಿಸಿದ್ದಾರೆ. ಮುಸ್ಲಿಮರು ಆಚರಿಸುವ ಉಪವಾಸದ ಅವಧಿಯಲ್ಲಿ ನಡೆಯುತ್ತಿರುವ ಪವಿತ್ರ ತಿಂಗಳ ರಂಜಾನ್‌ನಲ್ಲಿ ಪಂದ್ಯ ನಡೆಯಿತು. ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಶಮಿಯನ್ನು “ಅಪರಾಧಿ” ಎಂದು … Continued

ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ರಕ್ಷಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತೀಯರ ಮನಗೆದ್ದಿದ್ದ ವೇಗಿ ಮೊಹಮ್ಮದ್ ಶಮಿ ನೈನಿತಾಲ್‌ನಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯನ್ನು ಕಾಪಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಶಮಿ ಶನಿವಾರ ತಡರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ವೀಡಿಯೊ ಹಂಚಿಕೊಂಡಿದ್ದಾರೆ. ತಾನು ಮತ್ತು ತನ್ನ ಜೊತೆಗಿದ್ದ ಕೆಲವರು ಜೊತೆಗೂಡಿ ಬೆಟ್ಟದಲ್ಲಿ ಕೆಳಗಿಳಿದು ಅಪಘಾತದಲ್ಲಿ ಬೆಟ್ಟದಿಂದ ಕೆಳಗೆ ಬಿದ್ದಿದ್ದ ಕಾರಿನ … Continued

ಕ್ರಿಕೆಟ್‌ ವಿಶ್ವಕಪ್ 2023 : ರನ್ ಗಳಿಕೆಯಲ್ಲಿ ವಿರಾಟ್ ಕೊಹ್ಲಿ ನಂ.1, ಮೊಹಮ್ಮದ್‌ ಶಮಿಗೆ ಅತಿ ಹೆಚ್ಚು ವಿಕೆಟ್

ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿರುವ ಭಾರತ ತಂಡದ ಪ್ರಶಸ್ತಿ ಕನಸು ಭಗ್ನಗೊಂಡಿದೆ. ಸತತ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿ ರೋಹಿತ್ ಶರ್ಮಾ ಬಳಗವು ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರು ವಿಕೆಟ್ ಅಂತರದಿಂದ ಗೆದ್ದು ಆರನೇ … Continued

ವಿಶ್ವಕಪ್‌ನಲ್ಲಿ 4ನೇ ಬಾರಿಗೆ 5 ವಿಕೆಟ್ ಉರುಳಿಸಿ ಹೊಸ ದಾಖಲೆ ನಿರ್ಮಿಸಿದ ಮೊಹಮ್ಮದ್ ಶಮಿ

ಬುಧವಾರ ನಡೆದ ಐಸಿಸಿ 50 ಓವರ್‌ಗಳ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಈ ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿಗೆ 5 ವಿಕೆಟ್ ಕಬಳಿಸಿದರು. ವಿಶ್ವಕಪ್‌ನಲ್ಲಿ ತನ್ನ 4ನೇ ಸಲ 5-ವಿಕೆಟ್‌ಗಳ ಸಾಧನೆಯೊಂದಿಗೆ, ಶಮಿ ಏಕದಿನದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಮುರಿದರು. … Continued