ಒಂದೇ ದಿನದಲ್ಲಿ 500ಕ್ಕೂ ಹೆಚ್ಚು ಅಧಿಕ ಅರ್ಜಿಗಳ ವಿಚಾರಣೆ ; ನ್ಯಾಯಮೂರ್ತಿ ನಾಗಪ್ರಸನ್ನ ಮತ್ತೊಂದು ಮೈಲಿಗಲ್ಲು

ಬೆಂಗಳೂರು : ತುರ್ತು ವಿಚಾರಣೆಗೆ ಕೋರಿದ್ದ 250ಕ್ಕೂ ಹೆಚ್ಚು ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸುವ ಮೂಲಕ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಇದೇ ಮೊದಲ ಬಾರಿಗೆ ಹೈಕೋರ್ಟ್‌ ಕಲಾಪಗಳ ಇತಿಹಾಸದಲ್ಲೇ ಹೊಸ ದಾಖಲೆ ಬರೆದರು. ಅವರು ಒಟ್ಟು 550ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಬುಧವಾರ (ಸೆಪ್ಟೆಂಬರ್ 2) ಬೆಳಿಗ್ಗೆ … Continued

ಡಿಜಿಟಲ್ ಹಣ ಪಾವತಿಯಲ್ಲಿ ಹೊಸ ದಾಖಲೆ ಸ್ಥಾಪಿಸಿದ ಯುಪಿಐ ; ಅಕ್ಟೋಬರ್‌ ತಿಂಗಳಲ್ಲಿ 20.70 ಶತಕೋಟಿ ವಹಿವಾಟು

ನವದೆಹಲಿ: ಭಾರತದ ಪ್ರಮುಖ ರಿಯಲ್-ಟೈಮ್ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI), ಅಕ್ಟೋಬರ್ 2025 ರಲ್ಲಿ 20.70 ಶತಕೋಟಿ ವಹಿವಾಟುಗಳನ್ನು (transactions) ದಾಖಲಿಸುವ ಮೂಲಕ ನೂತನ ಗರಿಷ್ಠ ಮಟ್ಟವನ್ನು ತಲುಪುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಯುಪಿಐ (UPI) ರಾಷ್ಟ್ರೀಯ ಪಾವತಿಗಳ ನಿಗಮದಿಂದ (NPCI) ನಿರ್ವಹಿಸಲ್ಪಡುತ್ತದೆ. ಈ ವಹಿವಾಟುಗಳು ಸೆಪ್ಟೆಂಬರ್‌ನಲ್ಲಿ ದಾಖಲಾದ 19.63 … Continued

ಒಂದೇ ದಿನದಲ್ಲಿ 1.06 ಕೋಟಿ ಲೀಟರ್ ಹಾಲು ಸಂಗ್ರಹ : ಕೆಎಂಎಫ್ ನಿಂದ ಹೊಸ ದಾಖಲೆ…!

ಬೆಂಗಳೂರು : ಕರ್ನಾಟಕ ಹಾಲು ಒಕ್ಕೂಟ ಒಂದೇ ದಿನ ಸಾರ್ವಕಾಲಿಕ ಗರಿಷ್ಠ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಮೇ 22 ರ ನಂತರ ಈ ದಾಖಲೆ ಸಾಧ್ಯವಾಗಿದ್ದು, ಅನುಕೂಲಕರವಾದ ಮುಂಗಾರು ಮಳೆ ಮತ್ತು ಹಸಿರು ಮೇವಿನ ಲಭ್ಯತೆಯ ಕಾರಣ ಈ ದಾಖಲೆ ಮಾಡಲು ಕೆಎಂಎಫ್‌ಗೆ ಸಾಧ್ಯವಾಗಿದೆ ಎಂದು ಹೇಳಲಾಗಿದೆ. … Continued

4 ಓವರ್‌ಗಳು, 4 ಮೇಡನ್‌ಗಳು, 3 ವಿಕೆಟ್‌ಗಳು…: T20 ವಿಶ್ವಕಪ್‌ ನಲ್ಲಿ ನೂತನ ದಾಖಲೆ ಸ್ಥಾಪಿಸಿದ ನ್ಯೂಜಿಲೆಂಡ್ ವೇಗದ ಬೌಲರ್‌…!

ನ್ಯೂಜಿಲೆಂಡ್ ವೇಗದ ಬೌಲರ್ ಲಾಕ್ ಫರ್ಗುಸನ್ ಪುರುಷರ T20 ವಿಶ್ವಕಪ್‌ನಲ್ಲಿ ನಾಲ್ಕಕ್ಕೆ ನಾಲ್ಕು ಮೇಡನ್ ಓವರ್‌ಗಳನ್ನು ಬೌಲ್ ಮಾಡಿದ ಮೊದಲ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ… ಸೋಮವಾರ, T20 ವಿಶ್ವಕಪ್‌ 2024 ರ ತನ್ನ ಕೊನೆಯ ಗುಂಪು-ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಪರವಾಗಿ ಬೌಲಿಂಗ್‌ ದಾಳಿಗೆ ಇಳಿದ ಲಾಕ್ ಫರ್ಗುಸನ್ ಅವರು ಪಪುವಾ ನ್ಯೂಗಿನಿ ವಿರುದ್ಧ … Continued

252 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರಥಮ ದರ್ಜೆ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ ಭಾರತದ ಆಟಗಾರ…!

ಶುಕ್ರವಾರ ಅರುಣಾಚಲ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟರ್ ತನ್ಮಯ ಅಗರ್ವಾಲ್ ಕೇವಲ 147 ಎಸೆತಗಳಲ್ಲಿ ತ್ರಿಶತಕ ಸಿಡಿಸುವ ಮೂಲಕ 252 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲಿ ಹೊಸ ದಾಖಲೆ ಮಾಡಿದ್ದಾರೆ. ತನ್ಮಯ ಅಗರ್ವಾಲ್ ಅವರ ಆಕರ್ಷಕ ಬ್ಯಾಟಿಂಗ್‌ನಿಂದಾಗಿ ಹೈದರಾಬಾದ್ ತಂಡವು ಕೇವಲ 48 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 529 ರನ್ ಗಳಿಸಿತು. … Continued

ಹೊಸ ದಾಖಲೆ : ಷೇರು ಮಾರುಕಟ್ಟೆಯಲ್ಲಿ ಸಂಕ್ರಾಂತಿ ಸಡಗರ; ಇದೇ ಮೊದಲ ಬಾರಿಗೆ 73,000ದ ಗಡಿ ದಾಟಿದ ಸೆನ್ಸೆಕ್ಸ್

ಮುಂಬೈ: ಸಂಕ್ರಾಂತಿ ಹಬ್ಬದ ದಿನದಂದು ಷೇರುಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 73,000ಕ್ಕೆ ಏರಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ದಾಖಲೆಯ ಮಟ್ಟಕ್ಕೇರಿದ್ದು, ಸೆನ್ಸೆಕ್ಸ್ ಮೊದಲ ಬಾರಿಗೆ 73,000 ಪಾಯಿಂಟ್ಸ್‌ ಗೆ ಏರಿದೆ ಗೇರಿದೆ. ನಿಫ್ಟಿ ಕೂಡ ಐತಿಹಾಸಿಕ 22,000-ಮಾರ್ಕ್ ಅನ್ನು ದಾಟಿತು. ಸೋಮವಾರದ ವಹಿವಾಟಿನಲ್ಲಿ ಐಟಿ ಷೇರುಗಳು ಗಣನೀಯ ಏರಿಕೆ ಕಂಡಿದೆ. … Continued

ವಿಶ್ವಕಪ್‌ನಲ್ಲಿ 4ನೇ ಬಾರಿಗೆ 5 ವಿಕೆಟ್ ಉರುಳಿಸಿ ಹೊಸ ದಾಖಲೆ ನಿರ್ಮಿಸಿದ ಮೊಹಮ್ಮದ್ ಶಮಿ

ಬುಧವಾರ ನಡೆದ ಐಸಿಸಿ 50 ಓವರ್‌ಗಳ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಈ ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿಗೆ 5 ವಿಕೆಟ್ ಕಬಳಿಸಿದರು. ವಿಶ್ವಕಪ್‌ನಲ್ಲಿ ತನ್ನ 4ನೇ ಸಲ 5-ವಿಕೆಟ್‌ಗಳ ಸಾಧನೆಯೊಂದಿಗೆ, ಶಮಿ ಏಕದಿನದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಮುರಿದರು. … Continued

ಮಾರ್ಚ್‌ನಲ್ಲಿ ಯುಪಿಐ ವಹಿವಾಟಿನಲ್ಲಿ 14 ಲಕ್ಷ ಕೋಟಿ ರೂ.ವರ್ಗಾವಣೆ: ಇದು ಹೊಸ ದಾಖಲೆ

ನವದೆಹಲಿ : ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಸಿಪಿಐ) ಮಾಹಿತಿ ಪ್ರಕಾರ, ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ವಹಿವಾಟುಗಳು ವರ್ಷದಿಂದ ವರ್ಷಕ್ಕೆ 60% ನಷ್ಟು ಹೆಚ್ಚಳವಾಗಿ ವಹಿವಾಟು ದಾಖಲೆಯ 8.7 ಶತಕೋಟಿಗೆ ಏರಿದೆ. ಮಾರ್ಚ್ 2023 ರಲ್ಲಿ 14.05 ಲಕ್ಷ ಕೋಟಿ ಮೌಲ್ಯದ ಅತ್ಯಧಿಕ ವಹಿವಾಟು ನಡೆದಿದೆ ಎಂದು ಹೇಳಿದೆ. ಮಾರ್ಚ್ 2022 … Continued