ಹೊಸ ದಾಖಲೆ : ಷೇರು ಮಾರುಕಟ್ಟೆಯಲ್ಲಿ ಸಂಕ್ರಾಂತಿ ಸಡಗರ; ಇದೇ ಮೊದಲ ಬಾರಿಗೆ 73,000ದ ಗಡಿ ದಾಟಿದ ಸೆನ್ಸೆಕ್ಸ್

ಮುಂಬೈ: ಸಂಕ್ರಾಂತಿ ಹಬ್ಬದ ದಿನದಂದು ಷೇರುಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 73,000ಕ್ಕೆ ಏರಿದೆ.
ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ದಾಖಲೆಯ ಮಟ್ಟಕ್ಕೇರಿದ್ದು, ಸೆನ್ಸೆಕ್ಸ್ ಮೊದಲ ಬಾರಿಗೆ 73,000 ಪಾಯಿಂಟ್ಸ್‌ ಗೆ ಏರಿದೆ ಗೇರಿದೆ. ನಿಫ್ಟಿ ಕೂಡ ಐತಿಹಾಸಿಕ 22,000-ಮಾರ್ಕ್ ಅನ್ನು ದಾಟಿತು.
ಸೋಮವಾರದ ವಹಿವಾಟಿನಲ್ಲಿ ಐಟಿ ಷೇರುಗಳು ಗಣನೀಯ ಏರಿಕೆ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 720.33 ಪಾಯಿಂಟ್‌ಗಳ ಜಿಗಿದು ಸಾರ್ವಕಾಲಿಕ ಗರಿಷ್ಠ 73,288.78 ಅನ್ನು ತಲುಪಿತು. ನಿಫ್ಟಿ ಕೂಡ 187.4 ಅಂಕಗಳ ಏರಿಕೆಯೊಂದಿಗೆ 22,000 ಅಂಕಗಳ ಗಡಿ ದಾಟುವ ಮೂಲಕ ಈವರೆಗಿನ ಗರಿಷ್ಠ 22,081.95 ಅಂಕಗಳನ್ನು ತಲುಪಿ ದಾಖಲೆ ನಿರ್ಮಿಸಿತು.

ಸೆನ್ಸೆಕ್ಸ್ ಸಂಸ್ಥೆಗಳಲ್ಲಿ ವಿಪ್ರೋ ಸಂಸ್ಥೆಯ ಷೇರುಗಳ ಮೌಲ್ಯ ಸುಮಾರು ಶೇ.11ರಷ್ಟು ಏರಿಕೆ ಕಂಡಿದೆ. ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಶೇರುಗಳು ಸಹ ಲಾಭಗಳಿಸಿದ ಪ್ರಮುಖ ಸಂಸ್ಥೆಗಳಾಗಿವೆ. ಆದರೆ ಹಿಂದುಸ್ತಾನ್ ಯೂನಿಲಿವರ್, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ ಮತ್ತು ಏಷ್ಯನ್ ಪೇಂಟ್ಸ್ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿತ ಕಂಡಿದೆ.

ಪ್ರಮುಖ ಸುದ್ದಿ :-   ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement