ಮಧ್ಯಪ್ರದೇಶದಲ್ಲಿ 28 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ, ಒಬಿಸಿಯ 11 ಮಂದಿಗೆ ಸ್ಥಾನ

ಭೋಪಾಲ: ಮಾಜಿ ಕೇಂದ್ರ ಸಚಿವ ಪ್ರಹ್ಲಾದ ಪಟೇಲ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ ವಿಜಯವರ್ಗಿಯ ಸೇರಿದಂತೆ 28 ಶಾಸಕರು ಸೋಮವಾರ ಮಧ್ಯಾಹ್ನ ಮಧ್ಯಪ್ರದೇಶದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಲ್ಲಿ 18 ಮಂದಿ ಕ್ಯಾಬಿನೆಟ್ ಸ್ಥಾನ ಪಡೆಯಲಿದ್ದಾರೆ ಹಾಗೂ ಇನ್ನುಳಿದ 10 ಮಂದಿ ಕಿರಿಯ ಸಚಿವರು ಅಥವಾ ರಾಜ್ಯ ಸಚಿವರಾಗಿರುತ್ತಾರೆ … Continued

ಮೊದಲ ದಿನವೇ ಮಹತ್ವದ ನಿರ್ಧಾರ : ಧಾರ್ಮಿಕ-ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ ನಿಷೇಧಿಸಿದ ಮಧ್ಯಪ್ರದೇಶದ ಸಿಎಂ

  ಭೋಪಾಲ್‌ : ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಮೋಹನ ಯಾದವ್ ಅವರು ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ ನಿಷೇಧಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ, ಅನಿಯಂತ್ರಿತ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ. ನಿಯಮಿತ ಮತ್ತು ನಿಯಂತ್ರಿತ (ಅನುಮತಿಸಬಹುದಾದ ಡೆಸಿಬಲ್) ಬಳಕೆಗೆ ಯಾವುದೇ ನಿರ್ಬಂಧವಿಲ್ಲ. … Continued

ಅರೇ ಮೋಹನಜೀ, ಖಡೇ ತೋ ಹೋ ಜಾಯಿಯೇ …: ಮಧ್ಯಪ್ರದೇಶದ ಸಿಎಂ ಸ್ಥಾನಕ್ಕೆ ಬಿಜೆಪಿ ಹೆಸರಿಸಿದ್ದು ಹೀಗೆ…

ಭೋಪಾಲ್‌ :ಮೋಹನ ಯಾದವ್ ಅವರು ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ ಪ್ರಕಟಿಸಿದೆ. ಈ ಘೋಷಣೆಯು ಮೋಹನ ಯಾದವ್ ಮತ್ತು ಇತರ ಬಿಜೆಪಿಯ ನಾಐಕರು ಸೇರಿದಂತೆ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ. ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ್ ಅವರು ಮೋಹನ ಯಾದವ್ ಅವರ ಹೆಸರನ್ನು ಘೋಷಿಸುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯ ಹೆಸರಿನ … Continued

ಬಿಜೆಪಿಯಿಂದ ಅಚ್ಚರಿಯ ಆಯ್ಕೆ : ಮೋಹನ ಯಾದವ್ ಮಧ್ಯಪ್ರದೇಶದ ನೂತನ ಸಿಎಂ

ಭೋಪಾಲ: ಅಚ್ಚರಿಯ ಆಯ್ಕೆಯಲ್ಲಿ ಬಿಜೆಪಿ ಹೈಕಮಾಂಡ್‌ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಯಾದವ್ (ಒಬಿಸಿ) ಸಮುದಾಯದ ನಾಯಕ ಮೋಹನ ಯಾದವ್ (58) ಅವರನ್ನು ಆಯ್ಕೆ ಮಾಡಿದೆ. ಮಧ್ಯಪ್ರದೇಶದಲ್ಲಿ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಇತರೆ ಹಿಂದುಳಿದ ವರ್ಗದವರು (ಒಬಿಸಿ) ಇದ್ದಾರೆ. ಆದರೆ, ಕುತೂಹಲಕಾರಿಯಾಗಿ ಯಾದವ ಸಮುದಾಯವು ಹೆಚ್ಚು ಪ್ರಭಾವಶಾಲಿಯಾಗಿಲ್ಲ. ಸೋಮವಾರ ಸಂಜೆ, ಮೋಹನ ಯಾದವ್ ಬಿಜೆಪಿಯ ಶಾಸಕಾಂಗ ಪಕ್ಷದ … Continued