ಮೊಬೈಲ್ ತಯಾರಕರಿಗೆ ಸಂಚಾರ ಸಾಥಿ ಆ್ಯಪ್ ಅಳವಡಿಕೆ ಕಡ್ಡಾಯ ಆದೇಶ ಹಿಂಪಡೆದ ಸರ್ಕಾರ

ನವದೆಹಲಿ:ಮೊಬೈಲ್ ತಯಾರಕರಿಗೆ ‘ಸಂಚಾರ ಸಾಥಿ’ (Sanchar Saathi) ಆ್ಯಪ್ ಅನ್ನು ಕಡ್ಡಾಯವಾಗಿ ಮೊದಲೇ ಅಳವಡಿಸುವ ಆದೇಶವನ್ನು ಕೇಂದ್ರ ಸರ್ಕಾರ ಬುಧವಾರ ಹಿಂಪಡೆದಿದೆ. ಬುಧವಾರ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ, ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರಾಂತ್ಯಗಳ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಸಾರ್ವಜನಿಕರ ಸಲಹೆ ಮತ್ತು ಪ್ರತಿಕ್ರಿಯೆಗಳ ಆಧಾರದ ಮೇಲೆ ಪ್ಲಾಟ್‌ಫಾರ್ಮ್‌ನ ನಿಯಮಗಳನ್ನು ತಿದ್ದುಪಡಿ … Continued

ಸಂಚಾರಿ ಆ್ಯಪ್ ಎಲ್ಲ ಮೊಬೈಲ್‌ ಗಳಿಗೂ ಕಡ್ಡಾಯವೇ? ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ

ನವದೆಹಲಿ: ‘ಸಂಚಾರ ಸಾಥಿ’ (Sanchar Saathi) ಅಪ್ಲಿಕೇಶನ್ ಬಳಕೆದಾರರಿಗೆ ಕಡ್ಡಾಯವಲ್ಲ, ಅದನ್ನು ಬಳಸಲು ಇಚ್ಛಿಸದೇ ಇದ್ದವರು ಅದನ್ನು ಡಿಲೀಟ್ ಮಾಡಬಹುದು ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಈ ಅಪ್ಲಿಕೇಶನ್ ಅನ್ನು ಮೊಬೈಲ್‌ಗಳಲ್ಲಿ ಮೊದಲೇ ಅಳವಡಿಸಲು (Pre-install) ಕೇಂದ್ರ ಸರ್ಕಾರ ನೀಡಿದ್ದ ನಿರ್ದೇಶನವು ಖಾಸಗಿತನ ಮತ್ತು ಸರ್ಕಾರದ ಕಣ್ಗಾವಲಿನ (State Surveillance)ಬಗ್ಗೆ ವಿಪಕ್ಷಗಳಿಂದ … Continued

ಎಲ್ಲ ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯ

ನವದೆಹಲಿ: ಭಾರತದ ದೂರಸಂಪರ್ಕ ಸಚಿವಾಲಯವು ಸ್ಮಾರ್ಟ್‌ಫೋನ್ ತಯಾರಕರಿಗೆ ‘ಸಂಚಾರ ಸಾಥಿ’ (Sanchar Saathi) ಎಂಬ ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಅಪ್ಲಿಕೇಶನ್ ಅನ್ನು ಎಲ್ಲಾ ಸಾಧನಗಳಲ್ಲಿ ಮೊದಲೇ ಅಳವಡಿಸಲು ಸೂಚಿಸಿದೆ. ದೂರಸಂಪರ್ಕ ಇಲಾಖೆ (DoT) ನವೆಂಬರ್ 28 ರಂದು ಈ ಕುರಿತು ನಿರ್ದೇಶನಗಳನ್ನು ಹೊರಡಿಸಿದೆ. ಇದರನ್ವಯ, ತಯಾರಕರಿಂದ ಮಾರಾಟವಾಗುವ ಎಲ್ಲಾ ಹೊಸ ಸಾಧನಗಳಲ್ಲಿ ‘ಸಂಚಾರ ಸಾಥಿ’ … Continued