ಶಿರೂರು ಗುಡ್ಡ ಕುಸಿತ | ನಾಪತ್ತೆಯಾದವರ ಹುಡುಕಾಟ ಮತ್ತಷ್ಟು ತೀವ್ರ ; ಟ್ರಕ್‌ ಸ್ಥಳ ನಿರ್ಧರಿಸಲು ಅಡ್ವಾನ್ಸ್ಡ್‌ ಡ್ರೋನ್ ಬಳಕೆ : ಮುಳುಗು ತಜ್ಞರಿಗೆ ನದಿಯ ಪ್ರವಾಹವೇ ಸವಾಲು

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ತಂಡಗಳು ಲಾರಿ ಗಂಗಾವಳಿ ನದಿಯಲ್ಲಿ ಇರುವುದರ ಬಗ್ಗೆ ಮತ್ತಷ್ಟು ಖಚಿತತೆ ವ್ಯಕ್ತಪಡಿಸಿವೆ. ಹೈರೆಸಲ್ಯೂಶನ್‌ ದ್ರೋಣ್ ಮೂಲಕ ಗುರುವಾರ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕ್ವಿಕ್ ಪೇ ಪ್ರೈವೇಟ್ ಲಿಮಿಟೆಡ್ ಆಪರೇಶನಲ್ ಸಲಹೆಗಾರ, ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ … Continued

ಶಿರೂರು ಗುಡ್ಡ ಕುಸಿತ | ರಾಡಾರ್ ಮೂಲಕ ಸಿಲುಕಿರುವವರ ಶೋಧ ಕಾರ್ಯ ಆರಂಭಿಸಿದ ತಜ್ಞರ ತಂಡ : ಕೇರಳದಿಂದ ಬಂದ ರಕ್ಷಣಾ ಪರಿಣಿತರು

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿರುವವನ್ನು ಪತ್ತೆಹಚ್ಚಲು ಸುರತ್ಕಲ್ ನಿಂದ ರಾಡಾರ್ ಯಂತ್ರದೊಂದಿಗೆ ಆಗಮಿಸಿರುವ ತಜ್ಞರ ತಂಡ ಪತ್ತೆಕಾರ್ಯ ನಡೆಸುತ್ತಿದೆ. ಅಲ್ಲದೆ, ಕೇರಳದಿಂದ ಆಗಮಿಸಿರುವ ಪರಿಣಿತ ರಕ್ಷಣಾ ಕಾರ್ಯಕರ್ತರ ತಂಡ ಕೂಡಾ ಈ ಪ್ರದೇಶದಲ್ಲಿ ವ್ಯಾಪಕ ಪರಿಶೀಲನೆ ನಡೆಸುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು … Continued

ಅಂಕೋಲಾ ; ಶಿರೂರು ಗುಡ್ಡ ಕುಸಿತದ ಸ್ಥಳದಲ್ಲಿ ಬೆಂಜ್ ಲಾರಿ, ಚಾಲಕನಿಗಾಗಿ ಹುಡುಕಾಟ

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಬೆಂಜ್ ಲಾರಿ ಮತ್ತು ಕೇರಳ ಕೋಝೀಕ್ಕೋಡ್ ನ ಚಾಲಕ ಅರ್ಜುನ್ ಪತ್ತೆಗಾಗಿ ಬಾಂಬ್ ನಿಷ್ಕ್ರೀಯ ಮೆಟಲ್ ಡಿಟೆಕ್ಟರ್‌ ಮೂಲಕ ಪತ್ತೆ ಕಾರ್ಯ ನಡೆದಿದೆ. ನೌಕಾ ಪಡೆ ಅಧಿಕಾರಿಗಳು , ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡ , ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ … Continued