ಸಂಸದ ಬಿವೈ ರಾಘವೇಂದ್ರ ಕಾರಿಗೆ ವಾಹನ ಡಿಕ್ಕಿ

ಶಿವಮೊಗ್ಗ : ಸಂಸದ ಬಿ.ವೈ. ರಾಘವೇಂದ್ರ ಅವರ ಇನ್ನೋವಾ ಕಾರಿಗೆ ಮತ್ತೊಂದು ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ನಡೆದಿದೆಎಂದು ವರದಿಯಾಗಿದೆ. ಅವರು ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ಲಭ್ಯವಾದ ಮಾಹಿತಿ ಪ್ರಕಾರ, ಕುಂಚೇನಹಳ್ಳಿ ಗ್ರಾಮದ ಸಮೀಪ ಸಂಸದ ರಾಘವೇಂದ್ರ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಮುಂದಿದ್ದ ಕಾರಿನ ಎಸ್ಕಾರ್ಟ್ … Continued

ಶಿವಮೊಗ್ಗ | ಖ್ಯಾತ ಸ್ತ್ರೀರೋಗ ತಜ್ಞೆ-ಪುತ್ರ ಆತ್ಮಹತ್ಯೆ

ಶಿವಮೊಗ್ಗ : ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಹೊಮ್ಮರಡಿ ಹಾಗೂ ಅವರ ಪುತ್ರ ಆಕಾಶ ಹೊಮ್ಮರಡಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ನಗರದ ಅಶ್ವತ್ಥ ಬಡಾವಣೆಯ ಅವರ ಮನೆಯಲ್ಲಿ ಘಟನೆ ನಡೆದಿದ್ದು, ತಾಯಿ ಮತ್ತು ಮಗ ಇಬ್ಬರೂ ಪ್ರತ್ಯೇಕ ಕೋಣೆಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಡಾ. ಜಯಶ್ರೀ … Continued

ಶಿವಮೊಗ್ಗ | ಹೋರಿ ಬೆದರಿಸುವ ಸ್ಪರ್ಧೆ ವೇಳೆ ಮಾಜಿ ಶಾಸಕನಿಗೆ ತಿವಿದ ಹೋರಿ; ಆಘಾತಕಾರಿ ವೀಡಿಯೊ ವೈರಲ್‌

ಶಿವಮೊಗ್ಗ: ದೀಪಾವಳಿ ಹಬ್ಬದಂದು ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮಾಜಿ ಶಾಸಕರೊಬ್ಬರಿಗೆ ಹೋರಿಯೊಂದು ತಿವಿದಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಎರಡು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿ ಸಾಂಪ್ರಾದಾಯಿಕ ಗ್ರಾಮೀಣ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯನ್ನು ವೀಕ್ಷಿಸಲು ಶಿಕಾರಿಪುರದ ಮಾಜಿ ಶಾಸಕ ಮಹಾಲಿಂಗಪ್ಪ ತೆರಳಿದ್ದರು. ಹೋರಿ ಬೆದರಿಸುವ ಸ್ಪರ್ಧೆ … Continued

ಗಂಗಾಧರ ಕೊಳಗಿಗೆ ರೇವಣಸಿದ್ದೇಶ್ವರ ಸದ್ಭಾವನಾ ಪ್ರಶಸ್ತಿ ಪ್ರದಾನ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ದುಗ್ಲಿ ಶ್ರೀ ಮಠದಲ್ಲಿ ಮಹಾ ನವಮಿ (ಅಕ್ಟೊಬರ್ 1)ಯಂದು ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ಹಾಗೂ ಲೇಖಕ ಗಂಗಾಧರ ಕೊಳಗಿ ಅವರಿಗೆ ಶ್ರೀ ರೇವಣಸಿದ್ದೇಶ್ವರ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಿದರು. ಮಾಜಿ ಶಾಸಕ ವಿ. … Continued

ಶಿವಮೊಗ್ಗ: ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಶಿವಮೊಗ್ಗ: ತಾಯಿಯೇ ಮಗಳನ್ನು ಕೊಂದ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ನರ್ಸ್ ಕ್ವಾರ್ಟಸ್​ನಲ್ಲಿ ನಡೆದಿದೆ ಎಂದು ಶುಕ್ರವಾರ ವರದಿಯಾಗಿದೆ. ಮೆಗ್ಗಾನ್ ಆಸ್ಪತ್ರೆಯ ಲ್ಯಾಬ್​ನ ಟೆಕ್ನಿಷಿಯನ್ ಆಗಿರುವ ರಾಮಣ್ಣ ಎಂಬವರ ಪತ್ನಿ ಶೃತಿ(38) ತನ್ನ 11 ವರ್ಷದ ಮಗಳ ತಲೆಗೆ ಹೊಡೆದು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮೃತ … Continued

ಕಾರು-ಬೈಕ್‌ ಡಿಕ್ಕಿ ; ಮದುವೆ ನಿಶ್ಚಯವಾಗಿದ್ದ ಇಬ್ಬರು ಸಾವು

ಶಿವಮೊಗ್ಗ: ಸದ್ಯದಲ್ಲಿಯೇ ಮದುವೆಯಾಗಬೇಕಿದ್ದ ಜೋಡಿ ಕಾರು ಹಾಗೂ ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಮದುವೆ ನಿಶ್ಚಯವಾಗಿದ್ದ ಜೋಡಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ (Shivamogga) ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ಶಿಕಾರಿಪುರ ತಾಲೂಕಿನ ಮಟ್ಟಿಕೊಪ್ಪ ಗ್ರಾಮದ ರೇಖಾ (20) ಹಾಗೂ ಗಂಗೊಳ್ಳಿ ಗ್ರಾಮದ ಬಸವನಗೌಡ ದ್ಯಾಮನಗೌಡ (25) ಎಂಬವರು ಅಪಘಾತದಲ್ಲಿ … Continued

ತುಂಗಾ ನದಿ ಸೇತುವೆ ಮೇಲೆ ಕಳಚಿದ ರೈಲು ಬೋಗಿಗಳು

ಶಿವಮೊಗ್ಗ: ತುಂಗಾ ನದಿ ಸೇತುವೆಯ ಮೇಲೆ ತಾಳಗುಪ್ಪ-ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲಿನ ಆರು ಬೋಗಿಗಳು ಎಂಜಿನಿಂದ ಬೇರ್ಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿದೆ. 16 ಬೋಗಿಗಳನ್ನು ಒಳಗೊಂಡ ರೈಲು ತಾಳಗುಪ್ಪದಿಂದ ಮೈಸೂರಿಗೆ ಹೋಗುತ್ತಿದ್ದಾಗ ಬೋಗಿಗಳ ನಡುವಿನ ಸಂಪರ್ಕ ಕೊಂಡಿ ಕಳಚಿದ್ದರಿಂದ ಆರು … Continued

‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ..ʼ ; ಹನುಮಂತ ದೇವರ ಕಾರ್ಣಿಕ : ಇದರ ಅರ್ಥವೇನು..?

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಶ್ರಾವಣ ಮಾಸದ ನಾಗರ ಪಂಚಮಿಯಂದು ನಡೆದ ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ “ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ, ಎಚ್ಚರ” ಎಂದು ಕಾರ್ಣಿಕ ನುಡಿಯಲಾಗಿದೆ. ಮಂಗಳವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ಹನುಮಂತ ದೇವರನ್ನು ಮೈಮೇಲೆ ಆಹ್ವಾನ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ … Continued

ಶಿವಮೊಗ್ಗದ ಕೇಂದ್ರ ಕಾರಾಗೃಹದ ಕೈದಿಯ ಹೊಟ್ಟೆಯಲ್ಲಿ ಮೊಬೈಲ್ ಪತ್ತೆ…!

ಶಿವಮೊಗ್ಗ : ನಗರದ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಯೊಬ್ಬ ಮೊಬೈಲ್ ಫೋನ್ ನುಂಗಿದ್ದು, ಅದನ್ನು ಜುಲೈ ೮ರಂದು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಬಳಿಕ ಮೊಬೈಲ್ ಅನ್ನು ಜೈಲು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ದೌಲತ್ ಅಲಿಯಾಸ್ ಗುಂಡ (30) ಎಂಬ ಕೈದಿಯ ಹೊಟ್ಟೆಯಲ್ಲಿ ಮೂರು ಇಂಚು ಉದ್ದದ ಒಂದು ಇಂಚು ಅಗಲದ ಮೊಬೈಲ್ ಫೋನ್ ಪತ್ತೆಯಾಗಿದೆ. ಪ್ರಕರಣವೊಂದರಲ್ಲಿ ದೌಲತ್‌ಗೆ … Continued

ಮೈಯಲ್ಲಿ ಹೊಕ್ಕಿದ್ದ ದೆವ್ವ ಬಿಡಿಸಲು ಥಳಿತ ; ಮಹಿಳೆ ಸಾವು

ಶಿವಮೊಗ್ಗ: ಮಹಿಳೆಯ ಮೈಯಲ್ಲಿ ದೆವ್ವ (devil) ಹೊಕ್ಕಿದೆ ಎಂದು ಭಾವಿಸಿ ಮನಸೋ ಇಚ್ಛೆ ಥಳಿಸಿದ್ದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಮಹಿಳೆಯನ್ನು ಗೀತಮ್ಮ(53) ಎಂದು ಗುರುತಿಸಲಾಗಿದೆ. ಮೈಯಲ್ಲಿ ದೆವ್ವವಿದೆ ಎಂದು ಬಿಡಿಸುವ ನೆಪದಲ್ಲಿ ಗೀತಮ್ಮ ಅವರಿಗೆ ಥಳಿಸಿದ ಆಶಾ ಳನ್ನು … Continued