ಟೂಲ್‌ಕಿಟ್‌ ಪ್ರಕರಣ: ದಿಶಾ ರವಿಗೆ ಎಫ್‌ಐಆರ್‌ ಪ್ರತಿ ನೀಡಲು ಕೋರ್ಟ್‌ ಸೂಚನೆ, ಕುಟುಂಬ, ವಕೀಲರ ಜೊತೆ ಮಾತನಾಡಲು ಅನುಮತಿ

ರೈತರಿಗೆ ಸೋಷಿಯಲ್ ಮೀಡಿಯಾದಲ್ಲಿ “ಟೂಲ್ಕಿಟ್” ಹಂಚಿಕೊಳ್ಳುವಲ್ಲಿ ಭಾಗಿಯಾಗಿದ್ದಾಳೆ ಎಂಬ ಆರೋಪದಡಿ 21 ವರ್ಷದ ದಿಶಾ ರವಿ ಅವರ ಬಂಧನಕ್ಕೆ ಸಂಬಂಧಿಸಿದ ಎಫ್ಐಆರ್ ಮತ್ತು ಇತರ ದಾಖಲೆಗಳ ಪ್ರತಿಯನ್ನು ಹಸ್ತಾಂತರಿಸುವಂತೆ ನ್ಯಾಯಾಲಯ ಮಂಗಳವಾರ ದೆಹಲಿ ಪೊಲೀಸರಿಗೆ ಸೂಚಿಸಿದೆ. ‘ ಅವಳ ಕುಟುಂಬದೊಂದಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದೆ. ಎಫ್‌ಐಆರ್ ಜೊತೆಗೆ, ಬಂಧನ ಜ್ಞಾಪಕ ಪತ್ರ ಮತ್ತು ರಿಮಾಂಡ್ ಕಾಗದದ … Continued

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಿಕಿತಾ ಜೇಕಬ್‌

ಟೂಲ್‌ಕಿಟ್‌ ರಚನೆ ಕುರಿತು ನಿಕಿತಾ ಜೇಕಬ್‌ ಹಾಗೂ ಶಾಂತನು ವಿರುದ್ದ ಜಾಮೀನು ರಹಿತ ವಾರಂಟ್‌ ಹೊರಡಿಸಿದ ಹಿನ್ನೆಲೆಯಲ್ಲಿ ವಕೀಲರಾದ ನಿಕಿತಾ ನಾಲ್ಕು ವಾರಗಳ ನಿರೀಕ್ಷಣಾ ಜಾಮೀನು ಜಾಮೀನು ಕೋರಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದಿಶಾ ರವಿ ಬಂಧನಕ್ಕೊಳಗಾದ ೧ ದಿನದ ನಂತರ ದೆಹಲಿ ಪೊಲೀಸರು ರೈತರ ಪ್ರತಿಭಟನೆ ಕುರಿತ ಟೂಲ್‌ಕಿಟ್‌ ರಚನೆ ಆರೋಪ … Continued

ಟೂಲ್‌ಕಿಟ್‌ ಹಂಚಿಕೆ ಆರೋಪ ಇಬ್ಬರ ವಿರುದ್ಧ ವಾರಂಟ್‌

ಟೂಲ್‌ಕಿಟ್‌ ಹಂಚಿಕೆ ಕುರಿತು ದಿಶಾ ರವಿ ಬಂಧನದ ಮರುದಿನ ದೆಹಲಿ ಪೊಲೀಸರು ಇಬ್ಬರ ವಿರುದ್ಧ ಜಾಮೀನುರಹಿತ ವಾರಂಟ್‌ ಹೊರಡಿಸಿದ್ದಾರೆ. ನಿಕಿತಾ ಜೇಕಬ್‌ ಹಾಗೂ ಶಾಂತನು ವಿರುದ್ಧ ವಾರಂಟ್‌ ಹೊರಡಿಸಲಾಗಿದೆ. ಶೀಘ್ರದಲ್ಲೇ ಇಬ್ಬರನ್ನೂ ಬಂಧಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇಬ್ಬರೂ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಪಾಲ್ಗೊಂಡಿದ್ದಾರೆ. ಖಲಿಸ್ತಾನ ಪರ ವ್ಯಕ್ತಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. … Continued

ಟೂಲ್‌ಕಿಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯುವತಿ ಬಂಧನ

ನೂತನ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಪ್ರತಿಭಟನೆಯ “ಟೂಲ್ ಕಿಟ್‌ʼ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ೨೧ ವರ್ಷದ ಪರಿಸರ ಕಾರ್ಯಕರ್ತೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ನ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಫ್ರೈಡೇಸ್‌ ಫಾರ್‌ ಫ್ಯೂಚರ್‌ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ದಿಶಾ ರವಿ ಬಂಧಿತ ಯುವತಿ. ಇವರು ಟೂಲ್‌ಕಿಟ್‌ ಅನ್ನು ಸಂಪಾದಿಸಿದ್ದಲ್ಲದೇ ಅದನ್ನು … Continued